ಬೆಂಗಳೂರು :- ಸ್ತನ ಕ್ಯಾನ್ಸರ್, ಇಂದಿನ ಮಹಿಳೆಯರಿಗೆ ಕಾಡುವ ಅತ್ಯಂತ ಮಾರಕ ಕಾಯಿಲೆಗಳಲ್ಲೊಂದು. ಈ ಕಾಯಿಲೆಯಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಇಂದಿನ ಯುಗದಲ್ಲಿ ಹೆಚ್ಚಿದೆ. ಹೀಗಾಗಿ ಹೊಸದಾಗಿ ಥರ್ಮಾಲ್ ಮ್ಯಾಮೋಗ್ರಾಫಿ ಮೂಲಕ ಚಿಕಿತ್ಸೆ ನೀಡಲು ಬಿ.ಎಂ.ಎಸ್. ಆಸ್ಪತ್ರೆ ಸಜ್ಜಾಗಿದ್ದು, ಥರ್ಮಾಲ್ ಮ್ಯಾಮೋಗ್ರಾಫಿಯ ಯಂತ್ರವನ್ನು ಇಂದು ಪರಿಚಯಿಸಲಾಗಿದೆ. ಇಂದು ಬಿ.ಎಂ.ಎಸ್. ಅಸ್ಪತ್ರೆಯ ಆವರಣದಲ್ಲಿ ಸರಳ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಅಸ್ಪತ್ರೆಯ ಆಡಳಿತ, ರೋಗದಿಂದ ಗುಣಮುಕ್ತರಾಗುವುದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್ ಅತಿಥಿಯಾಗಿ ಭಾಗಿಯಾಗಿದ್ದು, ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಮಹಿಳೆಯರು ಹೆದರಬಾರದು. ಇದಕ್ಕಾಗಿ ಅಧುನಿಕವಾಗಿ ಥರ್ಮಾಲ್ ಮ್ಯಾಮೋಗ್ರಾಫಿ ಪರಿಚಯವಾಗಿದ್ದು ಇದರ ಸದ್ಭಳಕೆ ಮಾಡಿಕೊಳ್ಳಿ ಎಂಬ ಕಿವಿ ಮಾತು ಹೇಳಿದ್ರು. ಇನ್ನು ನೂತನವಾಗಿ ಪರಿಚಯವಾಗಿರುವ ಥರ್ಮಾಲ್ ಮ್ಯಾಮೋಗ್ರಾಫಿಯ ಮೂಲಕ ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚಬಹುದಾಗಿದೆ. ಇತ್ತ ಯಾರು ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುತ್ತಾರೋ ಅಂತಹವರು ಥರ್ಮಾಲ್ ಮ್ಯಾಮೋಗ್ರಾಫಿ ಟ್ರೀಟ್ ಮೆಂಟ್ ಪಡೆದುಕೊಂಡರೆ, ಅವರಿಗೆ ಕಾಯಿಲೆಯಿಂದ ಬೇಗ ಮುಕ್ತಿ ಸಿಗಲಿದೆ. ಇದಕ್ಕೆ ತೆಗಲುವ ವೆಚ್ಚವು ಬಹಳ ಕಡಿಮೆಯಾಗಿದ್ದು, ನೋವುರಹಿತ, ಸ್ಪರ್ಶರಹಿತ, ಹಾನಿಕಾರಕ ವಿಕಿರಣಗಳನ್ನು ಹೊರಹಾಕದೇ, ಎಲ್ಲಾ ವಯಸ್ಸಿನ ಮಹಿಳೆಯರು ಥರ್ಮಾಲ್ ಮ್ಯಾಮೋಗ್ರಾಫಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ತುತ್ತಾಗಿರುವ ರೋಗಿಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಇಂದು ಹೊಸ ಮಾದರಿಯ ಥರ್ಮಾಲ್ ಮ್ಯಾಮೋಗ್ರಾಫಿ ಪರಿಚಯವಾಗಿದ್ದು, ಯಾವುದೇ ಮಹಿಳೆಯರು ಸ್ತನ ಕ್ಯಾನ್ಸರ್ ತೊಂದರೆಯಿಂದ ಬಳಲುತ್ತಿದ್ರೆ, ಬಿ.ಎಂ.ಎಸ್. ಆಸ್ಪತ್ರೆ ಗೆ ಬಂದು ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಬಹುದು.
ನಮ್ಮ ವಿಳಾಸ :-
ಬಿ.ಎಂ.ಎಸ್. ಆಸ್ಪತ್ರೆ.
ದೊಡ್ಡ ಗಣಪತಿ ದೇವಾಲಯದ ಬಳಿ.
ಬಿ.ಎಂ. ಎಸ್. ತಾಂತ್ರಿಕ ಕಾಲೇಜು ಎದುರು.
ಬಸವನಗುಡಿ. ಬೆಂಗಳೂರು. 560004.
No comments:
Post a Comment