Monday 29 July 2019

*ಮೆಗಾ ವಿಜ್ಞಾನ ಸಮಾಗಮಕ್ಕೆ ಚಾಲನೆ*


_- ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಆರಂಭ_
_- ಎರಡು ತಿಂಗಳ ಕಾಲ ನಡೆಯಲಿರುವ ವಿಜ್ಞಾನ ಪ್ರದರ್ಶನ_
_- ಜಾಗತಿಕ ಮಟ್ಟದ ವಿಜ್ಞಾನ ಯೋಜನೆಗಳ ಅನಾವರಣ_
_-ವಿಶ್ವದ ಪ್ರತಿಷ್ಠಿತ ವಿಜ್ಞಾನ ಯೋಜನೆಗಳಿಗೆ ಭಾರತದ ಕೊಡುಗೆಯ ಪ್ರದರ್ಶನ_

*ಜುಲೈ 29, 2019*: ವಿಶ್ವದ ಪ್ರಮುಖ ಮೆಗಾ-ವಿಜ್ಞಾನ ಯೋಜನೆಗಳನ್ನು ಒಟ್ಟಿಗೆ ಸೇರಿಸುವ ಭಾರತದ ಮೊದಲ ಮೆಗಾ –ವಿಜ್ಞಾನ ಪ್ರದರ್ಶನ `ವಿಜ್ಞಾನ ಸಮಾಗಮ’ಕ್ಕೆ ಇಂದು ಚಾಲನೆ ನೀಡಲಾಯಿತು. ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ನಡೆದ ಈ ಸಮಾರಂಭದಲ್ಲಿ ವಿಜ್ಞಾನ, ಕೈಗಾರಿಕೆ ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಗಣ್ಯರು ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪರಮಾಣು ಶಕ್ತಿ ಆಯೋಗದ ಸದಸ್ಯ & ಅಧ್ಯಕ್ಷ, ಆರ್‍ಜಿಎಸ್‍ಟಿಸಿ, ಮುಂಬೈನ ಡಾ.ಅನಿಲ್ ಕಾಕೊಡ್ಕರ್ ಅವರು ಈ ವಿಜ್ಞಾನ ಸಮಾಗಮವನ್ನು ಉದ್ಘಾಟಿಸಿದರು. ಈ ಮೆಗಾ ವಿಜ್ಞಾನ ಸಮಾಗಮವು 2019 ರ ಸೆಪ್ಟಂಬರ್ 28 ರವರೆಗೆ ನಡೆಯಲಿದೆ.
ಈ ವಿಜ್ಞಾನ ಸಮಾಗಮವು ಮುಂಬೈ, ಬೆಂಗಳೂರು, ಕೊಲ್ಕತ್ತಾ ಮತ್ತು ನವದೆಹಲಿಯಲ್ಲಿ ನಡೆಯುತ್ತಿದೆ. ಬೆಂಗಳೂರಿಗೆ ಇದು ಎರಡನೇ ಸರಣಿಯ ಪ್ರದರ್ಶನವಾಗಿದೆ.

11 ತಿಂಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆ 2019 ರ ಮೇನಲ್ಲಿ ಮುಂಬೈನಲ್ಲಿ ಇದಕ್ಕೆ ಚಾಲನೆ ನೀಡಲಾಗಿತ್ತು.
ಪರಮಾಣು ಶಕ್ತಿ ಇಲಾಖೆ(ಡಿಎಇ), ಮುಂಬೈ ಮತ್ತು ಹೊಸ ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್‍ಟಿ) ಹಾಗೂ ಕೋಲ್ಕತ್ತಾದ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ(ಎನ್‍ಸಿಎಸ್‍ಎಂ) ಸಹಯೋಗದಲ್ಲಿ `ವಿಜ್ಞಾನ ಸಮಾಗಮ- ಮೆಗಾ ವಿಜ್ಞಾನ ಪ್ರದರ್ಶನ’ ವನ್ನು ಆಯೋಜಿಸಲಾಗಿದೆ.

ಈ ವಿಜ್ಞಾನ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಅನಿಲ್ ಕಾಕೊಡ್ಕರ್ ಅವರು, ``ಈ ಪ್ರದರ್ಶನವನ್ನು ಏರ್ಪಡಿಸಿರುವುದಕ್ಕೆ ಸಂತಸವೆನಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಇಂತಹ ಮೆಗಾ ವಿಜ್ಞಾನ ಯೋಜನೆಗಳ ಪಾತ್ರಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕಾದ ಅಗತ್ಯವಿದೆ. ರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮಥ್ರ್ಯಗಳಿಗೆ ಪ್ರಯೋಜನವಾಗಲಿದೆ. ಈ ಮೆಗಾ ವಿಜ್ಞಾನ ಸಮಾಗಮದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ಉದ್ದಿಮೆಗಳು ಸಕ್ರಿಯವಾಗಿ ಪಾಲ್ಗೊಂಡು ಇದರ ಸದುಪಯೋಗಪಡಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಹೆಚ್ಚು ಪ್ರಮುಖವಾಗಿ ಪ್ರಚಾರ ಮಾಡಬೇಕಾದ ಅಗತ್ಯವಿದೆ.

ಬೆಂಗಳೂರಿನ ಎನ್‍ಐಎಎಸ್‍ನ ನಿದೇರ್ಶಕ ಮತ್ತು ಡಿಎಸ್‍ಟಿಯ ಮಾಜಿ ಕಾರ್ಯದರ್ಶಿ ಪ್ರೊಫೆಸರ್ ಪ್ರೊ.ವಿ.ಎಸ್.ರಾಮಮೂರ್ತಿ ಅವರು ಮಾತನಾಡಿ, ``ಇತ್ತೀಚಿನ ದಶಕಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮಥ್ರ್ಯಗಳಲ್ಲಿ ಭಾರತ ಅಭೂತಪೂರ್ವವಾದ ಸಾಧನೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಅಂದರೆ, ಇಂತಹ ಮೆಗಾ-ವಿಜ್ಞಾನ ಸಹಯೋಗಗಳಿಗೆ ಸಾಕಷ್ಟು ಉತ್ತೇಜನಗಳನ್ನು ನೀಡುತ್ತಿದೆ. ಈ ವಿಜ್ಞಾನ ಸಮಾಗಮವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ ಎಂಬ ವಿಶ್ವಾಸ ನನಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂಬ ವಿಶ್ವಾಸವೂ ನನಗಿದೆ’’ ಎಂದು ತಿಳಿಸಿದರು.

ಡಿಎಇಯ ನ್ಯೂಕ್ಲಿಯರ್ ಕಂಟ್ರೋಲ್ಸ್ ಅಂಡ್ ಪ್ಲಾನಿಂಗ್ ವಿಂಗ್(ಎನ್‍ಸಿಪಿಡಬ್ಲ್ಯೂ) ಮುಖ್ಯಸ್ಥ ಮತ್ತು ವಿಜ್ಞಾನ ಸಮಾಗಮದ ಸಮಿತಿಯ ಅಧ್ಯಕ್ಷ ರಣಜಿತ್ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೆಗಾ-ಸೈನ್ಸ್ ಮತ್ತು ಇನ್‍ಸ್ಪೈರ್ ವಿಭಾಗಗಳ ಮುಖ್ಯಸ್ಥರಾದ ಡಾ.ಪ್ರವೀಣ್ ಆಸ್ಥಾನ, ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂನ ನಿರ್ದೇಶಕ ಮದನ್ ಗೋಪಾಲ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊಫೆಸರ್ ಅಶುತೋಶ್ ಶರ್ಮಾ ಅವರು ವಿಡೀಯೋ ಕಾನ್‍ಫರೆನ್ಸ್ ಮೂಲಕ ಸಭಿಕರನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವಿಜ್ಞಾನ ಸಮಾಗಮಕ್ಕೆ ಶುಭ ಕೋರಿದರು. ಈ ಮೆಗಾ ವಿಜ್ಞಾನ ಸಮಾಗಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಶ್ರಮಿಸಿರುವ ತಂಡದ ಕರ್ತವ್ಯವನ್ನು ಶ್ಲಾಘಿಸಿದರು.
ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂಸ್ ಪರವಾಗಿ ಪಾಲ್ಗೊಂಡಿದ್ದ ಶಿವಪ್ರಸಾದ್ ಎಂ.ಖೆನದ್ ಅವರು, ಈ ಪ್ರದರ್ಶನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಿಶ್ವದ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವುದನ್ನು ಈ ವಿಜ್ಞಾನ ಸಮಾಗಮ ತೋರಿಸಿಕೊಡುತ್ತಿದೆ ಮತ್ತು ವಿಶ್ವದ ಹಲವಾರು ವಿಜ್ಞಾನ ಯೋಜನೆಗಳಲ್ಲಿ ಭಾರತೀಯ ವಿಜ್ಞಾನಿಗಳು ಸಕ್ರಿಯವಾಗಿರುವುದನ್ನು ಹೊರ ಜಗತ್ತಿದೆ ತೋರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವಿಜ್ಞಾನ ಸಮಾಗಮದ ಪ್ರಮುಖ ಕಾರ್ಯಕ್ರಮಗಳನ್ನು ವೆಬ್‍ಸೈಟ್ www.vigyansamagam.in ಮತ್ತು ಮೊಬೈಲ್ ಆ್ಯಪ್  ಇವುಗಳಲ್ಲಿಯೂ ವೀಕ್ಷಿಸಬಹುದಾಗಿದೆ. ಅಲ್ಲದೇ, ಬೆಂಗಳೂರಿನ ವಿಐಟಿಎಂನ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‍ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‍ಗಳಲ್ಲಿಯೂ ಲಭ್ಯವಿದೆ.

ಈ ವಿಜ್ಞಾನ ಸಮಾಗಮ ಶನಿವಾರ, ಭಾನುವಾರ ಮತ್ತು ರಜಾ ದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿಯೂ ವೀಕ್ಷಣೆಗೆ ಲಭ್ಯವಿದ್ದು, ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಿಸಬಹುದು.

No comments:

Post a Comment