Tuesday 27 August 2019

ಕುಮಾರ ರಕ್ಷಾ" ಆಂಬ್ಯೂಲೆನ್ಸ್‌ ರವಾನೆ* • ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ


*ಪ್ರವಾಹ ಪೀಡಿತರ ಅನುಕೂಲಕ್ಕಾಗಿ ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ ಬಿ.ಎಂ ಉಮೇಶ್‌ ಕುಮಾರ್‌ರಿಂದ "ಕುಮಾರ ರಕ್ಷಾ" ಆಂಬ್ಯೂಲೆನ್ಸ್‌ ರವಾನೆ*
• ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ                                         * ವಿಧಾನ ಪರಿಷತ್‌ ಸದಸ್ಯರಾದ ಟಿ ಎ ಶರವಣ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ

ಬೆಂಗಳೂರು ಆಗಸ್ಟ್‌ 27: ಉತ್ತರ ಕರ್ನಾಟಕದದಲ್ಲಿ ನೆರೆಯಿಂದ ಜನರಿಗೆ ಆಗಿರುವ ಆರೋಗ್ಯ ಸಮಸ್ಯೆಗೆ ಉಚಿತವಾಗಿ ಚಿಕಿತ್ಸೆ ನೀಡುವ ಕುಮಾರ ರಕ್ಷಾ ಆಂಬ್ಯುಲೆನ್ಸನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡ ಅವರು ಚಾಲನೆ ನೀಡಿದಿದರು.

ವಿಧಾನ ಪರಿಷತ್‌ ಸದಸ್ಯರಾದ ಟಿ.ಎ ಶರವಣ ಅವರ ಹುಟ್ಟುಹಬ್ಬದ ಪ್ರಯುಕ್ತ, ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ ಬಿ.ಎಂ ಉಮೇಶ್‌ ಕುಮಾರ್‌ “ಕುಮಾರ ರಕ್ಷಾ” ಎಂಬ ವೈದ್ಯಕೀಯ ಸೌಲಭ್ಯವುಳ್ಳ ವಾಹನವನ್ನು ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರವಾಹ ಪೀಡಿತರ ಅನುಕೂಲಕ್ಕಾಗಿ ಕಳುಹಿಸಿಕೊಡಲಾಯಿತು.

ನೆರವಿನ ವಾಹನಕ್ಕೆ ಜೆ.ಡಿ.ಎಸ್ ವರಿಷ್ಠ ಮಾನ್ಯ ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ H.D. ದೇವೇಗೌಡರು ಚಾಲನೆ ನೀಡಿ ಮಾತನಾಡಿದರು ನೆರೆ ಸಂತ್ರಸ್ತರಿಗೆ ನೆರವಾಗುತ್ತಿರುವ ಕಾರ್ಯ ಶ್ಲಾಘನೀಯ.  ಉತ್ತರ ಕರ್ನಾಟಕದ ಜನರಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ಸೇವಾ ಕಾರ್ಯ ನಿರಂತರವಾಗಿರಲಿ ಉನ್ನತ ಸ್ಥಾನಕ್ಕೇರಲಿ ಎಂದು ದೇವೇಗೌಡರು ಆಶಿಸಿದರು.

ಸದರಿ ಕುಮಾರ ರಕ್ಷಾ ವಾಹನದಲ್ಲಿ ನೆರೆಯಲ್ಲಿ ಕಂಗಾಲಾಗಿರುವ ಕುಟುಂಬಗಳಿಗೆ ಔಷಧಿ ಅಗತ್ಯವಿರುವಂತಹ ಹೊದಿಗೆ, ಛತ್ರಿ, ಬ್ರೆಡ್ಡು, ಬಿಸ್ಕತ್ತು, ಊಟ ತಿಂಡಿ, ಕುಡಿಯುವ ನೀರು, ಟಾರ್ಚು,  ಚಪಾತಿ ಹಾಗೂ ಇನ್ನಿತರೆ ಅವಶ್ಯ ಸಾಮಗ್ರಿಗಳನ್ನು  ಕಳುಹಿಸಿ ಕೊಡಲಾಗಿದೆ. ಈ ವಾಹನಗಳ ಜೊತೆ ಸುಮಾರು 15 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರನ್ನು ಸೂಕ್ತವಾದ ಮಾರ್ಗದರ್ಶನ ನೀಡಿ ಸೇವೆಯನ್ನು ಮಾಡಲು ಕಳುಹಿಸಿಕೊಡಲಾಗಿದೆ ಉಮೇಶ್ ರವರು ತಮ್ಮ ಸ್ವಂತ  ವೆಚ್ಚದಿಂದ  ವಿನಿಯೋಗಿಸುತ್ತಿದ್ದಾರೆ.
"ಪರೋಪಕಾರಾರ್ಥಂ ಇದಂ ಶರೀರಂ" ಎನ್ನುವ ಸಂಸ್ಕೃತ ಉಕ್ತಿಗನುಗುಣವಾಗಿ ಸಂಕಷ್ಟದಲ್ಲಿರುವವರ ಸೇವೆಗೆ ಸದಾ ಸ್ಪಂದಿಸುತ್ತಿದ್ದಾರೆ.

No comments:

Post a Comment