Wednesday 28 August 2019

ಪ್ರಶಂಸನೀಯ ಕರ್ತವ್ಯ ನಿರ್ವಹಿಸಿದ ಬಗ್ಗೆ ವರದಿ.

ಶ್ರೀ ಪವನಕುಮಾರ್ ಟಿ ಎಸ್, ಬಿ.ಸಂ- 11430 ಮತ್ತು  ಶ್ರೀ ಕೆ ಎ ಶೇಖರೇಗೌಡ, ಚಾ/ನಿ, ಬಿ.ಸಂ- 6753, ಘಟಕ-01ರವರು ಪ್ರಶಂಸನೀಯ ಕರ್ತವ್ಯ ನಿರ್ವಹಿಸಿದ ಬಗ್ಗೆ ವರದಿ.
ಕೆಎ-57 ಎಫ್-3779 ಮಾರ್ಗ ಸಂಖ್ಯೆ: 141/142 ( ಬೆಂಗಳೂರು-ಮುನ್ನಾರ್) ವಾಹನದ ಚಾಲಕರಾದ ಶ್ರೀ ಪವನಕುಮಾರ್ ಟಿ ಎಸ್, ಬಿ.ಸಂ-11430 ಮತ್ತು  ಚಾಲಕ-ಕಂ-ನಿರ್ವಾಹಕರಾಗಿ ಶ್ರೀ  ಕೆ ಎ ಶೇಖರೇಗೌಡ, ಬಿ.ಸಂ-6753, ರವರು ನಿಯೋಜಿತಗೊಂಡಿರುತ್ತಾರೆ. ಸದರಿ ವಾಹನವು ದಿನಾಂಕ: 26.08.2019 ರ ಮಧ್ಯರಾತ್ರಿ ಚಿನ್ನರ್ ಅಭಯಾರಣ್ಯದಲ್ಲಿ ಬರುತ್ತಿರುವಾಗ, ಅಪರಿಚಿತ ಮಹಿಳೆಯಾದ ಶ್ರೀಮತಿ ಜಯಶ್ರೀ  ಎಂಬುವವರು ಕೈ ತೋರಿಸಿದಾಗ ಬಸ್ಸನ್ನು ನಿಲ್ಲಿಸಲಾಯಿತು.

ಬಸ್ ನಿಲ್ಲಿಸಿದಾಗ ಅಪರಿಚಿತ ಪುರುಷ ವ್ಯಕ್ತಿ ಆ ಮಹಿಳೆಯನ್ನು ನಮ್ಮ ವಾಹನದಲ್ಲಿ ಹತ್ತಿಸಿ, ಅವಳನ್ನು ಜನಸಂದಣಿ ಇರುವ ಸ್ಥಳದಲ್ಲಿ ತಲುಪಿಸುವಂತೆ ಕೋರಿರುತ್ತಾರೆ.

ನಂತರ ನಮ್ಮ ವಾಹನದ ಚಾಲನಾ ಸಿಬ್ಬಂದಿಗಳು ಅವರನ್ನು ವಿಚಾರಿಸಲಾಗಿ, ಅವರು ರಾಯಚೂರಿನ ಮಹಿಳೆ ಎಂಬುದಾಗಿ ತಿಳಿಸಿದ್ದು, ಆಗ ನೀವು  ವಾಹನದಲ್ಲಿ ಪ್ರಯಾಣಿಸಬೇಕಾದರೆ ನಿಗದಿತ ಮೊತ್ತವನ್ನು  ನೀಡಿ ಚೀಟಿಯನ್ನು ಪಡೆಯುವಂತೆ ತಿಳಿಸಲಾಗಿ, ಅವರು ನನ್ನ ಹತ್ತಿರ ಹಣವಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆಗ ನಮ್ಮ  ವಾಹನದ ಚಾಲನಾ ಸಿಬ್ಬಂದಿಗಳು ಅವರ ಸ್ವಂತ ಹಣದಿಂದ ಟಿಕೇಟು ಖರೀದಿಸಿ, ಅದನ್ನು ಅವರಿಗೆ ನೀಡಿ, ಊಟೋಪಚಾರದ ವ್ಯವಸ್ಥೆಯನ್ನು ಸಹ ಮಾಡಿ ಅವರನ್ನು ಬೆಂಗಳೂರಿನ ವರೆಗೂ ಕರೆತಂದಿರುತ್ತಾರೆ.

ಮುಂದುವರೆದು, ಸದರಿಯವರನ್ನು ವಿಚಾರಿಸಿದಾಗ ಅವರ ತಂದೆಯ ದೂರವಾಣಿಯ ಸಂಖ್ಯೆಯನ್ನು ನೀಡಿರುತ್ತಾರೆ. ಅದನ್ನು ಪಡೆದು ಅವರ ತಂದೆಯನ್ನು ಬೆಂಗಳೂರಿಗೆ ಕರೆಯಿಸಲಾಗಿರುತ್ತದೆ. ಮಹಿಳೆಯು ಮಾನಸಿಕವಾಗಿ ಖಿನ್ನತೆಗೆ ಒಳಪಟ್ಟಿರಬಹುದಾಗಿದ್ದನ್ನು ಮನಗಂಡ ನಮ್ಮ ಸಿಬ್ಬಂದಿಗಳು ನಂತರ ಆ ಮಹಿಳೆಯನ್ನ ವಿಲ್ಸನ್ ಗಾರ್ಡನ್  ಪೋಲಿಸ್ ಠಾಣೆಯಲ್ಲಿ ಆರಕ್ಷಕರ ಸಮ್ಮುಖದಲ್ಲಿ ಅವರ ತಂದೆಯ ಸುಪರ್ದಿಗೆ ಒಪ್ಪಿಸಲಾಗಿರುತ್ತದೆ.

ನಮ್ಮ‌ಸಿಬ್ಬಂದಿಗಳ ಸಮಯೋಚಿತ ಸಹಾಯದಿಂದ ಮತ್ತು ಮಾನವೀಯತೆಯಿಂದ  ಸದರಿ ಮಹಿಳೆಯವರು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸಿರುತ್ತಾರೆ.

ಸದರಿ ಸಿಬ್ಬಂದಿಗಳ ಕಾರ್ಯವು ಶ್ಲಾಘನೀಯ ಹಾಗೂ ಇತರೆ ಸಿಬ್ಬಂದಿಗಳಿಗೆ ಮಾದರಿಯಾಗಿರುವುದಾಗಿ ತಿಳಿಸಿ , ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಅಭಿನಂದನಾ ಪತ್ರವನ್ನು ನೀಡಿ ಸಿಬ್ಬಂದಿಗಳ ಕಾರ್ಯವನ್ನು  ಪ್ರಶಂಸಿಸಿರುತ್ತಾರೆ.

No comments:

Post a Comment