ಕರ್ನಾಟಕ ಡ್ರೈವ್ರ್ಸ್ ಅಂಡ್ owners ಅಸ್ಸೋಸಿಯೇಷನ್.. ಸಂಸ್ಥಾಪಕರಾದ...ಶ್ರೀ ಮಂಜುನಾಥ ರವರೊಂದಿಗೆ ಕೂತು...ಡ್ರೈವ್ರ್ಸ್ ಮತ್ತು ಒನರ್ಸ್ ಗಳ.. ಕುಂದು ಕೊರತೆಗಳು ಹಾಗೂ ಅವರ ಹಣಕಾಸಿನ ತೊಂದರೆಗಳ ಬಗ್ಗೆ ವಿಮರ್ಶೆ ಮಾಡಲಾಯಿತು. ಮುಂದೆ ತೆಗೆದುಕೊಳ್ಳಬೇಕಾದ ತೀರ್ಮಾನ ಗಳನ್ನು ಕೂಲಂಕುಷವಾಗಿ.. ಚರ್ಚಿಸಲಾಯಿತು.. ಹಾಗೂ ರಕ್ತ ದಾನ ದ ಬಗ್ಗೆಯೂ ಅವರು ನಮ್ಮೊಡನೆ ಮುಂದಿನ ಕಾರ್ಯಕ್ರಮಗಳನ್ನು ಹಂಚಿ ಕೊಂಡರು. ಹೀಗಾಗಿ....ನಿಮಗೇನಾದ್ರು (DRIVER AND OWNERS) ತೊಂದರೆಗಳಿದ್ದರೆ ನಮಗೆ ತಿಳಿಸತಕ್ಕದ್ದು. ಬೀಟ್ಸ್ ಆಫ್ ಕರ್ನಾಟಕ.. ಕರ್ನಾಟಕದ ಮುಂಚೂಣಿ ಯಲ್ಲಿರುವ ಮಾಸ ಪತ್ರಿಕೆ.
Our instant news on all matters reaching more than 1 lakhs audiences all over the world. If u want to reach max. Come and join us. Send us the details of your programmes , seminors,events, launches and many more.
Tuesday, 10 October 2017
ಈ ದೀಪಾವಳಿಗೆ ...ಏನೆಲ್ಲಾ.. ತೆಗೆದುಕೊಳ್ಳಬಹುದು
ದೀಪಾವಳಿಗೂ ಮೊದಲು ಬರುವ “ಧನತ್ರಯೋದಶಿ” (ದಂತೇರಾಸ್) ಯಾವಾಗ ಗೊತ್ತಾ.? ಆ ದಿನ ಈ 9 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಕೊಂಡರೂ ನಿಮಗೆಲ್ಲಾ ಶುಭವಾಗುತ್ತೆ.!
ದೀಪಾವಳಿ ಬರುತ್ತಿದೆ ಎಂದರೆ ಮೊದಲು ನೆನಪಾಗುವುದು ಪಟಾಕಿ. ಹಬ್ಬ ಒಂದು ವಾರ ಇದೆ ಎಂದಕೂಡಲೆ ಯಾರ ಮನೆಯಲ್ಲಾದರೂ ಈ ಸಂಭ್ರಮವೇ ಇರುತ್ತದೆ. ಇನ್ನು ಮಕ್ಕಳಿದ್ದರೆ ಅವರು ಪಟಾಕಿ ಕೊಡಿಸುವವರೆಗೂ ಬಿಡಲ್ಲ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದೀಪಾವಳಿ ಪಟಾಕಿ ಹೊಡೆಯುವುದೆಂದರೆ ಅದೇನೋ ಸಂಭ್ರಮ. ಆದರೆ ದೀಪಾವಳಿ ಎಂದರೆ ನಿಜವಾಗಿ ಪಟಾಕಿ ಅಷ್ಟೇ ಅಲ್ಲ. ದೀಪಾವಳಿಗೂ ಮೊದಲ ದಿನ ಬರುವ ಧನತ್ರಯೋದಶಿ ದಿನ ಎಲ್ಲರೂ ಲಕ್ಷ್ಮಿ ದೇವಿಗೆ ಪೂಜೆ ಮಾಡುತ್ತಾರೆ. ಈ ತಿಂಗಳು 15ರಂದು ಧಂತೇರಾಸ್ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನ ಲಕ್ಷ್ಮಿದೇವಿ ಪೂಜೆ ಜತೆಗೆ ಹಲವು ವಸ್ತುಗಳನ್ನು ಸಹ ಕೊಳ್ಳಬೇಕಂತೆ. ಆ ರೀತಿ ಕೊಳ್ಳುವವರಿಗೆ ಇನ್ನೂ ಹೆಚ್ಚಿನ ಶುಭವಾಗುತ್ತವೆ. ಆ ದಿನ ಯಾವ ವಸ್ತುಗಳನ್ನು ಕೊಂಡರೆ ಒಳ್ಳೆಯದಾಗುತ್ತದೆ ಎಂಬುದನ್ನು ಈದ ತಿಳಿದುಕೊಳ್ಳೋಣ.
ಅಡುಗೆ ಪಾತ್ರೆಗಳು…
ಹಿತ್ತಾಳೆಯಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಧಂತೇರಾಸ್ ದಿನ ಕೊಂಡು ಅವನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಪೊರಕೆ…
ಧಂತೇರಾಸ್ ದಿನ ಪೊರಕೆಯನ್ನು ಕೊಳ್ಳಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಹಿಡಿದ ದರಿತ್ರ ತೊಲಗುತ್ತದೆ.
ಎಲಕ್ಟ್ರಾನಿಕ್ ವಸ್ತುಗಳು…
ಫ್ರಿಜ್, ಮೊಬೈಲ್ ಫೋನ್, ಟಿವಿಯಂತಹ ವಸ್ತುಗಳನ್ನು ಧಂತೇರಾಸ್ ದಿನ ಕೊಳ್ಳಬೇಕು. ಆ ಬಳಿಕ ಅವುಗಳನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಆ ರೀತಿ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಅಕೌಂಟ್ಸ್ ಪುಸ್ತಕ…
ವ್ಯಾಪಾರ ಮಾಡುವವರು ಅಕೌಂಟ್ಸ್ ಪುಸ್ತಕವನ್ನು (ರಿಜಿಸ್ಟರ್) ಖರೀದಿಸಿ ಅದನ್ನು ಅವರ ಮಳಿಗೆಯಲ್ಲಿ ಅಥವಾ ಕಚೇರಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ವ್ಯಾಪಾರ ವೃದ್ಧಿಸುತ್ತದೆ.
ಮಾಡುವ ಕೆಲಸಕ್ಕೆ ಸಂಬಂಧಿಸಿದವು…
ಯಾರು ಯಾವ ಉದ್ಯೋಗ ಮಾಡುತ್ತಿದ್ದರೂ, ವ್ಯಾಪಾರ ಮಾಡುತ್ತಿದ್ದರೂ ಅವಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ವಸ್ತುವನ್ನು ಧಂತೇರಾಸ್ ದಿನ ಕೊಂಡು ಲಕ್ಷ್ಮಿದೇವಿಗೆ ಪೂಜಿಸಬೇಕು. ಇದರಿಂದ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.
ಗೋಮತಿ ಚಕ್ರ…
ಗೋಮತಿ ಚಕ್ರ ಎಂಬ ಹೆಸರಿನ 11 ಕವಡೆಗಳನ್ನು ಖರೀದಿಸಿ ಅವುಗಳನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯ ಲಾಕರ್‌ನಲ್ಲಿ ಇಡಬೇಕು. ಇದರಿಂದ ಸಂಪತ್ತು ಹರಿದುಬರುತ್ತದೆ.
ಲಕ್ಷ್ಮಿದೇವಿ, ವಿನಾಯಕ…
ಧಂತೇರಾಸ್ ದಿನ ಲಕ್ಷ್ಮಿದೇವಿ, ವಿನಾಯಕ ಜತೆಯಾಗಿರುವ ಫೋಟೋ ಅಥವಾ ಗೋಲ್ಡ್ ಕಾಯಿನ್ ಮನೆಗೆ ತಂದು ಅದಕ್ಕೆ ಪೂಜೆ ಮಾಡಬೇಕು. ಇದರಿಂದ ಆ ಮನೆಯಲ್ಲಿ ಎಲ್ಲ ಶುಭವಾಗುತ್ತದೆ. ಸಂಪತ್ತು ವೃದ್ಧಿಸುತ್ತದೆ.
ಸ್ವಸ್ತಿಕ್ ಚಿನ್ಹೆ…
ಸ್ವಸ್ತಿಕ್ ಚಿನ್ಹೆಯನ್ನು ಮನೆಯ ಮುಖ್ಯದ್ವಾರ ಅಥವಾ ಗೇಟ್ ಬಳಿ ನೇತು ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಚಿನ್ನ…
ಧನತ್ರಯೋದಶಿ ದಿನ ಸಾಧ್ಯವಾದಾರೆ ಬಂಗಾರ ಸಹ ಖರೀದಿಸಬಹುದು. ಅದಕ್ಕೆ ಇಷ್ಟೇ ಎಂಬ ಮಿತಿ ಇಲ್ಲ. ಎಷ್ಟು ಕಡಿಮೆ ಕೊಂಡರೂ ಆ ದಿನ ಬಂಗಾರ ಕೊಂಡರೆ ಒಳ್ಳೆಯದೇ ಆಗುತ್ತದೆ. ಬೆಳಗ್ಗೆ 6.34ರಿಂದ ಸಂಜೆ 6.20ರವರೆಗೆ ಕೊಳ್ಳಲು ಶುಭ ಮುಹೂರ್ತಗಳಿವೆಯಂತೆ.
Friday, 6 October 2017
HIGHLIGHTS OF 22ND GST COUNCIL MEETING
*
1. Composition Scheme Limit enhanced to Rs. 1.00 Cr with 1% Tax for Traders, 2% for Manufacturrs & 5% for Restaurent.
2. Filing of Returns upto Turnover of Rs. 1.50 Cr - Quarterly (Non Composition Assessee)
3. Refund to Exporters - To be Started from 10.10.2017 for July Month & 18.10.2017 for August Month manually.
4. From now Onwards Refund will be granted immediately after filing the Return to the Exporters.
5. Postponment of RCM till Dt. 31.03.2018.
6. E way Bill implementation postponed till April 2018.
7. PAN not needed for Jewellery below Rs. 2.00 Lacs.
8. 5 Member Committee to be Constituted for review of Rate of GST for Restaurant & Inter State Sales Transaction for Composition Assessee and Exclusion of Exempted Goods from Total Turnover and ITC to Manufacturers opting Composition Scheme.
9. E-Wallet Facility to Exporters from April 2018
10. Advance Licence Holder, 100% EOU, & EPCG Holder can export @ 0.1% till 31.03.2018
11. Exemption from Inter State Service from RCM if Service Provider is having below 20.00 Lacs Turnover.
12. TDS / TCS postponed till April 2018
13. Rate of GST changed for 32 Items.
14. Man Made Yarn to be Taxed at 12% instead of 18%
15. Services Job Work of Jari from 12% to 5%
16. Printing Jobwork - 5%
17. Govt. Contracts involving High Element of Labour @5%
18. Leasing of Vehicle abatement of 65% which are contracted before 01.07.2017.
ಹಿರಿಯರು ಎಂದಾಕ್ಷಣ... ಪಾಲುಸಬೇಕಾದ ನಿಯಮಗಳು
ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
# ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ, ಆದಷ್ಟು ಹಿರಿಯರನ್ನು ಕಾಯ್ದುಕೊಳ್ಳಿ, ಅವರಿಗೆ ಗೌರವದಿಂದ ಕಾಣಿ.
ನಮ್ಮ ಕರ್ನಾಟಕದ..... ಶ್ರೀಮಂತರು
ಫೋರ್ಬ್ಸ್ ಇಂಡಿಯಾ-2017 ಟಾಪ್ 100 ಶ್ರೀಮಂತರ ಪಟ್ಟಿಯನ್ನು ಗುರುವಾರ ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಸತತ 10ನೇ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು 2.5 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಕಳೆದ ಸಲದಂತೆಯೂ ಈ ಸಲ ಕೂಡ 7 ಕನ್ನಡಿಗರು ದೇಶದ ಟಾಪ್ 100 ಶ್ರೀಮಂತರಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಈ ಸಲ ಬೆಂಗಳೂರಿನ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ 1.25 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ‘ಶ್ರೀಮಂತ ನಂ.2’ ಎನ್ನಿಸಿಕೊಂಡಿದ್ದಾರೆ. ಕಳೆದ ಸಲಕ್ಕಿಂತ ಅವರು ಈ ಬಾರಿ 2 ಸ್ಥಾನ ಮೇಲೇರಿದ್ದಾರೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನಿತರರ ಕನ್ನಡಿಗರೆಂದರೆ ಬಿ.ಆರ್. ಶೆಟ್ಟಿ, ಕಿರಣ್ ಮಜುಂದಾರ್ ಶಾ, ರಂಜನ್ ಪೈ, ಎನ್.ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ ಹಾಗೂ ಎಸ್. (ಕ್ರಿಸ್) ಗೋಪಾಲಕೃಷ್ಣನ್.
ಏರಿಳಿತ:
2016ರಲ್ಲಿ 4ನೇ ಸ್ಥಾನದಲ್ಲಿದ್ದ ಅಜೀಂ ಪ್ರೇಮ್'ಜಿ, ಸುಮಾರು 98 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರ ಸಂಪತ್ತು 1.25 ಲಕ್ಷ ಕೋಟಿ ರು.ಗೆ ನೆಗೆದಿದ್ದು, ದ್ವಿತೀಯ ಸ್ಥಾನಕ್ಕೇರಿದ್ದಾರೆ. ಹೋದ ಬಾರಿ 47ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಈ ಸಲ 34ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ 16 ಸಾವಿರ ಕೋಟಿ ರು.ನಿಂದ 26 ಸಾವಿರ ಕೋಟಿ ರು.ಗೆ ಏರಿದೆ.
ಬಯೋಕಾನ್'ನ ಕಿರಣ್ ಮಜುಂದಾರ್ ಶಾ ಅವರು 2016ರಲ್ಲಿ 65ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಆದರೆ ಈ ಬಾರಿ ಅವರ ಆಸ್ತಿ 15 ಸಾವಿರ ಕೋಟಿ ರು.ಗೆ ಏರಿದ್ದರೂ 8 ಸ್ಥಾನದಷ್ಟು, ಅಂದರೆ 72ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮಣಿಪಾಲ್ ಸಮೂಹದ ರಂಜನ್ ಪೈ ಅವರು 12.5 ಸಾವಿರ ಕೋಟಿ ರು. ಆಸ್ತಿಯೊಂದಿಗೆ ಈ ಬಾರಿ 80ನೇ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ ಅವರು 11 ಸಾವಿರ ಕೋಟಿ ರು. ಆಸ್ತಿಯೊಂದಿಗೆ 74ನೇ ಸ್ಥಾನ ಪಡೆದಿದ್ದರು.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಕಳೆದ ಬಾರಿ 62ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು ಹೆಚ್ಚೂ ಕಮ್ಮಿ ಇಷ್ಟೇ ಆಸ್ತಿ ಉಳಿಸಿಕೊಂಡಿದ್ದರೂ 84ನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ಫೋಸಿಸ್'ನ ನಂದನ್ ನಿಲೇಕಣಿ ಅವರು ಕಳೆದ ಬಾರಿ 80ನೇ ಸ್ಥಾನದಲ್ಲಿದ್ದರು ಹಾಗೂ ಸುಮಾರು 10 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು 89ನೇ ಸ್ಥಾನಕ್ಕೆ ಕುಸಿದಿದ್ದರೂ ಆಸ್ತಿ ಮೌಲ್ಯವನ್ನು 11 ಸಾವಿರ ಕೋಟಿ ರು.ಗೆ ಹೆಚ್ಚಿಸಿಕೊಂಡಿದ್ದಾರೆ.
ಕಳೆದ ಸಲ 81ನೇ ಸ್ಥಾನ ಪಡೆದಿದ್ದ ಇನ್ಫೋಸಿಸ್'ನ ಎಸ್. ಗೋಪಾಲಕೃಷ್ಣನ್ ಅವರು ಕಳೆದ ಸಲದಂತೆ ಈ ಸಲ 10 ಸಾವಿರ ಕೋಟಿ ರು. ಆಸ್ತಿಯನ್ನೇ ಉಳಿಸಿಕೊಂಡಿದ್ದರೂ, 92ನೇ ಸ್ಥಾನಕ್ಕೆ ಕುಸಿದಿದ್ದಾರೆ.
Saturday, 30 September 2017
ಲಾಲ್ ಬಹುದ್ದೂರ್ ಶಾಸ್ತ್ರಿಯವರ ನೆನಪು
ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು.
ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!
ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ.
ಇದಾಗಿ ಎರಡು ವಾರಗಳಾಗಿವೆಯಷ್ಟೆ.
ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು '10 ಜನಪಥ್' ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು.
ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.
ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು.
ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು.
ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು.
ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ.
ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ 'ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ' ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. 'ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ' ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು!
ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು.
ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು 'ಅಸಲ್ ಉತ್ತರ್' (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.
ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರು ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ. ಹಾಗಾಗಿಯೇ 'ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ' ಎಂಬ ಕರೆಗೆ 50 ಕೋಟಿ ಭಾರತೀಯರು ಮನಃಪೂರ್ವಕವಾಗಿ ಓಗೊಟ್ಟಿದ್ದರು.
ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು.
ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕುಗಳು.
ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು.
ಸೋವಿಯತ್ ರಷ್ಯಾ, ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.
ಮುಂದಿನದ್ದು ಮಹಾನ್ ದುರಂತ!
ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. 'ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ' ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು.
ಅಯೂಬ್‌ಖಾನ್ ಒಪ್ಪದೇ ಹೋದಾಗ,''Then you will have to find another PM'' (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯಬೇಕಾಗುತ್ತದೆ!) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು.
ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು! ಶಾಸ್ತ್ರೀಜಿ ಅನುಮಾನಾಸ್ಪದವಾಗಿ, 'ಹೃದಯಾಘಾತ'ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು.
ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು. ಹಾಗಾಗಿ ಶಾಸ್ತ್ರಿಯವರ ದುರಂತಮಯ ಅಧ್ಯಾಯ ಸಾವಿನ ನಂತರವೂ ಮುಂದುವರಿಯಿತು.
ನೀಲಿಗಟ್ಟಿದ್ದ ದೇಹ ಭಾರತಕ್ಕೆ ಬಂತು!
ಆದರೆ ಶವ ಪರೀಕ್ಷೆ ನಡೆಯಲಿಲ್ಲ
ಕೆಲವು ಕೃತಘ್ನ ಭಾರತೀಯರೇ ಶಾಸ್ತ್ರಿಯವರನ್ನು ಇತಿಹಾಸದ ಕಸದ ತೊಟ್ಟಿಗೆ ದೂಡಿ ಕೈ ತೊಳೆದುಕೊಳ್ಳಲು ವ್ಯವಸ್ಥಿತ ಪಿತೂರಿ ನಡೆಸಿದ್ದರು. ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ಹವಣಿಸಿದರು.
ಮೊದಲೇ ನೊಂದಿದ್ದ ಪತ್ನಿ ಲಲಿತಾಶಾಸ್ತ್ರಿ ದೇಶದ ಜನರ ಮುಂದೆ ಬಣ್ಣ ಬಯಲು ಮಾಡುವ ಬೆದರಿಕೆ ಹಾಕಿದಾಗ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಲಾಯಿತು. ಅಷ್ಟೇ ಅಲ್ಲ, ಶಾಸ್ತ್ರೀಜಿಯವರ ಸಮಾಧಿ ಮೇಲೆ ಅವರದ್ದೇ ಆದ 'ಜೈ ಜವಾನ್, ಜೈ ಕಿಸಾನ್' ಘೋಷಣೆಯನ್ನು ಕೆತ್ತುವುದಕ್ಕೂ ಅಡ್ಡಿಪಡಿಸಿದರು.
ಮತ್ತೆ ಲಲಿತಾಶಾಸ್ತ್ರಿ ಉಪವಾಸ ಸತ್ಯಾಗ್ರಹ ಮಾಡುವೆನೆಂದು ಬೆದರಿಕೆಯೊಡ್ಡಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಶಾಸ್ತ್ರೀಜಿ ಭಾವಚಿತ್ರ ಕಾಂಗ್ರೆಸ್ ಕಾರ್ಯಾಲಯದಿಂದಲೂ ಕಣ್ಮರೆಯಾಯಿತು. ಇಂದಿರಾಪ್ರೇರಿತ ಕಾಂಗ್ರೆಸ್ಸಿಗರ ಪಿತೂರಿ ಆ ಮಟ್ಟಿಗಿತ್ತು.
1904, ಅಕ್ಟೋಬರ್ 2ರಂದು ಕಾಶಿ ಸಮೀಪದ ಮೊಘಲ್ ಸರಾಯ್‌ನಲ್ಲಿ ಬಡ ಶಿಕ್ಷಕರ ಮಗನಾಗಿ ಹುಟ್ಟಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರದ್ದು ಏಳುಬೀಳಿನ ಹಾದಿ. ಪ್ರಧಾನಿ ಸ್ಥಾನ ಪಿತ್ರಾರ್ಜಿತ ಆಸ್ತಿಯಂತೆ ಬಂದಿದ್ದಲ್ಲ. ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ಅವರು 1921ರಲ್ಲಿ ಶಿಕ್ಷಣಕ್ಕೆ ಶರಣು ಹೊಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಆರು ವರ್ಷ ಜೈಲುವಾಸವನ್ನೂ ಅನುಭವಿಸಿದ್ದರು.
ಆದರೆ ಸ್ವಾತಂತ್ರ್ಯಾನಂತರ ಕೇಂದ್ರ ಸಚಿವರಾದ ಶಾಸ್ತ್ರಿಯವರ ಏಳಿಗೆಯನ್ನು ನೆಹರು ಸಹಿಸದಾದರು. ಅವರ ಅಸಹನೆ ಯಾವ ಮಟ್ಟಕ್ಕೆ ತಲುಪಿತೆಂದರೆ ಎಲ್ಲ ಖಾತೆಗಳನ್ನು ಕಿತ್ತುಕೊಂಡು 'ಖಾತೆ ರಹಿತ' ಮಂತ್ರಿಯಾಗಿಸಿ ಅವಮಾನವನ್ನೂ ಮಾಡಿದರು. ಎಲ್ಲಿ ಶಾಸ್ತ್ರಿಯವರು ಅಡ್ಡಗಾಲಾಗುತ್ತಾರೋ ಎಂಬ ಭಯದಿಂದ 'ನೆಹರು ನಂತರ ಯಾರು?' ಎಂಬ ಪ್ರಶ್ನೆಯನ್ನು ಸ್ವತಃ ಹುಟ್ಟು ಹಾಕಿ ತನ್ನ ಮಗಳು ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹವಣಿಸಿದರು. ಶಾಸ್ತ್ರಿಯವರ ನಿಗೂಢ ಮರಣದೊಂದಿಗೆ ನೆಹರು ಆಸೆ ಈಡೇರಿತು.
ಇಂದಿರಾ ಪ್ರಧಾನಿಯಾದರು. ಭಾರತ ಮತ್ತೆ ನೆಹರು ಕುಟುಂಬಕ್ಕೆ ನೇಣು ಹಾಕಿಕೊಂಡಿತು. ಶಾಸ್ತ್ರೀಜಿ ಪಠ್ಯ ಪುಸ್ತಕಗಳ ಒಂದೆರಡು ಪ್ಯಾರಾಗಳಿಗೆ ಸೀಮಿತರಾದರು. ಇತಿಹಾಸ ತನ್ನ ಧೀರ ಪುತ್ರನನ್ನೇ ಮರೆಯುವಂತಾಯಿತು.
ಏಕೆ ಈ ಮಾತು ಹೇಳಬೇಕಾಗಿದೆ ಗೊತ್ತಾ?
ಅಕ್ಟೋಬರ್ 2ರಂದೇ ಜನಿಸಿದ ಈ ದೇಶದ ಮತ್ತೊಬ್ಬ ಸುಪುತ್ರ ಹಾಗೂ ಜನಪ್ರಿಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು
ನಾವೂ ಮರೆಯುವುದು ಬೇಡ.
-ಒಂದೇ ಭಾರತ ಶ್ರೇಷ್ಠ ಭಾರತ
#ಜೈ ಹಿಂದ
ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.
(ತಪ್ಪದೆ ಈ ಸಂದೇಶ ಶೇರ್ ಮಾಡಿ)
ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.
ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.
ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”
“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!
“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..
“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”
ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.
ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.
“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.
ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.
ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.
ಅಕ್ಟೋಬರ್ ಎರಡು ಬರುತ್ತಿದೆ.ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ..
ವೆಟರನ್ ಫಿಲ್ಮ್, ಟೆಲಿವಿಷನ್ ಮತ್ತು ರಂಗಭೂಮಿ ನಟ ಮತ್ತು ಪದ್ಮಶ್ರೀ ಟಾಮ್ ಆಲ್ಟರ್
ಮುಂಬೈ: ವೆಟರನ್ ಫಿಲ್ಮ್, ಟೆಲಿವಿಷನ್ ಮತ್ತು ರಂಗಭೂಮಿ ನಟ ಮತ್ತು ಪದ್ಮಶ್ರೀ ಟಾಮ್ ಆಲ್ಟರ್ 67 ನೇ ವಯಸ್ಸಿನ ಕೋನಗಳನ್ನು ಭೇಟಿಯಾದರು. ಪ್ರಸಿದ್ಧ ನಟ ಮತ್ತು ಒಂದು ಬಾರಿ ಕ್ರೀಡಾ ಬರಹಗಾರ ಮತ್ತು ಲೇಖಕ ನಾಲ್ಕನೇ ಹಂತದ ಚರ್ಮದ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದಾರೆ.
ಆಲ್ಟರ್ 300 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದು, ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಅಭಿನಯಿಸಿತ್ತು, 1990 ರ ದಶಕದಲ್ಲಿ ದಾಖಲೆಯ ಐವತ್ತು ವರ್ಷಗಳವರೆಗೆ ಓಡಿಹೋದ ಹಿಟ್ ಸೋಪ್ ಒಪೆರಾ ಜುನೂನ್ ನಲ್ಲಿ ದರೋಡೆಕೋರ ಕೇಶವ ಕಲ್ಸಿ ಎಂದು ಹೆಸರುವಾಸಿಯಾಗಿತ್ತು. ಅವರು 80 ರ ಮತ್ತು 90 ರ ದಶಕಗಳಲ್ಲಿ ಕ್ರೀಡಾ ಪತ್ರಕರ್ತರಾಗಿದ್ದರು. ಟಿವಿಗಾಗಿ ಸಚಿನ್ ತೆಂಡುಲ್ಕರ್ ಅವರನ್ನು ಸಂದರ್ಶಿಸಿದ ಮೊದಲ ವ್ಯಕ್ತಿ. ಆಲ್ಟರ್ ಮೂರು ಪುಸ್ತಕಗಳನ್ನು ಬರೆದಿದ್ದಾರೆ, ಒಂದು ಕಾಲ್ಪನಿಕವಲ್ಲದ ಮತ್ತು ಎರಡು ಕಲ್ಪನೆಗಳು, ಮತ್ತು 2008 ರಲ್ಲಿ ಕಲೆ ಮತ್ತು ಸಿನೆಮಾ ಕ್ಷೇತ್ರಕ್ಕೆ ನೀಡಿದ ಸೇವೆಗಳಿಗೆ ಭಾರತೀಯ ಸರ್ಕಾರವು ಗೌರವಪೂರ್ವಕವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಟಾಮ್ ಆಲ್ಟರ್, ನಟ, ಲೇಖಕ, ನಿರ್ದೇಶಕ, ಪದ್ಮಶ್ರೀ, ಮತ್ತು ನಮ್ಮ ಪ್ರೀತಿಯ ಪತಿ ಮತ್ತು ತಂದೆಯ ಮರಣವನ್ನು ನಾವು ಘೋಷಿಸುತ್ತೇವೆ. ಅವರ ಕುಟುಂಬದೊಂದಿಗೆ ಮನೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು ಎಂದು ಅವರ ಸಂಬಂಧಿಕರ ಪರವಾಗಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಮತ್ತು ನಿಕಟ ಕುಟುಂಬದ ಸದಸ್ಯರ ಹಾಜರಾತಿ ಈ ಸಮಯದಲ್ಲಿ ಗೌರವಾನ್ವಿತರಾಗಲು ನಾವು ಅವರ ಗೌಪ್ಯತೆ ಕೇಳುತ್ತೇವೆ. "
ಅವರ ಚಲನಚಿತ್ರ ವೃತ್ತಿಜೀವನ
ಅವರು 1976 ರಲ್ಲಿ ರಾಮನಂದ ಸಾಗರ್ ಅವರ ಚಾರಸ್ನಲ್ಲಿ ಸೂಪರ್ಸ್ಟಾರ್ ಧರ್ಮೇಂದ್ರ ಅವರ ಬಾಸ್ ಪಾತ್ರವನ್ನು ನಿರ್ವಹಿಸಿದರು, ಸಿಐಡಿ ಅಧಿಕೃತ. ಸತ್ಯಜಿತ್ ರೇ ಅವರ ಶಟ್ರಾಂಜ್ ಕೆ ಖಿಲಾಡಿ (1977), ಶ್ಯಾಮ್ ಬೆನೆಗಾ ಅವರ ಜುನೂನ್ (1979), ಮನೋಜ್ ಕುಮಾರ್ರ ಪ್ರಸಿದ್ಧ ಕೃತಿ ಕ್ರ್ಯಾಂಟಿ (1981) ಮತ್ತು ರಾಜ್ ಕಪೂರ್ ರ ರಾಮ್ ತೆರಿ ಗಂಗಾ ಮೈಲಿ (1985) ಅವರ ನಟನಾ ವೃತ್ತಿಜೀವನದ ಮೊದಲ ದಶಕದಲ್ಲಿ ಅವರ ಗಮನಾರ್ಹ ಪಾತ್ರಗಳಲ್ಲಿ. 70 ಮತ್ತು 80 ರ ದಶಕಗಳಲ್ಲಿ ಅವರು ಕೆಲಸ ಮಾಡಿದ್ದ ಇತರ ಪ್ರಮುಖ ನಿರ್ದೇಶಕರು ವಿ ಶಂತರಾಮ್, ಹೃಷಿಕೇಶ್ ಮುಖರ್ಜಿ, ಮನಮೋಹನ್ ದೇಸಾಯಿ.