Tuesday 10 October 2017

ಈ ದೀಪಾವಳಿಗೆ ...ಏನೆಲ್ಲಾ.. ತೆಗೆದುಕೊಳ್ಳಬಹುದು

ದೀಪಾವಳಿಗೂ ಮೊದಲು ಬರುವ “ಧನತ್ರಯೋದಶಿ” (ದಂತೇರಾಸ್) ಯಾವಾಗ ಗೊತ್ತಾ.? ಆ ದಿನ ಈ 9 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಕೊಂಡರೂ ನಿಮಗೆಲ್ಲಾ ಶುಭವಾಗುತ್ತೆ.!
ದೀಪಾವಳಿ ಬರುತ್ತಿದೆ ಎಂದರೆ ಮೊದಲು ನೆನಪಾಗುವುದು ಪಟಾಕಿ. ಹಬ್ಬ ಒಂದು ವಾರ ಇದೆ ಎಂದಕೂಡಲೆ ಯಾರ ಮನೆಯಲ್ಲಾದರೂ ಈ ಸಂಭ್ರಮವೇ ಇರುತ್ತದೆ. ಇನ್ನು ಮಕ್ಕಳಿದ್ದರೆ ಅವರು ಪಟಾಕಿ ಕೊಡಿಸುವವರೆಗೂ ಬಿಡಲ್ಲ. ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದೀಪಾವಳಿ ಪಟಾಕಿ ಹೊಡೆಯುವುದೆಂದರೆ ಅದೇನೋ ಸಂಭ್ರಮ. ಆದರೆ ದೀಪಾವಳಿ ಎಂದರೆ ನಿಜವಾಗಿ ಪಟಾಕಿ ಅಷ್ಟೇ ಅಲ್ಲ. ದೀಪಾವಳಿಗೂ ಮೊದಲ ದಿನ ಬರುವ ಧನತ್ರಯೋದಶಿ ದಿನ ಎಲ್ಲರೂ ಲಕ್ಷ್ಮಿ ದೇವಿಗೆ ಪೂಜೆ ಮಾಡುತ್ತಾರೆ. ಈ ತಿಂಗಳು 15ರಂದು ಧಂತೇರಾಸ್ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನ ಲಕ್ಷ್ಮಿದೇವಿ ಪೂಜೆ ಜತೆಗೆ ಹಲವು ವಸ್ತುಗಳನ್ನು ಸಹ ಕೊಳ್ಳಬೇಕಂತೆ. ಆ ರೀತಿ ಕೊಳ್ಳುವವರಿಗೆ ಇನ್ನೂ ಹೆಚ್ಚಿನ ಶುಭವಾಗುತ್ತವೆ. ಆ ದಿನ ಯಾವ ವಸ್ತುಗಳನ್ನು ಕೊಂಡರೆ ಒಳ್ಳೆಯದಾಗುತ್ತದೆ ಎಂಬುದನ್ನು ಈದ ತಿಳಿದುಕೊಳ್ಳೋಣ.
ಅಡುಗೆ ಪಾತ್ರೆಗಳು…
ಹಿತ್ತಾಳೆಯಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಧಂತೇರಾಸ್ ದಿನ ಕೊಂಡು ಅವನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಪೊರಕೆ…
ಧಂತೇರಾಸ್ ದಿನ ಪೊರಕೆಯನ್ನು ಕೊಳ್ಳಬೇಕು. ಇದರಿಂದ ಆ ಮನೆಯಲ್ಲಿ ಇರುವವರಿಗೆ ಹಿಡಿದ ದರಿತ್ರ ತೊಲಗುತ್ತದೆ.
ಎಲಕ್ಟ್ರಾನಿಕ್ ವಸ್ತುಗಳು…
ಫ್ರಿಜ್, ಮೊಬೈಲ್ ಫೋನ್, ಟಿವಿಯಂತಹ ವಸ್ತುಗಳನ್ನು ಧಂತೇರಾಸ್ ದಿನ ಕೊಳ್ಳಬೇಕು. ಆ ಬಳಿಕ ಅವುಗಳನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಆ ರೀತಿ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಅಕೌಂಟ್ಸ್ ಪುಸ್ತಕ…
ವ್ಯಾಪಾರ ಮಾಡುವವರು ಅಕೌಂಟ್ಸ್ ಪುಸ್ತಕವನ್ನು (ರಿಜಿಸ್ಟರ್) ಖರೀದಿಸಿ ಅದನ್ನು ಅವರ ಮಳಿಗೆಯಲ್ಲಿ ಅಥವಾ ಕಚೇರಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ವ್ಯಾಪಾರ ವೃದ್ಧಿಸುತ್ತದೆ.
ಮಾಡುವ ಕೆಲಸಕ್ಕೆ ಸಂಬಂಧಿಸಿದವು…
ಯಾರು ಯಾವ ಉದ್ಯೋಗ ಮಾಡುತ್ತಿದ್ದರೂ, ವ್ಯಾಪಾರ ಮಾಡುತ್ತಿದ್ದರೂ ಅವಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ವಸ್ತುವನ್ನು ಧಂತೇರಾಸ್ ದಿನ ಕೊಂಡು ಲಕ್ಷ್ಮಿದೇವಿಗೆ ಪೂಜಿಸಬೇಕು. ಇದರಿಂದ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.
ಗೋಮತಿ ಚಕ್ರ…
ಗೋಮತಿ ಚಕ್ರ ಎಂಬ ಹೆಸರಿನ 11 ಕವಡೆಗಳನ್ನು ಖರೀದಿಸಿ ಅವುಗಳನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯ ಲಾಕರ್‌ನಲ್ಲಿ ಇಡಬೇಕು. ಇದರಿಂದ ಸಂಪತ್ತು ಹರಿದುಬರುತ್ತದೆ.
ಲಕ್ಷ್ಮಿದೇವಿ, ವಿನಾಯಕ…
ಧಂತೇರಾಸ್ ದಿನ ಲಕ್ಷ್ಮಿದೇವಿ, ವಿನಾಯಕ ಜತೆಯಾಗಿರುವ ಫೋಟೋ ಅಥವಾ ಗೋಲ್ಡ್ ಕಾಯಿನ್ ಮನೆಗೆ ತಂದು ಅದಕ್ಕೆ ಪೂಜೆ ಮಾಡಬೇಕು. ಇದರಿಂದ ಆ ಮನೆಯಲ್ಲಿ ಎಲ್ಲ ಶುಭವಾಗುತ್ತದೆ. ಸಂಪತ್ತು ವೃದ್ಧಿಸುತ್ತದೆ.
ಸ್ವಸ್ತಿಕ್ ಚಿನ್ಹೆ…
ಸ್ವಸ್ತಿಕ್ ಚಿನ್ಹೆಯನ್ನು ಮನೆಯ ಮುಖ್ಯದ್ವಾರ ಅಥವಾ ಗೇಟ್ ಬಳಿ ನೇತು ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವವರಿಗೆ ಅದೃಷ್ಟ ಕೂಡಿಬರುತ್ತದೆ.
ಚಿನ್ನ…
ಧನತ್ರಯೋದಶಿ ದಿನ ಸಾಧ್ಯವಾದಾರೆ ಬಂಗಾರ ಸಹ ಖರೀದಿಸಬಹುದು. ಅದಕ್ಕೆ ಇಷ್ಟೇ ಎಂಬ ಮಿತಿ ಇಲ್ಲ. ಎಷ್ಟು ಕಡಿಮೆ ಕೊಂಡರೂ ಆ ದಿನ ಬಂಗಾರ ಕೊಂಡರೆ ಒಳ್ಳೆಯದೇ ಆಗುತ್ತದೆ. ಬೆಳಗ್ಗೆ 6.34ರಿಂದ ಸಂಜೆ 6.20ರವರೆಗೆ ಕೊಳ್ಳಲು ಶುಭ ಮುಹೂರ್ತಗಳಿವೆಯಂತೆ.

No comments:

Post a Comment