Sunday 15 October 2017

ಯುಎಸ್‌ಐಎಫ್‌ ಮತ್ತು ದಿ ‍ಛೋಪ್ರಾಸ್‌ ಸಹಭಾಗಿತ್ವ

USIF and The Chopras Collaborate For A Bright Business Future

ಅಕ್ಟೋಬರ್ 14, 2017: ಯುಎಸ್‌ ಇಮಿಗ್ರೇಶನ್‌ ಫಂಡ್‌ನೊಂದಿಗೆ ದಿ ಛೋಪ್ರಾಸ್‌ ಸಹಭಾಗಿತ್ವ ಸಾಧಿಸಿದ್ದು, ಅಮೆರಿಕದಲ್ಲಿ ವಹಿವಾಟು, ಶಿಕ್ಷಣ, ವೃತ್ತಿ ಮತ್ತು ನಿವಾಸ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಇಂದು ಇಬಿ-5 ವೀಸಾ ಪ್ರೋಸೆಸ್‌ಅನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.
ಇಬಿ-5 ವೀಸಾ ಕಾರ್ಯಕ್ರಮದ ಅಡಿಯಲ್ಲಿ ಅರ್ಹ ಪ್ರಾಜೆಕ್ಟ್‌ಗಳಲ್ಲಿ 500,000 ಅಥವಾ 1,00,000 ಡಾಲರ್ ಹೂಡಿಕೆ ಮಾಡುವ ಅವಕಾಶ ನೀಡಲಾಗುತ್ತದೆ. ಈ ಯೋಜನೆಯು ಕನಿಷ್ಠ 10 ಪೂರ್ಣಾವಧಿ ಉದ್ಯೋಗವನ್ನು ಅಮೆರಿಕದ ಕೆಲಸಗಾರರಿಗೆ ಒದಗಿಸಬೇಕಾಗುತ್ತದೆ. ಈ ಆಧಾರದಲ್ಲಿ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬದವರಿಗೆ ಶಾಶ್ವತ ಗ್ರೀನ್ ಕಾರ್ಡ್‌ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಯುಎಸ್‌ ಇಮಿಗ್ರೇಶನ್ ಫಂಡ್‌ನ ಏಷ್ಯಾ ಪೆಸಿಫಿಕ್ ಆಪರೇಶನ್ಸ್‌ನ ನಿರ್ದೇಶಕ ಜಾನ್‌ ಲಿನ್ “ಭಾರತದ ಆರ್ಥಿಕತೆ ಬೆಳೆಯುತ್ತಿರುವುದರಿಂದ, ಭಾರತ ಮತ್ತು ಅಮೆರಿಕದ ಮಧ್ಯೆ ಸಾಕಷ್ಟು ಆರ್ಥಿಕ ವಿನಿಮಯ ನಡೆಯುವ ಅವಕಾಶವಿದೆ. ಇಂತಹ ಸೆಮಿನಾರ್‌ಗಳು ಸಾಂಸ್ಕೃತಿಕ ಮತ್ತು ಉದ್ಯೋಗ ಅವಕಾಶಗಳಿಗೆ ಉತ್ತಮ ವೇದಿಕೆಯಾಗಿರಲಿದೆ” ಎಂದರು.
ಈ ಯುಎಸ್‌ ವೀಸಾ ಕಾರ್ಯಕ್ರಮದ ಅನುಕೂಲಗಳ ಬಗ್ಗೆ ಯುಎಸ್‌ ಇಮಿಗ್ರೇಶನ್ ಫಂಡ್‌ನ ತಂಡ, ಇಬಿ-5 ಪರಿಣಿತರು ಮತ್ತು ಸಿಬ್ಬಂದಿಯು ಅರಿವು ಮೂಡಿಸಿತು.  ಈ ಕಾರ್ಯಕ್ರಮವನ್ನು 1990ರಲ್ಲಿ ರೂಪಿಸಲಾಗಿದ್ದು, ಅಮೆರಿಕದ ವಹಿವಾಟಿನಲ್ಲಿ ಹೂಡಿಕೆ ಮಾಡಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿತ್ತು. ಈ ಕಾರ್ಯಕ್ರಮವನ್ನು ಚಂಡೀಗಢ, ಲುಧಿಯಾನ, ದೆಹಲಿ, ಮುಂಬೈ ನಂತರದಲ್ಲಿ ಈಗ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಕಾರ್ಯಕ್ರಮದ ವಿವರಗಳು ದಿ ಚೋಪ್ರಾಸ್ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. The Chopras.
ಯುಎಸ್‌ ಇಮಿಗ್ರೇಶನ್‌ ಫಂಡ್ (ಯುಎಸ್‌ಐಎಫ್‌): ಯುಎಸ್‌ ಇಮಿಗ್ರೇಶನ್‌ ಫಂಡ್ ಎಂಬುದು ಅಮೆರಿಕದ ಪ್ರಮುಖ ಇಬಿ-5 ಪ್ರಾದೇಶಿಕ ಕೇಂದ್ರದ ಕಾರ್ಯಕ್ರಮವಾಗಿದ್ದು, ಅಮೆರಿಕಕ್ಕೆ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಿದೆ. ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಅನುಮೋದಿತ ಪ್ರಾದೇಶಿಕ ಕೇಂದ್ರಗಳ ಮೂಲಕ ಅಮೆರಿಕವು ಉದ್ಯಮಿಗಳಿಗೆ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ.
ದಿ ಚೋಪ್ರಾಸ್‌ ಬಗ್ಗೆ: ದಿ ಚೋಪ್ರಾಸ್‌ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಜಾಗತಿಕ ಶಿಕ್ಷಣ ಕಾರ್ಪೊರೇಟ್ ಎಂದು ಹೆಸರಾಗಿದೆ. ವಿದೇಶದಲ್ಲಿ ಅಧ್ಯಯನ ನಡೆಸುವವರಿಗೆ ಇದು ಉನ್ನತ ಗುಣಮಟ್ಟದ ಶಿಕ್ಷಣ ಕನ್ಸಲ್ಟನ್ಸಿಯನ್ನು ಒದಗಿಸುತ್ತಿದೆ. 1995ರಿಂದಲೂ ಚಾಲ್ತಿಯಲ್ಲಿರುವ ಇದು 350,000 ವಿದ್ಯಾರ್ಥಿಗಳು ಮತ್ತು  ಕುಟುಂಬಗಳಿಗೆ ಸೇವೆ ಒದಗಿಸುತ್ತಿದೆ. 40 ದೇಶಗಳು, 4 ಖಂಡಗಳು ಮತ್ತು 600ಕ್ಕೂ ಹೆಚ್ಚು ಪಾಲುದಾರಿಕೆಯನ್ನು ಇದು ಹೊಂದಿದೆ.

No comments:

Post a Comment