ನಮ್ಮ ಹಿರಿಯರನ್ನು ಗೌರವಿಸಲು ಕನಿಷ್ಟ ಈ ಕೆಳಗಿನ ೩೫ ನಿಯಮ ಪಾಲಿಸಬೇಕು:-
1. ಅವರ ಮುಂದೆ ಕುಳಿತಾಗ ಫೋನ್ ಗಳನ್ನು ದೂರವಿಡಿ
2. ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ ಮಧ್ಯದಲ್ಲೇ ನಿಲ್ಲಿಸಬೇಡಿ.
3. ಅವರ ಅಭಿಪ್ರಾಯ ಒಪ್ಪಿಕೊಳ್ಳಿ
4. ಅವರ ಜೊತೆ ಮಾತಾಡುವಾಗ ಚಿತ್ತವಿಡಿ
5. ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ
6. ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ
7. ದುಖ:ದ ವಿಷಯ ಆದಷ್ಟು ಅವೈಡ್ ಮಾಡಿ
8. ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಮಾತ್ರ ಮಾತಾಡಿ
9. ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ
10. ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ
11. ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಮರೆಯುವಂತೆ ಮಾಡಿ
12. ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ
13. ಅವರ ಮುಂದೆ ಗೌರವವಾಗಿ ಕುಳಿತುಕೊಳ್ಳಿ
14. ಅವರ ಮಾತನ್ನು ತೆಗಳಬೇಡಿ.
15. ಅವರು ಮಾತನಾಡುವಾಗ ಅರ್ಧಕ್ಕೆ ನಿಲ್ಲಿಸಬೇಡಿ.
16. ಅವರ ವಯಸ್ಸಿಗೆ ಬೆಲೆಕೊಡಿ.
17. ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ
18. ಅವರ ಮುಂದೆ ಮೊಮ್ಮಕ್ಕಳನ್ನು ಹೊಡೆಯಬೇಡಿ
19. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.
20. ಅವರ ಮುಂದೆ ಜೋರಾಗಿ ಮಾತನಾಡಬೇಡಿ
21. ಅವರ ಮುಂದೆ ಕಾಲು ತೋರಿಸುವ ಹಾಗೆ ಕುಳಿತುಕೊಳ್ಳಬೇಡಿ
22. ಅವರಕಡೆ ಬೆನ್ನುಮಾಡಿ ಕುಳಿತುಕೊಳ್ಳಬೇಡಿ
23. ಅವರ ನ್ಯೂನ್ಯತೆಯನ್ನು ಪದೇ ಪದೇ ಎತ್ತಿ ತೋರಿಸಬೇಡಿ.
24. ಸಣ್ಣ ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.
25. ಅವರು ಮಾಡಿದ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ
26. ನಿಮ್ಮ ಕಷ್ಟಗಳನ್ನು ಆದಷ್ಟು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.
27. ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ
28. ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.
29. ಹೋಗುವಾಗ ಬರುವಾಗ ಭೆಟ್ಟಿಯಾಗಿ ಆಶೀರ್ವಾದ ಪಡೆಯಿರಿ
30. ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ
31. ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ
32. ದಿನಕ್ಕೆ ಕನಿಷ್ಟ 1ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ
33. ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ
34. ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ
35. ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯಲೋಪದ ಬಗ್ಗೆ ಯೋಚಿಸಬೇಡಿ.
# ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ, ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ, ಆದಷ್ಟು ಹಿರಿಯರನ್ನು ಕಾಯ್ದುಕೊಳ್ಳಿ, ಅವರಿಗೆ ಗೌರವದಿಂದ ಕಾಣಿ.
Our instant news on all matters reaching more than 1 lakhs audiences all over the world. If u want to reach max. Come and join us. Send us the details of your programmes , seminors,events, launches and many more.
Friday, 6 October 2017
ಹಿರಿಯರು ಎಂದಾಕ್ಷಣ... ಪಾಲುಸಬೇಕಾದ ನಿಯಮಗಳು
Subscribe to:
Post Comments (Atom)
No comments:
Post a Comment