Friday 6 October 2017

ಕರ್ನಾಟಕ ರಾಜ್ಯದ ಗ್ರಾಮಲೆಕ್ಕಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು

ಹಲವುಬಾರಿ ಮನವಿ ಮಾಡಿದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ ದಿನಾಂಕ ೧೧.೧೦.೨೦೧೭ ರಂದು ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ.

ಕರ್ನಾಟಕ ರಾಜ್ಯದ ಗ್ರಾಮಲೆಕ್ಕಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸೇವಾ ನಿಯಮದಿಂದ ಅನ್ಯಾಯಗಳನ್ನು ಮತ್ತು ಕ್ಷೇತ್ರ ಕಾರ್ಯಗಳಲ್ಲಾಗುವ ತೊಂದರೆಗಳು ಮತ್ತು ತಂತ್ರಾಂಶಗಳಿಂದ ಹೇರುತ್ತಿರುವ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಿಸುವಂತೆ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮತ್ತು ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಇವರಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದೇವೆ.
ಆದರೂ ಸಹ ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದೇ ಬಹಳ ನಿರೀಕ್ಷೆಗಳ ಆಶಾ ಗೋಪುರ ಹೊಂದಿದ್ದ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳಿಗೆ ತೀವ್ರ ನಿರಾಸೆ ಉಂಟಾಗಿದ್ದು, ಇದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ಅನ್ಯ ಇಲಾಖೆಯ ಅಧಿಕಾರಿಗಳು ಅವರ ಇಲಾಖೆಯ ತಾಂತ್ರಿಕ ಕೆಲಸ ಕಾರ್ಯಗಳನ್ನು ವಿವಿಧ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ ತಾಂತ್ರಿಕೇತರ ಕಾರ್ಯನಿರ್ವಾಹಕ ಸಿಬ್ಬಂದಿಗಳಾದ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ವಿಡಿಯೋ ಕಾನ್ಫರೆನ್ಸ್ಗಳನ್ನು ನಡೆಸಿ ತಾಂತ್ರಿಕ ಕೆಲಸಗಳನ್ನು ನಿರ್ವಹಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತಾರೆ.
ದಿನಾಂಕ : 11.10.2017 ರಂದು ಅನಿರ್ದಿಷ್ಠ ಅವದಿಕಾಲ ನಗರದ ಪ್ರಿಡಂ ಪಾರ್ಕ್ ನಲ್ಲಿ ಸಮಸ್ತ ರಾಜ್ಯದ ಗ್ರಾಮಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರೊಂದಿಗೆ ಹಮ್ಮಿಕೊಂಡಿದ್ದೇವೆ.
ಇದರ ಬಗ್ಗೆ ಸಂಪೂರ್ಣ ವಿವರವನ್ನು ಇಂದಿನ ಘೋಷ್ಠಿಯಲ್ಲಿ ತಿಳಿಸಲಾಗಿದೆ ಮತ್ತು ಇದರೊಂದಿಗೆ ಪತ್ರಿಕಾ ಘೋಷ್ಠಿಯ ವಿವರವನ್ನು ಲಗತ್ತಿಸಲಾಗಿದೆ.

ದಯವಿಟ್ಟು ತಮ್ಮ ಘನ ಮಾಧ್ಯಮದಲ್ಲಿ ಪ್ರಕಟಿಸಿ, ಗ್ರಾಮಲೆಕ್ಕಾಧಿಕಾರಿಗಳ ವಿವಿಧ ಬೇಡಿಕೆಗಳಿಗೆ ತಮ್ಮ ಮೂಲಕ ಸರ್ಕಾರದಗಮನ ಸೆಳೆಯಬೇಕೆಂದು ಈ ಮೂಲಕ ಕೋರುತ್ತೇವೆ. 

No comments:

Post a Comment