Tuesday, 1 August 2017

🏆ಮೇಯರ್ ಕಪ್🏆

🏆ಮೇಯರ್ ಕಪ್🏆
ಮೇಯರ್ ಕಪ್ 2017ರ ಸಾಲಿನ ರಾಷ್ಟೀಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು
ಶ್ರೀ ರಾಮ ಮಂದಿರ ಆಟದ ಮೈದಾನದಲ್ಲಿ ನಾಳೆಯಿಂದ ಆರಂಭವಾಗಲಿದ್ದು .ಇದರ ಪ್ರಯುಕ್ತ ಇಂದು ಮಹಾಪೌರರಾದ ಶ್ರೀಮತಿ ಪದ್ಮಾವತಿಯವರು ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಸಿದ್ದತೆಗಳನ್ನು ಪರಿಶೀಲನೆ ಮಾಡಿದರು .ಹಾಗೂ ಬಿ.ಬಿ.ಎಂ.ಪಿ.ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿದರು.
ರಾಜಾಜಿನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಮತ್ತು ಬಹುಮಾನದ ಮೊತ್ತ ಅತಿ ಹೆಚ್ಚು ನೀಡಲಾಗುತ್ತಿದೆ ,ಕ್ರೀಡಾಪಟುಗಳಿಗೆ ಉತ್ತಮ ವಸತಿ ಸೌಕರ್ಯ ನೀಡಲಾಗಿದೆ.
ಅಂತರಾಷ್ಟೀಯ ಹಾಗೂ ರಾಷ್ಟೀಯ ಮಟ್ಟದ ಪುರುಷ ಮತ್ತು ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

No comments:

Post a Comment