Thursday, 3 August 2017

ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರ ಹುಟ್ಟುಹಬ

🌻🌼🌸🌺🌻🌼🌸🌺🌹🌷
ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರ ಹುಟ್ಟುಹಬ್ಬದ ಅಚರಣೆಯನ್ನು ಸುಂಕೇನಹಳ್ಳಿ ವಾರ್ಡನ ಬಸವನಗುಡಿ ಮುಖ್ಯರಸ್ತೆ ಎಸ್.ಬಿ.ಎನ್.ಹಾಲ್ ನಲ್ಲಿ ಅದ್ದೂರಿ ಅಚರಿಸಲಾಯಿತು.ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ,ಶಾಸಕರಾದ ಆರ್.ಅಶೋಕ ಮತ್ತು ಉದಯಗುರುಡಾಚಾರ್ ಮಾಜಿ ಮಹಾಪೌರರಾದ ಕಟ್ಟೆ ಸತ್ಯನಾರಾಯಣ ,ಮಾಜಿ ಉಪಮಹಾಪೌರರುಗಳಾದ ಎಸ್ .ಹರೀಶ್ ,ರಂಗಣ್ಣ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಡಿ.ಎನ್.ರಮೇಶ್, ಉಮೇಶ್ ಶೆಟ್ಟಿ ,ಸವಿತಾ ಮಾಯಣ್ಣ ಗೌಡ ,ಪ್ರತಿಭಾ ಧನರಾಜ್ .ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎ.ಹೆಚ್.ಬಸವರಾಜ್ ,ಗೋಪಿ ,ಗಣೇಶ್ ಬಿ.ಜೆ.ಪಿ.ಮುಖಂಡರಾದ ಲಕ್ಷ್ಮೀಕಾಂತ್ ಪ್ರಕಾಶ್ ,ಶಿಲ್ಪಾ ಗಣೇಶ್ ,ಶಾರದ ಪೂರ್ಣ ನಾಯಕ್ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಎನ್.ಸದಾಶಿವರವರಿಗೆ ಶುಭಾ ಕೋರಿದರು.
🌴🌴
ಇದೇ ಸಂದರ್ಭದಲ್ಲಿ ಮಾತನಾಡಿದ ಸುಂಕೇನಹಳ್ಳಿ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಡಿ.ಎನ್.ರಮೇಶ್ ರವರು ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರು ಸರಳ ,ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ .ಅವರ ಸಂಘಟನೆ ಸಾಮರ್ಥ್ಯವನ್ನು ನೋಡಿ ಬಿ.ಜೆ.ಪಿ.ಪಕ್ಷವು ಅವರನ್ನು ಗುರುತಿಸಿದೆ .ಅವರ ಮಾರ್ಗದರ್ಶನ ,ಸಲಹೆ ಮತ್ತು ಬೆಂಬಲದಿಂದ ಸುಂಕೇನಹಳ್ಳಿ ವಾರ್ಡ ಅಭಿವೃದ್ದಿ ಪಥದತ್ತ ಹೆಜ್ಜೆ ಹಾಕುತ್ತಿದೆ .ಪಿ.ಎನ್.ಸದಾಶಿವರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬಿ.ಬಿ.ಎಂ.ಪಿ.ಶಾಲೆ ಮತ್ತು ಸರ್ಕಾರಿ ಪಾಠಶಾಲೆಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು ಮತ್ತು ಹಿರಿಯ ನಾಗರಿಕರ ಗುರುತಿನ ಪತ್ರ ಹಾಗೂ ಹಲವಾರು ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಗುರುತಿನ ಪತ್ರ ವಿತರಿಸಲಾಯಿತು ಬೆಂಗಳೂರು ನಗರ ಬಿ.ಜೆ.ಪಿ.ಅಧ್ಯಕ್ಷರಾದ ಪಿ.ಎನ್.ಸದಾಶಿವರವರಿಗೆ ನಾಡಿನ ಸೇವೆ ಮಾಡಲು ಇನ್ನು ಹೆಚ್ಚು ಶಕ್ತಿ ನೀಡಲಿ ಎಂಬುದು ನಮ್ಮ ಶುಭಾಹಾರೈಕೆ ಎಂದು ಡಿ.ಎನ್.ರಮೇಶ್ ರವರು ಹೇಳಿದರು.
           

No comments:

Post a Comment