Saturday, 5 August 2017

"ಯಡಿಯೂರು ವಾರ್ಡ" ಕಡಿಮೆ ವೆಚ್ಚದಲ್ಲಿ ಹೈಟೆಕ್ ರಸ್ತೆ ನಿರ್ಮಾಣ

.
🏕🏕🏕🏕
ಪದ್ಮನಾಭ ವಿದಾನಸಭಾ ಕ್ಷೇತ್ರದ ಯಡಿಯೂರು ವಾರ್ಡನ ಅಭಯ ಗಣಪತಿ ದೇವಸ್ಥಾನ ರಸ್ತೆ "ಮಾದರಿ ಪಾದಚಾರಿ ಮಾರ್ಗ" ಇಂದು ಲೋಕಾರ್ಪಣೆಯಾಯಿತು .ಸಮಾರಂಭದಲ್ಲಿ. ಮಾಜಿ ಉಪಮುಖ್ಯಮಂತ್ರಿ ,ಶಾಸಕರಾದ ಆರ್.ಅಶೋಕ ಮತ್ತು ಬಿ.ಜೆ.ಪಿ.ವಕ್ತಾರರು ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ಹಾಗೂ ಯಡಿಯೂರು ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಪೂರ್ಣಿಮ ರಮೇಶ್ ,ಬಿ.ಬಿ.ಎಂ.ಪಿ.ಸದಸ್ಯರಾದ ಸಂಗಾತಿ ವೆಂಕಟೇಶ್ ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವೆಂಕಟಸ್ವಾಮಿ ನಾಯ್ಡು ,ಬಿ.ಜೆ.ಪಿ.ಮುಖಂಡರಾದ ಲಕ್ಷ್ಮೀಕಾಂತ್ ಭಾಗವಹಿಸಿದ್ದರು.
🌴🌴
ಯಡಿಯೂರು ವಾರ್ಡ ಮಾದರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ 80ಲಕ್ಷ ರೂಪಾಯಿಗಳ ಖರ್ಚು ಮಾಡಲಾಗಿದೆ .ಇದೇ ಕಾಮಗಾರಿ ಟೆಂಡರ್ ಶ್ಯೂರ್ ಕಾಮಗಾರಿಯಾಗಿದ್ದರೆ ಕ್ಯೂಟ್ಯಾಂತರ ರೂಪಾಯಿ ಖರ್ಚು ಸರ್ಕಾರ ಮಾಡುತ್ತಿದೆ .ಯಡಿಯೂರು ವಾರ್ಡ ಮಾದರಿ ಪಾದಚಾರಿ ರಸ್ತೆ ನೋಡಿ ,ಸರ್ಕಾರ ದುಂದುವೆಚ್ಚ ಕಡಿಮೆ ಮಾಡಬೇಕು .ಸಾರ್ವಜನಿಕರ ತೆರಿಗೆ ಹಣ ಪೋಲುಗದಂತೆ ಇನ್ನು ಮುಂದಾದರು ಎಚ್ಚರಿಕೆ ವಹಿಸಲಿ ಎಂದು ಆರ್.ಅಶೋಕರವರು ಹೇಳಿದರು.
🥇🥇
ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ರವರು ಮಾತನಾಡಿ ಮಾದರಿ ಪಾದಚಾರಿ ರಸ್ತೆ ,ಟೆಂಡರ್ ಶ್ಯೂರ್ ರಸ್ತೆಗಳಿಗಿಂತ ಹೆಚ್ಚು ಸೌಲಭ್ಯ ಹಾಗೂ ಉಪಯುಕ್ತವಾಗಿದೆ .ಇಂಗು ಗುಂಡಿ ನಿರ್ಮಾಣ ,ಅಲಂಕಾರಿಕ ಬೀದಿ ದೀಪಾಗಳು ,ಹಿರಿಯ ನಾಗರಿಕರು ಕುಳಿತುಕೊಳ್ಳಲು ಆಸನ ವ್ಯವಸ್ತೆ .ಗುಣಮಟ್ಟದ ಚರಂಡಿ ಹಾಗೂ ಡಾಂಬರೀಕರಣ ,ಬಣ್ಣದ ಟೈಲ್ಸ್ ಗಳನ್ನು ಆಳವಡಿಸಿಲಾಗಿದೆ.ಸಾರ್ವಜನಿಕರು ನೀಡುವ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆ.ಇದ್ದರಿಂದ ಕೋಟ್ಯಾಂತರ ರೂಪಾಯಿ ಬಿ.ಬಿ.ಎಂ.ಪಿಗೆ ಉಳಿತಾಯ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಯಡಿಯೂರು ವಾರ್ಡನಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಿ ಬೀದಿ ದೀಪಾಗಳನ್ನು ಉರಿಸಲಾಗುತ್ತದೆ .
ಸರ್ಕಾರ ಮತ್ತು ಬಿ.ಬಿ.ಎಂ.ಪಿ.ಟೆಂಡರ್ ಶ್ಯೂರ್ ಕಾಮಗಾರಿಯನ್ನ ರದ್ದು ಮಾಡಿ ಮಾದರಿ ಪಾದಚಾರಿ ರಸ್ತೆ ನಿರ್ಮಾಣ ಮಾಡಲಿ .ತೆರಿಗೆದಾರರ ನೀಡುವ ಹಣ ಭಷ್ಟಚಾರರಹಿತ ,ಉತ್ತಮ ರಸ್ತೆ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಆರ್.ರಮೇಶ್ ರವರು ಮಾದರಿ ಪಾದಚಾರಿ ರಸ್ತೆ ಉದ್ಘಾಟಿಸಿ ಮಾತನಾಡಿದರು.
                 Dr. Srikaanth

No comments:

Post a Comment