Wednesday 23 August 2017

ಭ್ರಷ್ಟರಿಗೆ.... ಭ್ರಷ್ಟಾಚಾರ ಮಾಡಲು ಹೇಳಿ ಕೊಡಬೇಕೆ?

ಭೃಷ್ಟರಿಗೆ ವರವಾಯಿತೇ ಇಂದಿರಾ ಕ್ಯಾಂಟೀನ್?

ಇಂದಿರಾ  ಕ್ಯಾಂಟಿನನ್ನು ಒಂದಷ್ಟು ಜನ ಸೇರಿ ಹೊಗಳಿದ್ದೋ ಹೊಗಳಿದ್ದು ಆದರೆ ನಿಧಾನವಾಗಿ ಯೋಚಿಸಿದಾಗ ಇದೊಂದು ಚುನಾವಣೆಗೆ ನಿಧಿ ಸಂಗ್ರಹಿಸಲು ಮಾಡಿದ ಯೋಜನೆಯೇ ಎಂಬ ಬಗ್ಗೆ ಅನುಮಾನ ಶುರುವಾಗಿದೆ .

ಇಂದ್ರಾ ಕ್ಯಾಂಟಿನಲ್ಲಿ ಇಷ್ಟೇ ಜನ ಊಟ ಮಾಡಿದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇರುವುದಿಲ್ಲ ಆದ್ದರಿಂದ ಇದೇ ಒಂದು ಲಾಜಿಕ್ ಅನ್ನು ಉಪಯೋಗಿಸಿ ಸ್ವಲ್ಪ ತಳಸ್ಪರ್ಶಿಯಾಗಿ ಸಂಶೋಧಿಸಿದರೆ ...

ಸರಕಾರದ ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ತಿಂಡಿಗೆ ಹಾಗೂ ಎರಡು ಊಟಕ್ಕೆ ತಗಲುವ ವೆಚ್ಚ = 52 ರೂ
ಅದರಲ್ಲಿ ಕ್ರಮವಾಗಿ 5+10+10 = 25 ರೂ ಜನರಿಂದ ಪಡೆದರೆ ಉಳಿದ  27 ರೂ ಸರಕಾರ ಭರಿಸುತ್ತದೆ .

ಈಗ ಗುತ್ತಿಗೆ ಪಡೆದವ ಕೊಡುವ ಲೆಕ್ಕ ಹೀಗಿರುತ್ತದೆ

500 ಜನರ ಊಟಕ್ಕೆ 500* 27 = 13500
ಅಲ್ಲಿ 250 ಜನ ಬಂದಿದ್ದರೂ ಲೆಕ್ಕ ಮಾತ್ರ 500 ರದ್ದು !

ಹೀಗೆ ಒಬ್ಬ ಕ್ಯಾಂಟೀನ್ ಗುತ್ತಿಗೆದಾರ 250*27 = 6750 ರೂ ಅನ್ನು ದಿನವೊಂದಕ್ಕೆ ಉಚಿತವಾಗಿ ಗಳಿಸುತ್ತಾನೆ . ಹೀಗೆ 132 ಕ್ಯಾಂಟೀನ್ ಗಳ ಮೂಲಕ ದಿನವೊಂದಕ್ಕೆ
6750* 132 = 8,91,000 ಅಕ್ರಮ ಆದಾಯ ಬರುತ್ತದೆ .

ಇಲ್ಲಿ ನೀಡಲಾಗಿರುವ ಗುತ್ತಿಗೆಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಮಾಹಿತಿ ಇರುವ ಕಾರಣ , ಇದು ನೇರವಾಗಿ ಕಾಂಗಿ ಕಾರ್ಯಕರ್ತರಿಂದ ನಡೆಸಲ್ಪಡುತ್ತದೆ ಎಂದೂ ಹೇಳಲಾಗುತ್ತಿದೆ .ಒಂದು ಕ್ಯಾಂಟೀನ್ ನಿಂದ ಕಾಂಟ್ರಾಕ್ಟರ್ ಪಾಲು ಹೊರತುಪಡಿಸಿ ತಲಾ 5000 ಪಕ್ಷದ ನಿಧಿಯಾಗಿ ಪಡೆದರೂ 132 * 5000 = 6,60,000 ಬಂದು ಸೇರುತ್ತದೆ .

ಇನ್ನು ಚುಣಾವಣೆಗೆ 6 ತಿಂಗಳು ಬಾಕಿ ಇದೆ ಹಾಗಾಗಿ ಕಡಿಮೆಯೆಂದರೂ 180 * 6,60,000 = 18800000 ರೂ ಆದಾಯ ಕಾಂಗಿ  ಖಾತೆಗೆ ಸಲ್ಲುವ ಸಾಧ್ಯತೆ ಇದೆ ,ಇದಕ್ಕಿಂತ ಹೆಚ್ಚಿನ ಲೆಕ್ಕ ತೋರಿಸಿದರೆ ಹೆಚ್ಚಿನ ಲಾಭ !

ಹಾಗಾಗಿ ಬಡವರ ಪರವಾಗಿರುವ ಯೋಜನೆ ಎಂಬುದು ಸುಳ್ಳು ಇದೊಂದು "ಇಂದ್ರಾ ಫಂಡ್ ಕಲೆಕ್ಟಿಂಗ್ ಯೂನಿಟ್ " ಅಷ್ಟೇ .ಈಗ ಗುಲಾಮರು ಇದನ್ನೂ  ಸಮರ್ಥನೆಮಾಡಿಕೊಳ್ಳಲು ಮುಂದಾಗುತ್ತಾರೆ ನೋಡುತ್ತಿರಿ , ಒಟ್ಟಿನಲ್ಲಿ ತೆರಿಗೆದಾರರ ಎದೆಗೆ ಞಕ್ಕ  ಒದ್ದು ತನ್ನ ಪಕ್ಷದ ಖಾತೆ ಗಟ್ಟಿ ಮಾಡಿಸಿದರೇ ಎಂಬ ಅನುಮಾನ  ಜನಸಾಮಾನ್ಯರಾದ  ನಮಗೆ ಬಂದಿದೆ .

No comments:

Post a Comment