Sunday, 27 August 2017

ನಿಮ್ಮ ರಾಶಿಯ ಯಾವುದೆಂದು ತಿಳಿದಿಕೊಳ್ಳಿ

] ಪ್ರಬಲ ರಾಶಿಫಲದಲ್ಲಿ ಹುಟ್ಟಿರುವುದೇ ಕೆಲವರಿಗೆ ವರದಾನವಾಗಿ ಪರಿಣಮಿಸುತ್ತದೆ. ಅದರಲ್ಲಿಯೂ ಐದು ವಿಶಿಷ್ಟ ರಾಶಿಗಳು ಅತಿ ಹೆಚ್ಚು ಪ್ರಬಲವೆಂದು ಪರಿಗಣಿಸಲಾಗಿದೆ. ಇಂದು ಈ ರಾಶಿಯ ವ್ಯಕ್ತಿಗಳ ಲಕ್ಷಣಗಳ ಬಗ್ಗೆ ವಿವರಿಸಲಾಗಿದ್ದು ಇವುಗಳಲ್ಲಿ ನಿಮ್ಮ ಜನ್ಮರಾಶಿ ಇದೆಯೇ? ಇದ್ದರೆ ಇದರಲ್ಲಿ ವಿವರಿಸಲಾಗಿರುವ ಮಾಹಿತಿ ಎಷ್ಟು ಮಟ್ಟಿಗೆ ನಿಮಗೆ ಅನ್ವಯಿಸುತ್ತದೆ ಎಂಬುದನ್ನು ಹೋಲಿಸಿ ನೋಡಲು ಒಂದು ಉತ್ತಮ ಅವಕಾಶವಾಗಿದೆ...
ಮೇಷ
ಈ ವ್ಯಕ್ತಿಗಳು ಸಾಮಾನ್ಯವಾಗಿ ಎದೆಗಾರಿಕೆಯುಳ್ಳವರಾಗಿದ್ದು ಜೀವನದಲ್ಲಿ ದೊಡ್ಡ ಹಂತವನ್ನು ಏರಲು ಶಕ್ತರಾಗಿರುತ್ತಾರೆ. ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲು ಇವರು ಒಂದು ಹೆಜ್ಜೆ ಮುಂದೆ ಹೋಗಲು ಅಗತ್ಯವಿರುವ ಶಕ್ತಿ ಹಾಗೂ ಸ್ವಪ್ರೇರಣೆಯನ್ನು ಹೊಂದಿದ್ದು ಇದೇ ಈ ವ್ಯಕ್ತಿಗಳನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಆದರೆ ತದ್ವಿರುದ್ಧವಾಗಿ ತಮ್ಮ ನಿಲುವಿಗೆ ಹೆಚ್ಚು ಬದ್ಧರಾಗಿರುವ ಇವರು ಹೆಚ್ಚು ಹಠಮಾರಿಗಳೂ ಆಗಿರುತ್ತಾರೆ. ನೀವು ಬಚ್ಚಿಟ್ಟ ವಿಚಾರಗಳನ್ನು ರಾಶಿಚಕ್ರ ಬಿಚ್ಚಿಡುತ್ತದೆ ಹುಷಾರು!
ಕರ್ಕಾಟಕ
ಈ ರಾಶಿಫಲದ ವ್ಯಕ್ತಿಗಳೂ ಪ್ರಬಲರಾಗಿದ್ದು ವಿಶೇಷವಾಗಿ ಉತ್ತಮ ಪ್ರೇಮಿಗಳೂ ಇತರರ ಬಗ್ಗೆ ಕಾಳಜಿ ವಹಿಸುವವರೂ ಆಗಿರುತ್ತಾರೆ. ಇವರು ಸದಾ ಮುನ್ನುಗ್ಗುವ ವ್ಯಕ್ತಿತ್ವದವರಾಗಿದ್ದು ಇದಕ್ಕಾಗಿ ಇವರ ಕೊರತೆಗಳು ಎಂದೂ ಅಡ್ಡಿಯಾಗುವುದಿಲ್ಲ. ಇವರು ತಮ್ಮ ಗುರಿಯತ್ತ ಹೆಚ್ಚು ಗಮನ ಹರಿಸುವವರಾಗಿದ್ದು ತಾವು ಕಾಳಜಿ ವಹಿಸುವ ವ್ಯಕ್ತಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲೂ ಹಿಂಜರಿಯದವರಾಗಿರುತ್ತಾರೆ. ತಾವು ಸಾಧಿಸಬಹುದಾದ ಗುರಿಗಳನ್ನೇ ಹಿಂಬಾಲಿಸಿ ಹೋಗುವ ಇವರು ತಮಗೆ ತಾವೇ ಪ್ರೇರೇಪಿಸುವಂತಹವರಾಗಿರುತ್ತಾರೆ.
ಸಿಂಹ
ಈ ರಾಶಿಫಲ ಅತ್ಯಂತ ಪ್ರಮುಖವಾಗಿದೆ. ಈ ವ್ಯಕ್ತಿಗಳು ಜನ್ಮತಃ ನಾಯಕತ್ವದ ಗುಣಗಳನ್ನು ಪಡೆದು ಬಂದಿದ್ದು ಕೆಲವು ವಿಷಯಗಳನ್ನು ಸ್ವತಃ ಪ್ರಾರಂಭಿಸುವವರಾಗಿರುತ್ತಾರೆ. ಇವರು ತಮ್ಮ ಕೆಲಸವನ್ನು ಸಾಧಿಸಲು ಪ್ರತಿಬಾರಿಯೂ ತಮಗೆ ತಾವೇ ಪ್ರೇರೇಪಿಸುವವರಾಗಿರುತ್ತಾರೆ. ಇವರಿಗೆ ಸಿದ್ಧಿಸಿದ ವಿಶೇಷ ಕೌಶಲ್ಯದ ಪರಿಣಾಮವಾಗಿ ಇವರು ತಮ್ಮ ಸುತ್ತಲಿನವರ ಮನೋಭಾವವನ್ನು ತಮಗೆ ಅನುಕೂಲವಾಗುವಂತೆ ಬದಲಿಸಬಲ್ಲವರಾಗಿರುತ್ತಾರೆ. ವಿಶೇಷವಾಗಿ ಇವರ ವಾಕ್ಚಾತುರ್ಯ. ಇವರ ಒಂದೇ ಋಣಾತ್ಮಕ ಶಕ್ತಿ ಎಂದರೆ ಈ ಗುಣದಿಂದ ಇವರಿಗೆ ಲಭಿಸಿರುವ ಅಹಂಕಾರವಾಗಿದೆ. ವೃಶ್ಚಿಕ ಈ ರಾಶಿಫಲದಲ್ಲಿ ಹುಟ್ಟಿದ ವ್ಯಕ್ತಿಗಳು ತಮ್ಮ ವೃತ್ತಿ ವಲಯದಲ್ಲಿ ಪ್ರಚಂಡರಾಗಿರುತ್ತಾರೆ. ಇವರಿಗೆ ತಮ್ಮ ಕನಸನ್ನು ನನಸಾಗಿಸಲು ಈ ಪ್ರಚಂಡತೆ ನೆರವಾಗುತ್ತದೆ. ತಮ್ಮ ಕೆಲಸ ಸಾಧಿಸಲು ಇವರು ಘೋರ ಯತ್ನ ಮಾಡುತ್ತಾರೆ ಹಾಗೂ ಇವರನ್ನು ಅರಿತವರು ಇವರ ಸಂಗವನ್ನು ಇಷ್ಟಪಡುತ್ತಾರೆ. ಆದರೆ ಕಲವೊಮ್ಮೆ ಇವರು ತಮ್ಮ ಬಗ್ಗೆ ಕೊಚ್ಚಿಕೊಳ್ಳುವ ಮೂಲಕ ಅವಹೇಳನೆಗೂ ಒಳಗಾಗುತ್ತಾರೆ. ಈ ಅವಗುಣವೊಂದನ್ನು ಅಲಕ್ಷಿಸಿದರೆ ಇವರು ಉತ್ತಮ ವ್ಯಕ್ತಿಗಳೂ, ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಿಸುವವರೂ ಆಗಿದ್ದಾರೆ. ಪ್ರೀತಿಯ ಭಾವನೆಗಳ ಮೇಲೂ ರಾಶಿ ಚಕ್ರದ ಪ್ರಭಾವ ಬೀರಬಹುದು!
ಕುಂಭ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ತೀಕ್ಷ್ಣ ಬುದ್ಧಿಮತ್ತೆಗೆ ಹೆಸರಾಗಿದ್ದಾರೆ. ಈ ವ್ಯಕ್ತಿಗಳು ತಮ್ಮ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ಪ್ರಕಟಿಸುವವರಾಗಿದ್ದು ಯಾವುದೇ ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಒದಗಿಸುವ ಚಾಣಾಕ್ಷತೆಯನ್ನು ಹೊಂದಿರುತ್ತಾರೆ. ಎಷ್ಟೇ ಜಟಿಲವಾದ ಸಮಸ್ಯೆ ಇದ್ದರೂ ಇವರು ಸುಲಭವಾದ ಪರಿಹಾರವನ್ನು ಕಂಡುಕೊಂಡು ಪರಿಹಾರವನ್ನು ಪಡೆದುಕೊಳ್ಳುತ್ತಾರೆ.

No comments:

Post a Comment