Friday 25 August 2017

ಗ್ರಾಮ ಪಂಚಾಯತ್ ನೌಕರರು...

ಬೆಂಗಳೂರು: ವರ್ಷಾನುಗಟ್ಟಲೆ ವೇತನ ಇಲ್ಲದೆ ಸಂಕಷ್ಟದಲ್ಲಿದ್ದ 56 ಸಾವಿರ ಗ್ರಾಮ ಪಂಚಾಯಿತಿ ನೌಕರರಿಗೆ ಚೌತಿ ಹಬ್ಬದ ಉಡುಗೊರೆಯಾಗಿ ಇನ್ಮುಂದೆ ಸರ್ಕಾರದಿಂದಲೇ ವೇತನ ಪಾವತಿ ಆಗಲಿದೆ. ಈ ಮಹತ್ವದ ನಿರ್ಧಾರಕ್ಕೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ದೊರೆತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಈ ಸಂಬಂಧ ಮುಂದಿಟ್ಟಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಕೂಡ ತಾತ್ವಿಕ ಒಪ್ಪಿಗೆ ನೀಡಿದೆ.

 

ಏನಿದೆ ವೇತನ ನಿಯಮ?: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿ ಹಾಗೂ ಪಿಡಿಒಗಳು ಜಿಲ್ಲಾ ಪಂಚಾಯಿತಿ ಸಿಬ್ಬಂದಿಯಾಗಿರುತ್ತಾರೆ. ಅವರಿಗೆ ಜಿಲ್ಲಾ ಪಂಚಾಯಿತಿಯಿಂದ ವೇತನ ಬರುತ್ತದೆ. ಆದರೆ ಗ್ರಾಮ ಪಂಚಾಯಿತಿಗಳಿಗೆ ನೇಮಕವಾಗುವ ಬಿಲ್ ಕಲೆಕ್ಟರ್, ಕ್ಲರ್ಕ್ ಕಮ್ ಡಾಟಾ ಆಪರೇಟರ್​ಗಳು, ವಾಟರ್​ವುನ್ ಕಮ್ ಪಂಪ್ ಆಪರೇಟರ್, ಜವಾನ ಹಾಗೂ ಸ್ವಚ್ಛತಾಗಾರರಿಗೆ ಗ್ರಾಮ ಪಂಚಾಯಿತಿಗಳಿಂದಲೇ ವೇತನ ನೀಡಬೇಕು.

2 ವರ್ಷದಿಂದ ಸಂಬಳವಿಲ್ಲ: ಗ್ರಾಮ ಪಂಚಾಯಿತಿಗಳಲ್ಲಿ ನಿರ್ದಿಷ್ಟ ಆದಾಯ ಇಲ್ಲದೇ ಇರುವುದರಿಂದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಶಾಸನಬದ್ಧ ಅನುದಾನದ ಶೇ.40 ವೇತನಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಆ ಮೊತ್ತ ಸಾಕಾಗದ ಪರಿಣಾಮ ತಿಂಗಳುಗಟ್ಟಲೆ ಸಂಬಳವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ.

ಕೆಲವು ಪಂಚಾಯಿತಿಗಳಲ್ಲಿ ಕಳೆದ 30 ತಿಂಗಳಿಗೂ ಹೆಚ್ಚು ಕಾಲದಿಂದ ವೇತನ ನೀಡಿಲ್ಲ. ಆದ್ದರಿಂದಲೇ ಈ ನೌಕರರು ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ರೀತಿಯಲ್ಲಿ ಸರ್ಕಾರದಿಂದಲೇ ನೇರವಾಗಿ ಸಂಬಳಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ.

ಎಷ್ಟು ಜನ? ಎಷ್ಟು ಬೇಕು?: ರಾಜ್ಯದಲ್ಲಿ ಒಟ್ಟು 6,022 ಗ್ರಾಮ ಪಂಚಾಯಿತಿಗಳಿದ್ದು, ಈ ಪಂಚಾಯಿತಿಗಳಲ್ಲಿ 50,114 ಜನ ದುಡಿಯುತ್ತಿದ್ದಾರೆ. ಆರ್ಥಿಕ ಇಲಾಖೆ ಇನ್ನೂ ಒಬ್ಬ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಮಂಜೂರು ಮಾಡಿದ್ದು, ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕವೂ ಮುಗಿದರೆ ಸಿಬ್ಬಂದಿ ಸಂಖ್ಯೆ 56,138ಕ್ಕೆ ಹೆಚ್ಚಳವಾಗಲಿದೆ.

ಇಷ್ಟು ಜನರ ವೇತನಕ್ಕಾಗಿ ವಾರ್ಷಿಕ 829.82 ಕೋಟಿ ರೂ. ಅಗತ್ಯವಿದೆ. ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ನೀಡುವ ಶಾಸನಬದ್ಧ ಅನುದಾನ 638 ಕೋಟಿ ರೂ.ಗಳಾಗಿದೆ. ಅದರ ಶೇ. 40 ಅಂದರೆ 255.20 ಕೋಟಿ ರೂ.ಗಳಾಗಲಿದೆ. ವೇತನಕ್ಕಾಗಿ ಇನ್ನು ಹೆಚ್ಚುವರಿಯಾಗಿ 574.62 ಕೋಟಿ ರೂ.ಗಳ ಅಗತ್ಯವಿದೆ.

ಮುಖ್ಯಮಂತ್ರಿ ಸಮ್ಮತಿ: ಸಿಎಂ ಸಿದ್ದರಾಮಯ್ಯ ಜು.19ರಂದು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸರ್ಕಾರದಿಂದಲೇ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದರು. ಅಂದು ಸಭೆಯಲ್ಲಿದ್ದ ಹಣಕಾಸು ಇಲಾಖೆ ಅಧಿಕಾರಿಗಳೂ ಒಪ್ಪಿಗೆ ನೀಡಿದ್ದಾರೆ. ಆ ಮೂಲಕ ಕಳೆದ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ.

ಹೊಂದಾಣಿಕೆ ಹೇಗೆ: ಸರ್ಕಾರದಿಂದಲೇ ವೇತನ ಪಾವತಿಗೆ ದೊಡ್ಡ ಮೊತ್ತದ ಹಣಕಾಸು ಹೊಂದಾಣಿಕೆ ಮಾಡಬೇಕಾಗಿದೆ. ಆದ್ದರಿಂದ ಹಣಕಾಸು ಇಲಾಖೆ ಈ ವರ್ಷ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬೇರೆ ಬೇರೆ ಯೋಜನೆಗಳಲ್ಲಿ ಉಳಿಯುವ ಅನುದಾನವನ್ನು ಹೊಂದಾಣಿಕೆ ಮಾಡುವಂತೆ ಮನವಿ ಮಾಡಿದೆ. ಮುಂದಿನ ವರ್ಷದಿಂದ ಬಜೆಟ್​ನಲ್ಲಿಯೇ ಸೇರಿಸಿಕೊಳ್ಳುವ ಭರವಸೆಯನ್ನು ನೀಡಿದೆ. ಅದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಹ ಸಮ್ಮತಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಒಟ್ಟಾರೆ ಹತ್ತಾರು ವರ್ಷಗಳ ಬೇಡಿಕೆಯೊಂದು ಈಡೇರಿಸಿ ಗ್ರಾಮ ಪಂಚಾಯಿತಿ ನೌಕರರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

 

ಅನೇಕ ಪಂಚಾಯಿತಿಗಳಲ್ಲಿ ತಿಂಗಳುಗಟ್ಟಲೆ ಸಂಬಳವಿಲ್ಲದೆ ನೌಕರರು ಪರದಾಡುತ್ತಿದ್ದಾರೆ. ಸರ್ಕಾರದಿಂದಲೇ ವೇತನ ಪಾವತಿಗೆ ನಿರ್ಧಾರಕ್ಕೆ ಬಂದಿರುವುದು ಸ್ವಾಗತಾರ್ಹ ಸಂಗತಿ, ಬಾಕಿ ವೇತನ ಸಹ ಲಭ್ಯವಾಗಲಿ.

| ಮಾರುತಿ ಮಾನ್ಪಡೆ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ

 

ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿಸುವುದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಈ ನೌಕರರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕಾಗಿದೆ.

| ಎಚ್.ಕೆ. ಪಾಟೀಲ್ ಗ್ರಾಮೀಣಾಭಿವೃದ್ಧಿ

ಮತ್ತು ಪಂಚಾಯತ್ ರಾಜ್ ಸಚಿವ

 

 

ಯಾರ್ಯಾರಿಗೆ ಅನ್ವಯ

ನಗರ ಸ್ಥಳೀಯ ಸಂಸ್ಥೆಗಳ ರೀತಿಯಲ್ಲೇ ಗ್ರಾಮ ಪಂಚಾಯಿತಿ ನೌಕರರಿಗೂ ಕಾರ್ವಿುಕ ಇಲಾಖೆಯ ಅಧಿಸೂಚನೆ ಪ್ರಕಾರ ಕನಿಷ್ಠ ವೇತನವನ್ನು ಸರ್ಕಾರದ ನಿಧಿಯಿಂದಲೇ ಭರಿಸಬೇಕೆಂದು 3ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಬೀದಿ

No comments:

Post a Comment