Tuesday 15 August 2017

ಹೊಸ ವಿನ್ಯಾಸದ 'ರೇಮಂಡ್ ಮಳಿಗೆ'ಯ ಆರಂಭ

ಹೊಸ ವಿನ್ಯಾಸದ 'ರೇಮಂಡ್ ಮಳಿಗೆ'ಯ ಆರಂಭ
* ಈ ಹಬ್ಬಗಳ ದಿನಮಾನದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೂಟ್‌, ಶರ್ಟ್, ಜಾಕೆಟ್ಸ್‌ ಮತ್ತು ಪ್ಯಾಂಟ್‌ಗಳ ವಿಶೇಷ ಫ್ಯಾಬ್ರಿಕ್‌ಗಳನ್ನ ರೇಮಂಡ್‌ ಹೊಂದಿದೆ
* ಮನೆಯಲ್ಲಿಯೂ ಧರಿಸಬಹುದಾದಂಥ ಪಾರ್ಕ್ ಅವೆನ್ಯೂ, ಪಾರ್ಕ್ಸ್, ಕಲರ್‌ಪ್ಲಸ್‌ ಬ್ರ್ಯಾಂೆಡ್‌ಗಳೊಂದಿಗೆ ರೇಮಂಡ್‌ನ ‘ರೆಡಿ ಟು ವೇರ್‌’ ಕೂಡ ಲಭ್ಯವಿದೆ
* ವಿಶೇಷವಾಗಿ ರೇಮಂಡ್‌ ಪ್ರಸ್ತುತ ಪಡಿಸುವ ಬಿಸ್ಪೋಕ್‌ ಬಟ್ಟೆಗಳು ಕೂಡ ಜನರನ್ನ ಆಕರ್ಷಿಸುತ್ತಿದೆ
* ಗ್ರಾಹಕರಿಗಾಗಿ ಕಸ್ಟಮ್‌ ಟೇಲ್ರಿಂಗ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ
* ಬೆಂಗಳೂರಿನ ಜಯನಗರದ 4 ನೇ ಬ್ಲಾಕ್‌ನ 11 ನೇ ಮುಖ್ಯ ರಸ್ತೆಯಲ್ಲಿ ರೇಮಂಡ್‌ ಆರಂಭವಾಗಿದೆ
ರೇಮಂಡ್ ಮಳಿಗೆ’ಯು ಹೊಚ್ಚಹೊಸ ಫ್ಯಾಷನ್‌ಗಳಿಗೆ ಅದ್ಭುತ ಪ್ರೋತ್ಸಾಹ ನೀಡುವ ಬೆಂಗಳೂರಿನ ಜಯನಗರದಲ್ಲಿ ಉದ್ಘಾಟನೆಯಾಗುತ್ತಿದೆ.  11000 ಚದರ್‌ ಅಡಿ ವಿಸ್ತೀರ್ಣದಲ್ಲಿರುವ ಈ ಅಂಗಡಿಯು ನಗರದ ಹೃದಯಭಾಗದಲ್ಲಿ ಗ್ರಾಹಕರನ್ನ ಸೆಳೆಯುತ್ತಿದೆ. ತನ್ನ ಗ್ರಾಹಕರ ಆಯ್ಕೆಗಾಗಿ ವಿಶಾಲ ಆಯ್ಕೆಯ ಶ್ರೇಣಿಯನ್ನ ಒದಗಿಸಿದ್ದು , ರೇಮಂಡ್‌ನ ಫೈನ್‌ ಫ್ಯಾಬ್ರಿಕ್ಸ್‌ ಬಟ್ಟೆಗಳ ಜತೆಗ ಸಾಂಪ್ರದಾಯಕ ಉಡುಗೆ ಮತ್ತು ಪಾದರಕ್ಷೆಗಳನ್ನು ಕೂಡ ಗ್ರಾಹಕರಿಗೆ ಒದಗಿಸಿಕೊಡುತ್ತಿದೆ. 1997 ರಲ್ಲಿ ನಿರ್ಮಾಣಗೊಂಡ ರೇಮಂಡ್‌ ಮಳಿಗೆ ಈಗ ಫ್ಯಾಷನ್‌ನ ಹೆಗ್ಗುರುತು. ಕಳೆದ ಎರಡು ದಶಕಗಳಿಂದ ರೇಮಂಡ್‌ಗೆ ಗ್ರಾಹಕರ ಅಭೂತಪೂರ್ವ ಪ್ರೋತ್ಸಾಹ ಲಭ್ಯವಾಗಿದೆ. ಹೀಗಾಗಿ ಇನ್ನಷ್ಟು ಗ್ರಾಹಕರನ್ನು ಸೆಳೆಯುವುದಕ್ಕಾಗಿ ವಿಶೇಷ ಸ್ವರೂಪದಲ್ಲಿ ಬೆಂಗಳೂರಿನ ಜಯನಗರದಲ್ಲಿ ಅನಾವರಣಗೊಂಡ ರೇಮಂಡ್‌ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ನಗರದ ಪ್ರಮುಖ ಮಹನೀಯರು ಹಾಜರಿದ್ದರು.

ರೇಮಂಡ್‌ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ , ರೇಮಂಡ್‌‌ ರೀಟೇಲ್‌‌ ವಿಭಾಗದ ನಿರ್ದೇಶಕ ಮೋಹಿತ್‌ ಧನ್ಜಾಲ್, ಮಾತನಾಡಿ, "ದೇಶದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಬ್ರ್ಯಾಂಡ್‌ಗಳಲ್ಲಿ ರೇಮಂಡ್‌ ಕೂಡ ಒಂದು. ಕಳೆದ ತೊಂಬತ್ತೆರಡು ವರ್ಷಗಳಿಂದ ರೇಮಂಡ್‌ಗೆ ಗ್ರಾಹಕರ ಮೆಚ್ಚುಗೆ ಸಿಕ್ಕಿದೆ. ಭಾರತದ ವಿವಿಧ ಪ್ರದೇಶಗಳ ಗ್ರಾಹಕರ ಬೇಡಿಕೆಗಳನ್ನು ಅರ್ಥೈಸಿಕೊಂಡು  ಅವರಿಗಿಷ್ಟವಾಗುವ ಬಟ್ಟೆಗಳನ್ನು ಅತಿ ಶೀಘ್ರವಾಗಿ ಒದಗಿಸಿ, ಸಂತೋಷದಾಯಕ ಶಾಪಿಂಗ್‌ ಅನುಭವವನ್ನು ನೀಡಲು ರೇಮಂಡ್‌ನ ಹೊಸ ವಿನ್ಯಾಸದಿಂದ ಸಾಧ್ಯವಿದೆ. ರೇಮಂಡ್‌ ಮಳಿಗೆಯ ಈ ಹೊಸ ಸ್ವರೂಪ ತನ್ನ ಗ್ರಾಹಕರ ಅಗತ್ಯತೆಗೆ ತಕ್ಕಂತೆ ವಿಕಸನಗೊಂಡಿದೆ ಹಾಗೂ ವಿವಿಧ ಪ್ರಕಾರದ ಬಟ್ಟೆಗಳಿಗಾಗಿ ವಿವಿಧ ವಾರ್ಡ್ರೋಬ್‌ಗಳನ್ನು ರಚಿಸಲಾಗಿದೆ’ ಎಂದಿದ್ದಾರೆ.

ಹೊಸ ರೇಮಂಡ್‌ ಮಳಿಗೆಯಲ್ಲಿ  ಸೂಟ್, ಪ್ಯಾಂಟ್, ಶರ್ಟ್ ಮತ್ತು ಜಾಕೆಟ್‌ಗಳಿಗೆ ಬೇಕಾದ ಬಟ್ಟೆಗಳನ್ನು ಅದರದ್ದೇ ಆದ ವಿಭಾಗಗಳಿಂದ ಆಯ್ಕೆ ಮಾಡಿಕೊಳ್ಳಬಹುದು ಮತ್ತು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳುವುದಕ್ಕಾಗಿ ಅಲ್ಲಿಯೇ ಲಭ್ಯವಿರುವ ಕಸ್ಟಮ್ ಟೈಲರಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು. ರೇಮಂಡ್‌ನ ಅತ್ಯಂತ ಸೊಗಸಾದ ‘ರೆಡಿ ಟು ವೇರ್‌’ ಬಟ್ಟೆಗಳು,  ಪ್ಯಾಕ್ ಅವೆನ್ಯೂ ಪ್ರಕಾರದ ಬಟ್ಟೆಗಳಿಗಾಗಿ ನವೀನ ವಾರ್ಡ್ರೋಬ್‌ಗಳು, ಪಾರ್ಕ್ಸ್ ನ ಫ್ಯಾಷನ್‌ ಕ್ಯಾಶುವಲ್‌ ಉಡುಪುಗಳು , ಕಲರ್‌ ಪ್ಲಸ್‌‌ನ ಸ್ಮಾರ್ಟ್‌ ಕ್ಯಾಶುವಲ್‌ ಧಿರಿಸುಗಳು, ಈ ವಿಶಾಲ ಮಳಿಗೆಯಲ್ಲಿ ಲಭ್ಯವಿದೆ. ಅಲ್ಲದೆ, ತಾವು ಖರೀದಿಸಿದ ಬಟ್ಟೆಗಳಿಗೆ ಸರಿಹೊಂದುವ ಫ್ಯಾಷನೇಬಲ್‌ ವಸ್ತುಗಳನ್ನ ಕೂಡ ಇದೇ ಮಳಿಗೆಯಲ್ಲಿಯೇ ಗ್ರಾಹಕರು ಪಡೆದುಕೊಳ್ಳಬಹುದು. ಟೈ, ಬೆಲ್ಟ್‌, ಬೋವ್ಸ್‌, ಕಫ್‌ ಲಿಂಕ್ಸ್‌ ಮತ್ತು ಕಿಸೆಗಾಗಿ ಬೇಕಾದ ಚೌಕಾಕಾರದಲ್ಲಿ ಕತ್ತರಿಸಲ್ಪಟ್ಟ ಬಟ್ಟೆಯನ್ನೂ ಸಹ ಇಲ್ಲಿಯೇ ಖರೀದಿಸಬಹುದು. ಇದೆಲ್ಲದರ ಜತೆಗೆ ಖರೀದಿಸಿದ ಬಟ್ಟೆಗೆ ಸರಿಹೊಂದುವ ಪಾದರಕ್ಷೆಯನ್ನೂ ಗ್ರಾಹಕರಿಗೆ ಒದಗಿಸುವುದಕ್ಕಾಗಿ ವಿಶಾಲವಾದ ಫೂಟ್‌ವೇರ್‌ ವಿಭಾಗವನ್ನೂ ಕೂಡ ಈ ರೇಮಂಡ್ ಮಳಿಗೆ ಹೊಂದಿದೆ. ಗ್ರಾಹಕರಿಗಾಗಿ ಅವರು ಬೇಡಿಕೆ ಇಟ್ಟಂತೆ ಉಡುಪು ಹೊಲಿದುಕೊಡುವುದಕ್ಕಾಗಿ ದರ್ಜಿಗಳನ್ನೂ ನೇಮಿಸಿಕೊಂಡಿರುವ ರೇಮಂಡ್‌, ಅಲ್ಲಿಯೇ ಅಳತೆ ಪಡೆದುಕೊಂಡು ಅವರ ಬೇಡಿಕೆಯಂತೆ ಉಡುಪು ಸಿದ್ಧಪಡಿಸಿಕೊಡುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಈವರ್ಷದ ಹಬ್ಬದ ಸೀಸನ್‌ಗಾಗಿ  ಸಾಂಪ್ರದಾಯಿಕ ಉಡುಗೆಗಳಳನ್ನೂ ಕೂಡ ರೇಮಂಡ್ ತನ್ನ ಗ್ರಾಹಕರಿಗಾಗಿ ಸಿದ್ಧಪಡಿಸಿದೆ. ಕುರ್ತಾಗಳು, ಶೇರ್ವಾನಿಗಳು, ಬುಂದಿಗಳು ಹಾಗೂ ಇಂಡೋ ವೆಸ್ಟರ್ನ್‌ ಶೈಲಿಯ ಉಡುಪುಗಳು ಈ ರೇಮಂಡ್‌ ಮಳಿಗೆಯಲ್ಲಿ ಕಾಣಬಹುದು.

ರೇಮಂಡ್ ಮಳಿಗೆ (TRS) 1958 ರಲ್ಲಿ ಆರಂಭವಾದಂದಿನಿಂದ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಫ್ಯಾಬ್ರಿಕ್ ಮತ್ತು ಉಡುಪುಗಳನ್ನು ನೀಡುತ್ತಿದೆ. ರೇಮಂಡ್‌ ಬಟ್ಟೆಗಳ ಮಾರಾಟವು ವಿಶಾಲ ವ್ಯಾಪ್ತಿಯನ್ನ ಹೊಂದಿದ್ದು, ಭಾರತದ ಅತಿ ದೊಡ್ಡ ರೀಟೇಲ್‌ ವ್ಯಾಪಾರ ಜಾಲವನ್ನು ಇದು ಹೊಂದಿದೆ. ರೇಮಂಡ್‌ನ ರೀಟೇಲ್‌ ವ್ಯಾಪಾರವು ನಿರಂತರವಾಗಿ ಬಟ್ಟೆ ಉದ್ಯಮದಲ್ಲಿ ತನ್ನದೇ ಆದ ವಿಶಿಷ್ಠ ಮಾನದಂಡವನ್ನು ಪಡೆದುಕೊಂಡಿದ್ದು, ಗ್ರಾಹಕರಿಗೆ ಸಂತಸದ ಶಾಪಿಂಗ್ ಅನುಭವ ನೀಡುವಂಥ ವಾತಾವರಣವನ್ನ ಸೃಷ್ಟಿಸಿದೆ.

‘ರೇಮಂಡ್’  ಭಾರತದಲ್ಲಿನ ಅತಿದೊಡ್ಡ ಸಂಯೋಜಿತ ಸೂಟಿಂಗ್ ಉತ್ಪಾದಕ ಕಂಪನಿಯಾಗಿದ್ದು, ಅದು ತನ್ನ ಗುಣಮಟ್ಟದ ಫ್ಯಾಬ್ರಿಕ್‌ ಮತ್ತು ಉಡುಪುಗಳಿಂದಾಗಿಯೇ ಖ್ಯಾತಿ ಪಡೆದುಕೊಂಡಿದೆ. ತನ್ನ ಗುಣಮಟ್ಟ, ನಾವೀನ್ಯ ಶೈಲಿಯ ಉಡುಪುಗಳು, ಹಾಗೂ ಮಾರುಕಟ್ಟೆಯಲ್ಲಿಯ ತನ್ನ ಸ್ಥಾನಮಾನವನ್ನ ಏಕರೀತಿಯಲ್ಲಿ ಸಮರ್ಥವಾಗಿ ಕಾಪಾಡಿಕೊಂಡಿದೆ. ರೇಮಂಡ್ ರೆಡಿ ಟು ವೇರ್, ಪಾರ್ಕ್ ಅವೆನ್ಯೂ, ಕಲರ್‌ಪ್ಲಸ್‌, ಪಾರ್ಕ್ಸ್ ಈ ಮುಂತಾದ ಪ್ರಖ್ಯಾತ ಬ್ರ್ಯಾಂುಡ್‌ಗಳು ರೇಮಂಡ್‌ನೊಂದಿಗೆ ಮಿಳಿತಗೊಂಡಿವೆ.  ಭಾರತದ 400 ಪಟ್ಟಣಗಳಲ್ಲಿ ಒಟ್ಟೂ 1000 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ರೇಮಂಡ್ ಲಿಮಿಟೆಡ್‌,  ಇಡಿ ಭಾರತದಲ್ಲಿಯೇ ಜವಳಿ ಕ್ಷೇತ್ರದ ಅತಿ ದೊಡ್ಡ ರೀಟೇಲ್‌ ಮಾರಾಟ ಮಳಿಗೆಯಾಗಿದೆ.

ವೈವಿಧ್ಯಮಯ ಗುಣಮಟ್ಟದ ಬಟ್ಟೆಗಳಿಗೆ ಖ್ಯಾತಿ ಪಡೆದಿರುವ ರೇಮಂಡ್‌, ಪುರುಷರ ಆಕ್ಸಸರೀಸ್‌, ವೈಯಕ್ತಿಕ ಸೌಂದರ್ಯ ಉಪಕರಣಗಳು ಮತ್ತು ಶೌಚ ಸಲಕರಣೆಗಳು, ರೋಗ ನಿರೋಧಕಗಳು ಮತ್ತು ಎಂಜಿನಿಯರಿಂಗ್‌, ಆಟೋಮೊಬೈಲ್ ಕ್ಷೇತ್ರದಲ್ಲಿಯೂ ವ್ಯಾವಹಾರಿಕ ಆಸಕ್ತಿಯನ್ನು ಹೊಂದಿದೆ. ಇಲ್ಲಿಯವರೆಗೆ ಭಾರತದಲ್ಲಿ ಶತಕೋಟಿಗೂ ಹೆಚ್ಚು ಗ್ರಾಹಕರನ್ನು ಸೆಳೆದುಕೊಂಡಿರುವ ‘ರೇಮಂಡ್ ಬ್ರ್ಯಾಂಡ್’ ಕಳೆದ ಒಂಬತ್ತು ದಶಕಗಳಿಂದ ಸತತವಾಗಿ ತನ್ನ ಗ್ರಾಹಕರಿಗೆ ವಿಶ್ವದರ್ಜೆಯ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತಿದೆ.

No comments:

Post a Comment