Sunday 13 August 2017

ತುಳಸಿ ಎಲೆಗಳನ್ನು ಯಾಕೆ ಅಗಿಯಬಾರದು?

ತುಳಸಿ ಭಾರತದಲ್ಲಿ ಭಕ್ತಿಯಿಂದ ಪೂಜಿಸಲ್ಪಡುವ ಸಸ್ಯ. ಹಾಗಯೇ ಅದರಲ್ಲಿ ಆರೋಗ್ಯಕರ ಅಂಶಗಳೂ ಶ್ರೀಮಂತವಾಗಿವೆ. ಆಯುರ್ವೇದದ ಪ್ರಕಾರ ಸ್ವಲ್ಪ ಕಹಿಯಾಗಿದ್ದು, ಒಗರು ಒಗರಾಗಿರುವ ತುಳಸಿ ಪ್ರಕೃತಿದತ್ತವಾಗಿ ದೊರೆತ ಉತ್ತಮ ರೋಗನಿರೋಧಕವಾಗಿದೆ. ತುಳಸಿಯಿಂದ ಬರುವ ಎಣ್ಣೆಯ ಅಂಶವು ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿಯಲ್ಲಿಡುತ್ತದೆ.

ಸಾಮಾನ್ಯವಾಗಿ ಯಾವುದೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಬಂದರೂ ನಮ್ಮ ಅಜ್ಜಿಯಂದಿರು ಮೊದಲು ತುಳಸಿ ಗಿಡದೆಡೆಗೆ ಹೋಗುತ್ತಾರೆ. ಕೆಮ್ಮು , ಕಫಕ್ಕೆ ರಾಮಬಾಣವಾಗಿರುವ ತುಳಸಿ ಎಲೆಗಳನ್ನು ತಿಂದರೆ ದೇಹದೊಳಗಿನ ರಕ್ತವೂ ಶುದ್ದಿಯಾಗಿ ಕಲ್ಮಶಗಳನ್ನೆಲ್ಲಾ ಹೊರದೂಡುತ್ತದೆ. ಬೆಳಗ್ಗೆ ಎದ್ದು 2-3 ತುಳಸಿ ಎಲೆಗಳನ್ನು ತಿನ್ನಬೇಕೆಂದು ಹಿರಿಯರು ಹೇಳುವ ಜೊತೆಗೆ ಅದನ್ನು ಜಗಿಯಬಾರದು ಹಾಗೇ ನುಂಗಿಬಿಡು ಎಂದೂ ಸಲಹೆ ನೀಡುತ್ತಾರೆ.

ತುಳಸಿ ಎಲೆಗಳನ್ನು ಯಾಕೆ ಅಗಿಯಬಾರದು?

ಈ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಾನೆ ಇದೆ. ಆದರೆ ಯಾವುದಕ್ಕೂ ಸ್ಪಷ್ಟನೆ ಸಿಕ್ಕಿಲ್ಲದಿದ್ದರೂ,  ತುಳಸಿಯನ್ನು ಅಗಿಯುವುದರಿಂದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣವನ್ನು ಕೊಡಲಾಗುತ್ತಿದೆ.

ಧಾರ್ಮಿಕವಾಗಿ ಹೇಳುವುದಾದರೆ ಕೆಲವರ ಪ್ರಕಾರ ತುಳಸಿ ಎನ್ನುವುದು ವಿಷ್ಣುದೇವನ ಒಬ್ಬ ಪತ್ನಿಯ ಹೆಸರಾಗಿದ್ದು, ಆ ಕಾರಣಕ್ಕಾಗಿ ಇದನ್ನು ಪೂಜಿಸಲಾಗುತ್ತದೆ. ಹಾಗಾಗಿ ಇದನ್ನು ಅಗಿದು ತಿನ್ನುವುದು ದೇವರಿಗೆ ಅವಮಾನವಾದಂತೆ. ಆದರೆ ಈ ನಂಬಿಕೆ ಜೊತೆ ವಿಜ್ಞಾನ ಕೂಡ ತುಳಸಿಯನ್ನು ನುಂಗಿ ತಿನ್ನುವುದು ಉತ್ತಮ ಎಂದು ಹೇಳುತ್ತದೆ.

ತುಳಸಿಯಲ್ಲಿ ಪಾದರಸ ಮತ್ತು ಕಬ್ಬಿಣದಂಶ ಅಧಿಕವಾಗಿರುತ್ತದೆ. ಈ ಖನಿಜಾಂಶಗಳು ಹಲ್ಲುಗಳಿಗೆ ಹಾನಿ ಮಾಡುವುದಲ್ಲದೆ, ಹಣ್ಣುಗಳ ಬಣ್ಣವನ್ನೂ ಬದಲಾಯಿಸುತ್ತದೆ. ಆದ್ದರಿಂದ ತುಳಸಿಯನ್ನು ಜಗಿಯುವಾಗ ಪಾದರಸ ಮತ್ತು ಕಬ್ಬಿಣ ಬಾಯಿಯಲ್ಲಿ ಬಿಡುಗಡೆಗೊಂಡು ಹಲ್ಲುಗಳ ತುಂಬಾ ಹರಡುತ್ತದೆ. ನುಂಗಿದರೆ ಈ ಸಮಸ್ಯೆ ಕಾಡುವುದಿಲ್ಲ.ತುಳಸಿಯಲ್ಲಿ ಆಮ್ಲೀಯ ಅಂಶವು ನಮ್ಮ ಬಾಯಿಯಲ್ಲಿ ನೈಸರ್ಗಿಕವಾಗಿರುವ ಕ್ಷಾರೀಯದೊಂದಿಗೆ ಸೇರಿಕೊಂಡು ಹಲ್ಲಿನ ಕವಚಗಳನ್ನು ಸವೆಯುವಂತೆ ಮಾಡಬಹುದು.

‘ಬಾಯಿ ಹುಣ್ಣು ಗುಣಪಡಿಸಲು ಸಾಮಾನ್ಯವಾಗಿ ತುಳಸಿ ರಸವನ್ನು ಮನೆಮದ್ದಾಗಿ ಬಳಕೆ ಮಾಡುತ್ತೇವೆ. ಆದರೂ ತುಳಸಿ ಎಲೆಗಳನ್ನು ಅಗಿಯುವುದು ಒಳ್ಳೆಯದಲ್ಲ. ಅದರ ಬದಲು ನೀರಿನೊಂದಿಗೆ ಎಲೆಗಳನ್ನು ಸೇರಿಸಿ ಕುಡಿಯುವುದು ಉತ್ತಮ’ಎನ್ನುತ್ತಾರೆ ಆಯುರ್ವೇದ ತಜ್ಞೆ ಪರ್ವೀನ್ ವರ್ಮ.

ಆರೋಗ್ಯಕ್ಕೆ ಉತ್ತಮವಾಗಿರುವ ತುಳಸಿಯನ್ನು ಸೇವಿಸಲು ಒಂದು ಉತ್ತಮ ವಿಧಾನವಿದೆ. ಅದು ತುಳಸಿ ಚಹಾ. ಈ ಚಹಾ ನಿಮ್ಮ ಇಮ್ಮ್ಯುನಿಟಿಯನ್ನು ಹೆಚ್ಚಿಸಿ, ದೇಹದಲ್ಲಿರುವ ಕೆಟ್ಟ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮೊಡವೆಗಳನ್ನು ಗುಣಪಡಿಸುತ್ತವೆ. ಹಾಗೇ ನಮ್ಮ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಈ ಚಹಾದಲ್ಲಿ ಯಾವುದೇ ಕೆಫೀನ್ ಅಂಶಗಳಿರುವುದಿಲ್ಲ.

ತಯಾರಿಸುವ ವಿಧಾನ:

1/4 ಕಪ್ ತುಳಸಿ ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ಬೇಯಿಸಿ,ಈಗ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಯಲು ಬಿಡಿ.ಇದಕ್ಕೆ 1 ಚಮಚ ಜೇನುತುಪ್ಪ ಮತ್ತು 2 ಚಮಚ ಲಿಂಬೆರಸ ಸೇರಿಸಿದರೆ ಆರೋಗ್ಯಕರ, ಔಷಧೀಯ, ರುಚಿಯಾದ ತುಳಸಿ ಚಹಾ ತಯಾರಾಗುತ್ತದೆ.

No comments:

Post a Comment