Sunday, 27 August 2017

ತುಪ್ಪ... ತಿಂದರೆ ಏನಾಗುತ್ಹೆ...ಗೊತ್ತಾ ನಿಮಗೆ


ತೂಕ ಕಳೆದುಕೊಳ್ಳುವವರಿಗೆ ಹೆಚ್ಚಿನವರು ತುಪ್ಪವನ್ನು ತಿನ್ನದೇ ಇರುವಂತೆ ಸಲಹೆ ಮಾಡುತ್ತಿದ್ದರೆ ಇಲ್ಲಿ ತುಪ್ಪ ತಿನ್ನಲು ಸಲಹೆ ಮಾಡಲಾಗುತ್ತಿದೆಯೆಲ್ಲಾ ಎಂಬ ಗೊಂದಲ ಯಾರಿಗಾದರೂ ಉಂಟಾಗಬಹುದು. ತುಪ್ಪವನ್ನು ಭಾರತೀಯ ಅಡುಗೆಗಳಲ್ಲಿ ಶತಮಾನಗಳಿಂದ ಉಪಯೋಗಿಸಲಾಗುತ್ತಾ ಬರಲಾಗುತ್ತಿದೆ. ಆದರೆ ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣವನ್ನು ಹಿಡಿದುಕೊಂಡು ಇದನ್ನು ಅನಾರೋಗ್ಯವೆಂದು ಪ್ರಚಾರನೀಡಿ ಇದರ ಬಳಕೆಯನ್ನು ಕಡಿಮೆಗೊಳಿಸುವಲ್ಲಿ ವಿದೇಶಿ ಕೈವಾಡ ಖಂಡಿತಾ ಇದೆ. ಹೆರಿಗೆಯ ನಂತರ, ತುಪ್ಪದ ಡಬ್ಬಿಯನ್ನು ಪಕ್ಕಕ್ಕೆ ಸರಿಸಿ..!

 

ಏಕೆಂದರೆ ಅವರಲ್ಲಿ ಈಗಾಗಲೇ ಭಾರೀ ಪ್ರಾಮಾಣದಲ್ಲಿ ಸಂಗ್ರಹವಾಗಿರುವ ಪಾಮ್ ಎಣ್ಣೆ ಅನಾರೋಗ್ಯಕರವಾಗಿದ್ದು ಇದನ್ನು ತೃತೀಯ ರಾಷ್ಟ್ರಗಳಿಗೆ ದಾಟಿಸುವ ಯತ್ನದ ಪರಿಣಾಮವೇ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಅನಾರೋಗ್ಯಕರ ಎಂದು ಘೋಷಿಸುವುದು. ಭಾರತ ಈ ಬಲೆಗೆ ಈಗಾಗಲೇ ಬಿದ್ದಾಗಿದೆ, ಸಾವಿರಗಟ್ಟಲೆ ಲೀಟರ್ ಪಾಮ್ ಎಣ್ಣೆ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಪಡೆಯುತ್ತಿವೆ. ಆದರೆ ತುಪ್ಪದಲ್ಲಿ ಘನೀಕೃತ ಲಿನೋಲಿಕ್ ಆಮ್ಲ ಎಂಬ ಒಮೆಗಾ-6 ಕೊಬ್ಬಿನ ತೈಲವಿರುವ ಕಾರಣ ಇದು ಸಾಮಾನ್ಯ ತಾಪಮಾನದಲ್ಲಿ ಗಟ್ಟಿಯಾಗುತ್ತದೆ. ಇದು ಒಂದು ಆರೋಗ್ಯಕರ ಪೋಷಕಾಂಶವಾಗಿದ್ದು ದೇಹದ ತೂಕ ಕಳೆದುಕೊಳ್ಳಲು ನಡೆಯುವ ಯತ್ನಗಳಿಗೆ ಪೂರಕವಾಗಿದೆ. ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

ತುಪ್ಪದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲವಾದ ಕಾರಣದಿಂದಲೇ ಯಾರೋ ತುಪ್ಪ ಆರೋಗ್ಯಕರವಲ್ಲ ಎಂದು ಹೇಳಿದುದನ್ನೇ ನಂಬಿಕೊಂಡು ಇದನ್ನು ವರ್ಜಿಸುತ್ತಿದ್ದೇವೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ಈ ಬಗ್ಗೆ ನಮ್ಮಲ್ಲಿ ಮನೆಮಾಡಿಕೊಂಡಿದ್ದ ತಪ್ಪು ಕಲ್ಪನೆಗಳನ್ನು ನಿವಾರಿಸಬಲ್ಲುದು..

ಎಷ್ಟು ಪ್ರಮಾಣದ ತುಪ್ಪ ಅನಾರೋಗ್ಯಕರ?

ಯಾವುದೇ ಆಹಾರವಾಗಲಿ, ಒಂದು ಮಿತಿ ದಾಟಿದ ಬಳಿಕ ಅನಾರೋಗ್ಯಕರವೇ. ಅತಿಯಾದರೆ ಅಮೃತವೂ ವಿಷ ಎಂಬ ಗಾದೆಯೇ ಇದೆ. ಇದು ತುಪ್ಪವನ್ನೂ ಹೊರತುಪಡಿಸಿಲ್ಲ. ತಜ್ಞರ ಪ್ರಕಾರ ಒಂದು ದಿನಕ್ಕೆ ಎರಡು ಚಿಕ್ಕ ಚಮಚದಷ್ಟು ತುಪ್ಪ ಸೇವಿಸುವುದು ಆರೋಗ್ಯಕರ ಪ್ರಮಾಣವಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣ ಅನಾರೋಗ್ಯಕರವಲ್ಲದಿದ್ದರೂ, ತೂಕ ಕಳೆದುಕೊಳ್ಳಲು ಮಾತ್ರ ಅಸಹಾಯಕಾರಿಯಾಗಿದೆ.

   

ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ A,D,E ಮತ್ತು K ಸಮೃದ್ಧವಾಗಿವೆ

ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಹಲವು ವಿಟಮಿನ್ನು ಮತ್ತು ಆಂಟಿ ಆಕ್ಸಿಡೆಂಟುಗಳ ಅಗತ್ಯವಿದೆ. ವಿಟಮಿನ್ ಎ ಮತ್ತು ಇ ಉತ್ತಮ ಆಂಟಿ ಆಕ್ಸಿಡೆಂಟುಗಳಾದರೆ ವಿಟಮಿನ್ ಡಿ ಮೂಳೆಗಳನ್ನು ಗಟ್ಟಿಗೊಳಿಸಲು ಹಾಗೂ ಸ್ನಾಯುಗಳು ಬಲಗೊಳ್ಳಲೂ ನೆರವಾಗುತ್ತದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ಪೋಷಕಾಂಶವಾಗಿದೆ. ಇವೆಲ್ಲವೂ ತುಪ್ಪದಲ್ಲಿದ್ದು ಒಟ್ಟಾರೆ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ.

   

ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಉತ್ತರ ಭಾರತದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇದರ ಮೂಲ ಕಾರಣವೇನೆಂದರೆ ಉತ್ತರ ಭಾರತದ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ. ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ( LDL (low-density lipoprotein)) ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

   

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಊಟದಲ್ಲಿ ಒಂದು ಚಿಕ್ಕ ಚಮಚ ತುಪ್ಪ ಹಾಕಿ ತಿನ್ನುವುದಕ್ಕೆ ನಮ್ಮ ಹಿರಿಯರು ಏಕೆ ಒತ್ತು ನೀಡುತ್ತಿದ್ದರೆಂದು ಗೊತ್ತೇ? ಏಕೆಂದರೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅವರು ಅನುಭವದಿಂದ ಕಂಡುಕೊಂಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

   

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇಂದಿನ ಸಂಶೋಧನೆಗಳು ಇವರ ಅನುಭವ ಸರಿ ಎಂದು ಒಪ್ಪಿಕೊಂಡಿವೆ. ಇದರಿಂದ ಸಾಮಾನ್ಯವಾಗಿ ಕಾಡುವ ಆಯಾ ಋತುಮಾನದ ಕಾಯಿಲೆಗಳು ತುಪ್ಪ ತಿನ್ನದವರಿಗೆ ಕಾಡಿದರೆ ತುಪ್ಪ ತಿನ್ನುತ್ತಾ ಬಂದವರು ಆರೋಗ್ಯವಾಗಿರುತ್ತಾರೆ. ನಿತ್ಯವೂ ಚಿಕ್ಕ ಚಮಚ ತುಪ್ಪ ತಿನ್ನುತ್ತಾ ಬಂದರೆ ರೋಗ ನಿರೋಧಕ ಶಕ್ತಿಯ ಜೊತೆಗೇ ಏಕಾಗ್ರತೆ, ಕಲಿಕಾ ಸಾಮರ್ಥ್ಯವೂ ಹೆಚ್ಚುತ್ತದೆ.

   

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ಸಂತಾನಫಲಕ್ಕೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಒಂದು ಹಂತಕ್ಕೆ ಕಡಿಮೆಯಾಗಕೂಡದು. ವಾಸ್ತವವಾಗಿ ಫಲಕ್ಕಾಗಿ ಒಂದೇ ಅಣು ಸಾಕಾಗಿದ್ದರೂ ಪ್ರತಿ ಮಿಲೀ ನಲ್ಲಿ ನಲವತ್ತು ಮಿಲಿಯನ್ ನಷ್ಟು ಅಣುಗಳಿದ್ದರೆ ಮಾತ್ರ ಸಾಧ್ಯ. ಸೃಷ್ಟಿಯ ಈ ವಿಚಿತ್ರವನ್ನು ಪ್ರಶ್ನಿಸದೇ ಇದಕ್ಕೆ ತಲೆಬಾಗಿ ಈ ಸಂಖ್ಯೆಯನ್ನು ಉತ್ತಮ ಮಟ್ಟದಲ್ಲಿರಿಸಲು ತುಪ್ಪ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

   

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ಇದರಲ್ಲಿ ಸಮತೋಲನದಲ್ಲಿರುವ ಪ್ರೋಟೀನು ಮತ್ತು ಕೊಬ್ಬು ಪುರುಷರ ಶಕ್ತಿಯನ್ನು ಉತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾಡಿದ ತುಪ್ಪವನ್ನು 'ಅತ್ಯಂತ ಆರೋಗ್ಯಕರ ಕೊಬ್ಬು' ಎಂಬುದಾಗಿ ವರ್ಣಿಸಲಾಗುತ್ತದೆ.

   

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಅಡುಗೆಗೆ ಬಳಸುವ ಎಣ್ಣೆ ಅಡುಗೆಯನ್ನು ಸುಲಭ ಮತ್ತು ರುಚಿಕರವಾಗಿಸಿದರೂ ಹೊಟ್ಟೆಗೆ ಇದನ್ನು ಅರಗಿಸಿಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದಕ್ಕೆ ತದ್ವಿರುದ್ದ ಎಂದರೆ ಮೊಸರು. ಇದು ಅತ್ಯಂತ ಸುಲಭವಾಗಿ ಜೀರ್ಣವಾಗುತ್ತದೆ. ಅಂತೆಯೇ ಉಪ್ಪು ಸಹಾ. ಇದನ್ನು ಅರಗಿಸಿಕೊಂಡು ನಿವಾರಿಸಲು ಬಹಳ ಶ್ರಮಪಡಬೇಕಾಗುತ್ತದೆ. ಆದರೆ ತುಪ್ಪ ಸುಲಭವಾಗಿ ಜೀರ್ಣವಾಗುವ ಕಾರಣ ಇದರಲ್ಲಿರುವ ಪೋಷಕಾಂಶಗಳು ಹೆಚ್ಚಿನ ಶ್ರಮವಿಲ್ಲದೇ ಜೀರ್ಣಾಂಗಗಳ ಮೂಲಕ ರಕ್ತ ಸೇರಿ ಅಗತ್ಯವಾದ ಅಂಗಗಳಿಗೆ ದೊರಕುತ್ತವೆ. ಆದ್ದರಿಂದ ಇದರಲ್ಲಿರುವ ಕೊಬ್ಬು ಸಂಗ್ರಹಗೊಳ್ಳುವುದು ಅತಿ ನಿಧಾನ ಹಾಗೂ ತುಪ್ಪದ ಪ್ರಮಾಣ ಹೆಚ್ಚಿದ್ದಾಗ ಮಾತ್ರ.

   

ಹೃದಯದ ತೊಂದರೆ ಇರುವವರಿಗೆ ತಜ್ಞರು ನೀಡುವ ಎಚ್ಚರಿಕೆ

ಹೃದಯ ಸಂಬಂಧಿ ತೊಂದರೆ ಇರುವವರು ಮತ್ತು ಸ್ಥೂಲದೇಹಿಗಳು ತುಪ್ಪವನ್ನು ಸೇವಿಸುವ ಮುನ್ನ ತಜ್ಞವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ. ಏಕೆಂದರೆ ಇವರು ಈಗಾಗಲೇ ಪಡೆಯುತ್ತಿರುವ

   

ಚಿಕಿತ್ಸೆ ಮತ್ತು ಔಷಧಿಗಳಿಗೆ ತುಪ್ಪ ವ್ಯತಿರಿಕ್ತ ಪರಿಣಾಮ ಬೀರಬಲ್ಲುದು

ಉಳಿದಂತೆ ಆರೋಗ್ಯವಂತರು ನಿಗದಿತ ಪ್ರಮಾಣದಲ್ಲಿ ತುಪ್ಪ ಸೇವಿಸಬಹುದು. ಸ್ಥೂಲಕಾಯ ಆವರಿಸಿಕೊಂಡಿದ್ದು ತೂಕ ಕಳೆದುಕೊಳ್ಳಲಿಚ್ಛಿಸುವವರು ತಮ್ಮ ನಿತ್ಯದ ಆಹಾರಗಳಲ್ಲಿ ಎಣ್ಣೆಯ ಬದಲಿಗೆ ತುಪ್ಪವನ್ನು ಬಳಸಿದಷ್ಟೂ ತೂಕ ಕಳೆದುಕೊಳ್ಳುವ ಪ್ರಯತ್ನಗಳಿಗೆ ಹೆಚ್ಚು ಫಲ ಸಿಗುತ್ತದೆ.

No comments:

Post a Comment