Tuesday, 1 August 2017

ದೊಮ್ಮಲೂರು ವಾರ್ಡನಲ್ಲಿ "ಆರ್ಯ ಭಟ್ಟ"ಸೇತುವೆ ಉದ್ಘಾಟನ


ದೊಮ್ಮಲೂರು ವಾರ್ಡನಲ್ಲಿ "ಆರ್ಯ ಭಟ್ಟ"ಸೇತುವೆ ಉದ್ಘಾಟನೆಯನ್ನು ಶಾಸಕರಾದ ಎನ್.ಎ.ಹ್ಯಾರೀಸ್ ಮತ್ತು ದೊಮ್ಮಲೂರು ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಾರಾಯಣ(ಗುಂಡಣ್ಣ)ರವರು ಸೇತುವೆ ಉದ್ಘಾಟನೆ ಮಾಡಿದರು.
🚀🚀🚀🚀
ದೊಮ್ಮಲೂರು ವಾರ್ಡ ಖ್ಯಾತ ವಿಜ್ಞಾನಿ ಯು.ಆರ್.ರಾವ್ ರಸ್ತೆ ಯಲ್ಲಿರುವ ಆರ್ಯಭಟ್ಟ ಸೇತುವೆ ,ಈ ಮೊದಲು 10ಆಡಿ ರಸ್ತೆ ಇತ್ತು ವಾಹನ ಸಂಚಾರ ದುರ್ಗಮ ಪರಿಸ್ಥಿತಿ ಹಾಗೂ ನಾನ ಅಪಘಾತ ಸಂಭವಿಸಿತ್ತು  ಹಲಸೂರು ಕಡೆಗೆ ಹೋಗಬೇಕಾದರೆ ಇದು ಪ್ರಮುಖ ರಸ್ತೆಯಾಗಿತ್ತು .ಇದೀಗ 1ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿ ,30ಆಡಿಗಳ ರಸ್ತೆ ನಿರ್ಮಾಸಲಾಗಿದೆ .ಒಂದು ತಿಂಗಳ ಅವಧಿಯಲ್ಲಿ ಸೇತುವೆ ನಿರ್ಮಿಸಿ ,ಉದ್ಘಾಟನೆ ಮಾಡಿ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಸುಗಮವಾಗಿ ಸಾಗಲು ಆನುವು ಮಾಡಿಕೊಡಲಾಗಿದೆ .ಕೇಂಬ್ರಿಡ್ಜ್. ರಸ್ತೆ ಹಾಗೂ ದೊಮ್ಮಲೂರು ಲಿಂಕ್ ರಸ್ತೆಯಾಗಿರುವುದರಿಂದ ಇದೀಗ ವಾಹನ ಸವಾರರು ಹಲಸೂರು ಕಡೆ ಮಾರ್ಗ ಚಲಿಸಲು ಆರ್ಯಭಟ್ಟ ಸೇತುವೆ ಮುಖಾಂತರ ಹೋದರೆ 4ಕಿಲೋ ಮೀಟರ್ ದೂರ ಕ್ರಮಿಸುವುದು  ಉಳಿತಾಯವಾಗಲಿದೆ ಎಂದು ದೊಮ್ಮಲೂರು ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಾರಾಯಣ(ಗುಂಡಣ್ಣ)ರವರು ಆರ್ಯಭಟ್ಟ ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
             

No comments:

Post a Comment