Tuesday 29 August 2017

Paytm introducing big mall

ಅತಿ ದೊಡ್ಡ ಮಾಲ್ ಆಪ್

- 1000 ಬ್ರಾಂಡ್‌ಗಳನ್ನು ಹೊಂದಿದ ಅಂಗಡಿಗಳಲ್ಲಿ ಮತ್ತು 15,000 ಅಧಿಕೃತ ಚಿಲ್ಲರೆ ವ್ಯಾಪಾರಿಗಳು 65 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. 

 

ಪೇಟಿಎಮ್ ಈ ಕಾಮರ್ಸ್‌ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಪೇಟಿಎಮ್ ಮಾಲ್‌, ಭಾರತದ ಅತಿ ದೊಡ್ಡ ಆನ್‌ಲೈನ್ ಮಾಲ್ ಅನ್ನು ಈ ವರ್ಷದ ಹಬ್ಬದ ಋತುವಿಗೂ ಮುನ್ನವೇ ಆರಂಭಿಸುತ್ತಿದೆ.  ಕಂಪೆನಿಯು ತನ್ನ ಹೊಸ ಆಪ್ ಅನ್ನು 1000 ಬ್ರಾಂಡ್‌ಗಳನ್ನು ಹೊಂದಿದ ಅಂಗಡಿಗಳಲ್ಲಿ ಮತ್ತು 15,000 ಅಧಿಕೃತ ಚಿಲ್ಲರೆ ವ್ಯಾಪಾರದಲ್ಲಿ 65 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡಲು ಸಜ್ಜುಗೊಳಿಸುವುದರ ಮೂಲಕ ನವೀಕೃತಗೊಳಿಸಿದೆ.  ಇದೇ ಮೊದಲ ಬಾರಿಗೆ ಪೇಟಿಎಮ್ ಮಾಲ್‌ನಲ್ಲಿ ಗ್ರಾಹಕರಿಗಾಗಿ ಹೊಸ ಅನುಭವವನ್ನು ನೀಡಲು ಬ್ರಾಂಡೆಡ್ ಉತ್ಪನ್ನಗಳನ್ನು ಪೇಟಿಎಮ್ ಆಪ್ ಮೂಲಕ ಆರ್ಡರ‍್ ಮಾಡಬಹುದಾದ ಸೌಲಭ್ಯವನ್ನು ಕಲ್ಪಿಸಿದೆ.  ಹೀಗೆ ಆರ್ಡರ‍್ ಪಡೆದ ಉತ್ಪನ್ನಗಳನ್ನು ಗ್ರಾಹಕರು ತಮ್ಮ ಹತ್ತಿರದ ಸ್ಥಳದಲ್ಲಿರುವ ಅಧಿಕೃತ ಬ್ರಾಂಡ್‌ನ ಅಂಗಡಿಗೆ ಕಳುಹಿಸಲಾಗುವುದು. 

 

ಆಫ್‌ಲೈನ್ ಚಿಲ್ಲರೆ ಮಾರಾಟಗಾರರೊಂದಿಗೆ ಮತ್ತು ಬ್ರಾಂಡ್‌ಗಳೊಂದಿಗೆ ತಂತ್ರಜ್ಞಾನದ ಸಹಭಾಗಿತ್ವವನ್ನು ಹೊಂದುವುದರ ಮೂಲಕ ಪೇಟಿಎಮ್ ಅವರುಗಳನ್ನು ಆನ್‌ಲೈನ್ ಅಂಗಡಿಗಳನ್ನು ತೆರೆಯಲು ಸಹಾಯ ಮಾಡುವ ಹಂಚಿಕೆಯನ್ನು ಹೊಂದಿದೆ.  ಇದು ಚಿಲ್ಲರೆ ಮಾರಾಟಗಾರರು ಗಳಿಕೆಯನ್ನು ಹೆಚ್ಚಿಸುವುದರೊಂದಿಗೆ ಹೊಸ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುವುದರ ಜೊತೆಗೆ ಆನ್‌ಲೈನ್ ಶಾಪಿಂಗ್‌ನ ಮೇಲಿರುವ ವಿಶ್ವಾಸ ಮತ್ತು ಅನುಕೊಲತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಿದೆ.  ಕಂಪನಿಯು ಸ್ಥಾನೀಯ ಚಿಲ್ಲರೆ ಮಾರಾಟಗಾರರೊಂದಿಗೆ ಮತ್ತು ಬ್ರಾಂಡ್‌ಗಳೊಂದಿಗೆ ಭಾಗೀದಾರರಾಗಿ ಅವರು ಏಕಮುಖವಾಗಿರುವ ದೊಡ್ಡ ಸಗಟು ಮಾರಾಟಗಾರರ ವಿರುಧ್ದದ ಹೋರಾಟದಲ್ಲಿ ಭಾಗೀದಾರರಾಗಿದ್ದಾರೆ.  ಚಿಲ್ಲರೆ ಮಾರಾಟಗಾರರ ಜೀವನದಲ್ಲಿ ಅವರ ಚಿಲ್ಲರೆ ಮಾರಾಟವನ್ನು ಹೆಚ್ಚಿಸುವುದರ ಮೂಲಕ ಅವರ ಮಾರಾಟದ ಅವಕಾಶಗಳನ್ನು ಮೊಬೈಲ್ ಮೂಲಕ ಅಭಿವೃದ್ದಿಗೊಳಿಸಿ ಹೆಚ್ಚಿನ ವ್ಯಾಪಾರವನ್ನು ನೀಡುವ ಮೂಲಕ ಮಹತ್ವದ ಪಾತ್ರವನ್ನು ನಿರ್ವಹಿಸುವ ವೇದಿಕೆಯಾಗುವ ಗುರಿಯನ್ನು ಇಟ್ಟುಕೊಂಡಿದೆ. 

 

ಗ್ರಾಹಕರಿಗೆ ವಿಶಿಷ್ಟವಾದ ಹಾಗೂ ಅಧಿಕೃತವಾದ ಬ್ರಾಂಡ್‌ಗಳನ್ನು ಅನ್ವೇಷಿಸುವ ಹಾಗೂ ಅವರ ಮೆಚ್ಚಿನ ಬ್ರಾಂಡ್‌ಗಳನ್ನು, ಬ್ರಾಂಡ್ ಆಧಾರಿತ ಅನುಭವವನ್ನು ಆಪೆಲ್, ಸ್ಯಾಮಸಂಗ್, ಎಲ್‌ಜಿ, ಓಪ್ಪೋ, ಸೋನಿ, ಎಚ್‌ಪಿ, ಲೆನಿವೂ, ಜೆಬೆಎಲ್, ಫಿಲಿಪ್ಸ್, ಪ್ಯೂಮಾ, ಅಲೆನ್ ಸೋಲಿ, ಲೀ, ಪೀಪಿ, ಲೆವೀಸ್, ವಿರೋಮೊದಾ, ವ್ಯಾನ್ ಹ್ಯುಸೇನ್, ವುಡ್‌ಲ್ಯಾಂಡ್, ಕ್ಯಾಟ್‌ವಾಕ್, ಸ್ಕೆಚರ‍್ಸ್‌, ರೆಡ್‌ಟೇಪ್, ಕ್ರಾಕ್ಸ ಅಂಡ್ ಫಾಸಿಲ್ಸ್, ಮುಂತಾದ ಬ್ರಾಂಡ್‌ಗಳನ್ನು ನೀಡುವ ಮೂಲಕ ಹೊಸ ಅನುಭವವನ್ನು ಕಲ್ಪಿಸುತ್ತಿದ್ದಾರೆ.  ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ಬ್ರಾಂಡ್ ಮಾರಾಟಗಾರರ ಅಂಗಡಿಯ ವಿವರಗಳನ್ನು ಮತ್ತು ಸ್ಥಾನೀಯ ಚಿಲ್ಲರೆ ಮಾರಾಟಗಾರರ ಪಿನ್ ಕೋಡಿಗೆ ಅವರು ಬಯಸಿದ ಉತ್ಪನ್ನಗಳನ್ನು ಪಡೆಯಬಹುದು.  ಪೇಟಿಎಮ್ ಮಾಲ್ ಆಪ್ ಹೊಸ ಹೋಮ್ ಸ್ಕ್ರೀನ್ ಅನ್ನು ಹೊಂದಿದ್ದು ಅದು ಹೊಸ ವಸ್ತುಗಳನ್ನು ಹುಡುಕಲು ಅನುವು ಮಾಡಿಕೊಡುವುದು.  ಗ್ರಾಹಕರು ಮತ್ತು ವ್ಯಾಪಾರಗಾರರಿಗೆ ಅವರ ಆರ್ಢರನ್ನು ನೀಡುವಾಗ, ಜಿಎಸ್‌ಟಿಐಎನ್ ಸಂಖ್ಯೆಯನ್ನು ನಮೂದಿಸಲು ಅವರಿಗೆ ಅಗತ್ಯವಾದ ವಿವರಗಳನ್ನು ಅವರ ನಿರ್ದೇಶಿತ ಇನ್‌ವಾಯ್ಸ್‌ಗಳ ಮೂಲಕ ಪಡೆಯಬಹುದು ನಂತರ ಅದನ್ನು ಟ್ಯಾಕ್ಸ ಕ್ರೆಡಿಟ್ ಮಾಡಿಕೊಳ್ಳಬಹುದು. 

 

ಭಾರತದಲ್ಲಿ ಚಿಲ್ಲರೆ ಮಾರಾಟದ ವಿಭಾಗವು ಅಸಮವಾಗಿ ವಿತರಿಕೆಯಾಗಿದ್ದು, ದೊಡ್ಡ ಪಟ್ಟಣಗಳಲ್ಲಿರುವ ಗ್ರಾಹಕರಿಗೆ ಪ್ರಮುಖ ಬ್ರಾಂಡ್‌ಗಳು ಸುಲಭವಾಗಿ ಲಭ್ಯವಾಗುತ್ತಿದ್ದು ಸಣ್ಣ ಪಟ್ಟಣಗಳಲ್ಲಿ ಸೀಮಿತ  ಅಧವಾ ಅಧಿಕೃತ ಬ್ರಾಂಡ್‌ನ ಬಯಸಿದ ಉತ್ಪನ್ನಗಳನ್ನು ಪಡೆಯುವ ಯಾವುದೇ ಅವಕಾಶವಿರುವುದಿಲ್ಲ.  ಏಕೆಂದರೆ ಇಂತಹ ಗ್ರಾಹಕರಿಗೆ ಪ್ರಮುಖ ಒಳ್ಳೆಯ ನೈಜ ಉತ್ಪನ್ನಗಳನ್ನು ಕೊಳ್ಳಲು, ಬೇಡಿಕೆಯಲ್ಲಿರುವ ಬ್ರಾಂಡ್‌ಗಳು ಸುಲಭವಾಗಿ ಲಭ್ಯವಾಗುವುದಿಲ್ಲ ಆದುದರಿಂದ ಕಾಳಸಂತೆಯಲ್ಲಿ ಅಮಾಯಕ ಗ್ರಾಹಕರಿಗೆ ನಕಲಿ ಮತ್ತು ಅನಧಿಕೃತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.  ದೇಶದ ಉದ್ದಗಲಕ್ಕೂ ವಿಶ್ವಸನೀಯ ಶಾಪಿಂಗ್ ಅನುಭವವನ್ನು ನೀಡುವುದಕ್ಕಾಗಿ ಪೇಟಿಎಮ್ ಮಾಲ್ 19,000 ಪಿನ್ ಕೋಡ್‌ಗಳ ಮೂಲಕ ಗ್ಯಾರೆಂಟಿ ಇರುವ ಬ್ರಾಂಡೆಡ್ ಉತ್ಪನ್ನಗಳನ್ನು ನೀಡುತ್ತಿದೆ.  ಗ್ರಾಹಕರು ಅಸಲಿ ಉತ್ಪನ್ನಗಳನ್ನು ಅಧಕೃತ ಮಾರಾಟಗಾರರ ಮೂಲಕ ವ್ಯಾರೆಂಟಿ, ಸರ್ವೀಸ್, ಇನ್ಸ್‌ಟಲೇಶನ್ ಮತ್ತು ಇತರ ಅಗತ್ಯ ಸಹಾಯವನ್ನು ಆಫ್ಲೈನ್ ಬ್ರಾಂಡ್ ಅಂಗಡಿಯಂತೆಯೇ ಶಾಪಿಂಗ್ ಮಾಡಿದಾಗ ಪಡೆಯುವಂತೆಯೆ ಇಲ್ಲಿಯೂ ಪಡೆಯಬಹುದು. 

 

ಅಮಿತ್ ಸಿನ್ಯಾ, ಸಿಓಓ - ಪೇಟಿಎಮ್ ಮಾಲ್, ಇವರು ಹೇಳುವಂತೆ, ಭಾರತೀಯ ಗ್ರಾಹಕರು ಈಗ ಅಸಲಿ ವಸ್ತುಗಳನ್ನು ದೊಡ್ಡದಾದ ಮತ್ತು ಉತ್ತಮವಾದ ಇತರ ಮಾಲ್‌ಗಳಲ್ಲಿ ಪಡೆಯುವಂತೆ ಇಲ್ಲಿಯೂ ಕೊಳ್ಳಬಹುದು.  ನಮ್ಮ ಗುರಿಯೇನೆಂದರೆ ವಿಶ್ವಸನೀಯ ಶಾಪಿಂಗ್ ವೇದಿಕೆಯನ್ನು ನಿರ್ಮಿಸಿ ಅಲ್ಲಿ ಗ್ರಾಹಕರು ತಾವು ಬಯಸಿದ ಅಸಲಿ ಉತ್ಪನ್ನಗಳನ್ನು ಕೊಳ್ಳಲು ಮತ್ತು ಅವರಿಗೆ ಅದು ಅವರ ಸುತ್ತುಮುತ್ತಲೂ ಇರುವ ಅಧಿಕೃತ ಸ್ಥಾನೀಯ ಚಿಲ್ಲರೆ ಮಾರಾಟಗಾರರಿಂದ ದೊರಕುವಂತೆ ಮಾಡುವುದು.  ಈಕಾಮರ್ಸನಲ್ಲಿ ಸ್ಥೂಲವಾಗಿ ಎರಡು ವ್ಯಾಪಾರ ಮಾದರಿಗಳಿವೆ ಒಂದು ಪ್ರತಿ ಚಿಲ್ಲರೆ ಮಾರಾಟಗರರೊಂದಿಗೆ ಪಾಲುದಾರಿಕೆ ಹೊಂದುವುದು, ಇನ್ನೊಂದು ನೀವೇ ದೊಡ್ಡ ಚಿಲ್ಲರೆ ಮಾರಾಟಗಾರರಾಗುವುದು.  ನಮ್ಮ ದೃಷ್ಟಿಕೋನವೆನೆಂದರೆ ಮೊದಲನೆಯ ವ್ಯಾಪಾರ ಮಾದರಿಗೆ ಪ್ರೋತ್ಸಾಹ ನೀಡುವುದು.  ನಾವು ಲಕ್ಷಾಂತರ ಚಿಲ್ಲರೆ ಮಾರಾಟಗಾರರೊಂದಿಗೆ ಕೆಲಸ ಮಾಡುವುದರಲ್ಲಿ ಮತ್ತು ದೊಡ್ಡ ಉದ್ದೇಶಕ್ಕಾಗಿ ಕೆಲಸ ಮಾಡುವುದರಲ್ಲಿ ಹಾಗೂ ಒಂದು ಏಕಮುಖೀಯ ಚಿಲ್ಲರೆ ಮಾರಾಟಗಾರರಾಗುವುದನ್ನು ನಂಬುತ್ತೆವೆ.  ಇದಕ್ಕಾಗಿ ನಾವು ಅಂಗಡಿಕಾರರನ್ನು ಮತ್ತು  ಬ್ರಾಂಡ್‌ಗಳನ್ನು ತಮ್ಮ ವ್ಯಾಪಾರದಲ್ಲಿ ತಂತ್ರಜ್ಞಾನ ಆಧಾರಿತ ವ್ಯಾಪಾರಕ್ಕಾಗಿ ಪಾಲುದಾರರಾಗಲು ಆಹ್ವಾನಿಸುತ್ತಿದ್ದೆವೆ.  ನಾವು ಭಾರತದ ಅತಿದೊಡ್ಡ ವಿಶ್ವಸನೀಯ ಚಿಲ್ಲರೆ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಹಂಚಿಕೆಯಲ್ಲಿ ತೊಡಗಿದ್ದೆವೆ. 

 

ಪೇಟಿಎಮ್ ಮಾಲ್, ತನ್ನ ಮಾಲ್‌ನಲ್ಲಿ, ತಂತ್ರಜ್ಞಾನ ಹೊಂದಿರುವ ಅಧಿಕೃತ ಬ್ರಾಂಡ್ ಮಾರಾಟಗಾರರನ್ನು ಹೊಂದಲು ಸಜ್ಜಾಗಿದೆ.  ದೇಶದ ಪ್ರತಿಯೊಂದು ಪಟ್ಟಣದಲ್ಲಿ ಈ ಅಂಗಡಿಗಳು ಎಲ್ಲಾ ಬ್ರಾಂಡ್‌ಗಳನ್ನು ತನ್ನ ಬಂಡವಾಳವನ್ನು ನಿಯುಂತ್ರಿಸಲು, ಪ್ರಾಯೋಜಿಸಲು, ಮತ್ತು ಮರುಪಡೆಯುವ ಹಾಗೂ ಬದಲಾಯಿಸುವ ಪಾಲಿಸಿಗಳನ್ನು ಮತ್ತು ತಮ್ಮ ಹರವನ್ನು ವಿಸ್ತಾರ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.  ಇದರಿಂದ ಲಕ್ಷಾಂತರ ಗ್ರಾಹಕರಿಗೆ ಆನ್‌ಲೈನ್ ಬ್ರಾಂಡ್ ಅಂಗಡಿಗಳಲ್ಲಿ, ಸಂಪೂರ್ಣವಾದ ಕ್ಯಾಟಲಾಗ್ ಅನ್ನು ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಲು ಅನುವು ಮಾಡಿಕೊಡುತ್ತದೆ. 

 

No comments:

Post a Comment