Friday 4 August 2017

ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಶೇಷ ಏನು..?

ಬೆಂಗಳೂರು (ಆ.02): ಸಿಲಿಕಾನ್ ಸಿಟಿಯಲ್ಲಿ ಈಗ ಕ್ಯಾಂಟಿನ್'ಗಳದ್ದೆ ಸದ್ದು. ಇಂದಿರಾ ಕ್ಯಾಂಟಿನ್ ಸದ್ದು ಗದ್ದಲದ ನಡುವೆಯೇ ಇಂದು ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಗೊಂಡಿದೆ. ಕಡಿಮೆ ದರದಲ್ಲಿ ಬಡವರ ಹೊಟ್ಟೆ ತುಂಬಿಸೋಕೆ ಬಂದಿರುವ ನಮ್ಮ ಅಪ್ಪಾಜಿ ಕ್ಯಾಂಟೀನ್'ಗೆ ಇಂದು ಚಾಲನೆ ಸಿಕ್ಕಿದೆ. ಈ ಕ್ಯಾಂಟೀನ್ ವಿಶೇಷತೆಗಳೇನು? ಇಲ್ಲಿದೆ ನೋಡಿ

ರಾಜಧಾನಿಗರ ಹಸಿವು ನಿಗಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಊಟ-ತಿಂಡಿ ನೀಡುವ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸುವ ಮುನ್ನವೇ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಆರಂಭಗೊಂಡಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಹನುಮಂತನಗರದಲ್ಲಿ ತಲೆ  ಎತ್ತಿದ್ದು, ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಚಾಲನೆ ನೀಡಿದರು.  ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಚನ್ನಮ್ಮ ದೇವೇಗೌಡರು, ಶಾಸಕ ಗೊಪಾಲಯ್ಯ, ಹೊರಟ್ಟಿ ಸೆರಿದಂತೆ ಹಲವರು ಭಾಗಿಯಾಗಿದರು.

ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಶೇಷ ಏನು..?

ಅಪ್ಪಾಜಿ ಕ್ಯಾಂಟೀನ್‌ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್‌, ಕೇಸರಿಬಾತ್‌, ಸಿಗುತ್ತೆ.

10 ರೂ.ಗೆ ಪೊಂಗಲ್‌, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್‌ ಬಾತ್‌,

3 ರೂ.ಗೆ ಕಾಫಿ-ಟೀ ನೀಡಲಾಗುವುದು.

ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ. ಇದೇ ಕ್ಯಾಂಟೀನ್ ನಲ್ಲಿ ಅಡುಗೆ ತಯಾರಿ ಆಗಲಿದೆ.

ನರೇಂದ್ರ ಮೋದಿ ಅವರ ಚಾಯ್ ಪೇ ಚರ್ಚಾ ಮಾದರಿಯಲ್ಲಿ ಮುದ್ದೆ ಜತೆಗೆ ಚರ್ಚೆ ಕಾರ್ಯಕ್ರಮ ಕೂಡಾ ಈ ಕ್ಯಾಂಟೀನ್ ಮೂಲಕ ಜೆಡಿಎಸ್ ಏರ್ಪಡಿಸುವ ಸಾಧ್ಯತೆಗಳಿವೆ.

10 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣ ಆಗಿದ್ದು,ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ,ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮೊದಲ ದಿನವಾದ ಇಂದು ಅಪ್ಪಾಜಿ ಕ್ಯಾಂಟಿನ್ ಮುಂದೆ ಜನಸಾಗರವೇ ಹರಿದು ಬಂದಿತ್ತು. ಇಂದು ಉಚಿತ ಊಟ ನೀಡಿದ್ದು ಸಾರ್ವಜನಿಕರು ತಿಂದು ಖುಷಿಯಾದರು.  ಅಲ್ಲದೆ ಇಷ್ಟು ಕಡಿಮೆಗೆ ಎಲ್ಲೂ ಊಟ ಸಿಗುತ್ತಿಲ್ಲ.  ಹೀಗಾಗಿ ಬಡವರಿಗೆ ಇದೊಂದು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತಾ ಸಾರ್ವಜನಿಕರ ಖುಷಿಪಟ್ಟರು.

ಸದ್ಯ ಹನುಮಂತನಗರದಲ್ಲಿ ಅಪ್ಪಾಜಿ ಕ್ಯಾಂಟಿನ್ ತೆರೆಯಲಾಗಿದೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದರೆ  ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ. ಬಡ ಜನರಿಗಾಗಿ ತೆರೆದಿರುವ ಕ್ಯಾಂಟಿನ್ ಹೀಗೆ ಮುಂದುವರೆಯಲಿ ಅನ್ನೋದು ಸಾರ್ವಜನಿಕರ ಅಭಿಪ್ರಾಯ.

No comments:

Post a Comment