Sunday 6 August 2017

"ಜಕ್ಕಣಕಣ ಜನಾರೆ" ಜಾನಪದ ಜಾತ್ರೆ

"ಜಕ್ಕಣಕಣ ಜನಾರೆ" ಜಾನಪದ ಜಾತ್ರೆ
ಮಹಾಲಕ್ಷ್ಮೀಲೇಜೌಟ್ ವಿದಾನಸಭಾ ಕ್ಷೇತ್ರದ ಶಂಕರಮಠ ವಾರ್ಡನಲ್ಲಿ ಜಾನಪದ ಜಾತ್ರೆಯಾದ "ಜಕ್ಕಣಕಣ ಜನಾರೆ"ಗ್ರಾಮೀಣ ಸಾಂಸ್ಕೃತಿಕ. ಕಲಾ ವೈಭವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್ ಹಾಗೂ ಸಂಗೀತ ಲೋಕದ ಮಾಂತ್ರಿಕ ಹಂಸಲೇಖಾರವರು ಹಾಗೂ ಮಾಜಿ ಶಾಸಕರಾದ ನೆ.ಲ.ನರೇಂದ್ರ ಬಾಬುರವರು  ಶಂಕರಮಠ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ
ಎಂ.ಶಿವರಾಜು ಮತ್ತು ಮಹಾಲಕ್ಷ್ಮೀಪುರಂ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವಮೂರ್ತಿ ,ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಭಾರತಿ ಶಂಕರ್ ಹಾಗೂ ನಾಮ ನಿರ್ದಶಿತ ಬಿ.ಬಿ.ಎಂ.ಪಿ ಸದಸ್ಯರಾದ ರಾಧ ವೆಂಕಟೇಶ್ ರವರು ಜಾನಪದ ಸಂಗೀತ
ಜಾತ್ರೆಯನ್ನು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ರೈತಗೀತೆ ಮುಖಾಂತರ ಕಾರ್ಯಕ್ರವನ್ನು ಚಾಲನೆ ನೀಡಿದರು.
🌼🌻🌸
ಜಕ್ಕಣಕಣ ಜನಾರೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ದಿನೇಶ್ ಗುಂಡುರಾವ್ ರವರು ಇಂದಿನ ಮಕ್ಕಳಿಗೆ ಗ್ರಾಮಿಣ ಕಲೆಯಾದ ವೀರಗಾಸೆ ,ಮಲ್ಲಕಂಬ ,ಯಕ್ಷಗಾನ ,ಜಾನಪದ ಸಂಗೀತ ಲಾಲಿಹಾಡು ಮತ್ತು ಸೋಮನ ಕುಣಿತ ಹಲವಾರು ಹಳ್ಳಿಯ ಸೂಗಡಿನ ಸಂಗೀತ ಇಂದಿನ ಮಕ್ಕಳಿಗೆ ತಿಳಿದಿಲ್ಲ .ಎಂ.ಶಿವರಾಜುರವರು ಕನ್ನಡ ಭಾಷೆ ,ಜಾನಪದ ಕಲೆ ಉಳಿಸಲು ಸತತವಾಗಿ ಹೋರಟ ಮಾಡುತ್ತಿದ್ದಾರೆ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ "ಅಂಗಳ"ಎಂಬ ಗ್ರಾಮೀಣ ಕ್ರೀಡಾಕೂಟ ಯೋಜನೆ ಜಾರಿಗೆ ತಂದಿದ್ದರು.ಎಂದು ಹೇಳಿದರು .ನಾದಬ್ರಹ್ಮ ಹಂಸಲೇಖಾರವರು ಮಾತನಾಡಿ ಕಳೆದ 60ವರ್ಷಗಳಿಂದ ಕನ್ನಡ ನೆಲ ,ನನಗೆ ಆಶ್ರಯ ನೀಡಿ ಸಲುಹಿದೆ ಹಾಗೂ ಕುವೆಂಪು ರವರ ರೈತ ಗೀತೆಯಾದ ನೇಗಿಲ ಮೇಲೆ ಜಾನಪದ ಸಂಗೀತ ನಿಂತಿದೆ ಎಂದು ಹೇಳಿದರು.
ಮಹಾಲಕ್ಷ್ಮೀಲೇಜೌಟ್ ವಿದಾನಸಭಾ ಕ್ಷೇತ್ರದ ಐದು ಕಡೆಗಳಲ್ಲಿ ಜಕ್ಕಣಕಣ ಜನಾರೆ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ,ಇಂದಿನ ಯುವ ಪೀಳಿಗೆಗೆ ನಮ್ಮ ಕಲೆ,ಸಂಸ್ಕೃತಿ ಪರಿಚಯ ಹಾಗೂ ಗಂಡುಕಲೆಯನ್ನು ಉಳಿಸಬೇಕು ಇದು ನಮ್ಮ ಉದ್ದೇಶವೆಂದು ಎಂ.ಶಿವರಾಜು ರವರು ಸಮಾರಂಭದಲ್ಲಿ ಮಾತನಾಡಿದರು.
             

No comments:

Post a Comment