ಪೆಟಿಎಮ್ ಈ ಕಾಮರ್ಸ್ ಪ್ರೈವೈಟ್ ಲಿಮಿಟೆಡ್, ನವರ ಮಾಲೀಕತ್ವದ ಪೆಟಿಎಮ್ ಮಾಲ್ ಸುಮಾರು 2000 ಬ್ರಾಂಡ್‌ಗಳಷ್ಟು ಅಧಿಕೃತ ದ್ವಿಚಕ್ರ ವಾಹನಗಳನ್ನು ಡೀಲರ್‌ಗಳ ಮುಖಾಂತರವಾಗಿ 500 ಪಟ್ಟಣಗಳಲ್ಲಿ ದೊಡ್ಡ ಪಟ್ಟಿಯನ್ನು ಹೊಂದಿದೆ. ಈ ಅಂಗಡಿಗಳವರು ಪೆಟೆಎಮ್ QR ಕೋಡ್‌ನಿಂದ ಸಜ್ಜಿತರಾಗಿದ್ದು ಗ್ರಾಹಕರಿಗೆ ಬೇಕೆನಿಸಿದ ತಕ್ಷಣ ಕ್ಯಾಟಲಾಗ್‌ನಲ್ಲಿ ಹುಡುಕಲು ಮತ್ತು ಸ್ಕಾನ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಅಂತಹ ದೊಡ್ಡ ಬಂಡವಾಳ ಹೊಡದೆಯೆ ಅವರು ದೊಡ್ಡ ಮಾರಾಟವನ್ನು ಹೊಂದುವುದರಲ್ಲಿ ಸಹಾಯ ಮಾಡುತ್ತಿದೆ.
ಅವರ ಆಪ್‌ಲೈನ್ ಟು ಆನ್‌ಲೈನ್ ಮಾದರಿಯಲ್ಲಿ ಪೆಟಿಎಮ್ ಮಾಲ್‌ನವರು ತಮ್ಮ ಗ್ರಾಹಕರು ತಮ್ಮಗಿಷ್ಟ ಬಂದ ವಾಹನಗಳನ್ನು ಈ ವೇದಿಕೆಯಡಿಯಲ್ಲಿ ಬುಕ್ ಮಾಡಬಹುದಾದ ಅವಕಾಶವನ್ನು ಕಲ್ಸಿಸಿಕೊಟ್ಟಿದ್ದು ಅವರು ತಮ್ಮ ವಾಹನಗಳನ್ನು ತಮ್ಮ ಹತ್ತಿರದ ಅಂಗಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಹಬ್ಬದ ಋತುವಿನಲ್ಲಿ ಪ್ರಸ್ತುತ ಪೆಟಿಎಮ್ ಮಾಲ್ ಪ್ರತಿ ನಿಮಿಷಕ್ಕೊಮ್ಮೆ 10 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಅದು ವಾಹನಗಳಲ್ಲಿ ಇತರ ವಾಹನಗಳ ಬ್ರಾಂಡ್‌ಗಳ ಜೊತೆಯಲ್ಲಿ ಪ್ರಮುಖ ಬ್ರಾಂಡ್‌ಗಳಾದ ಸುಜುಕಿ, ಹೀರೋ ಮೊಟೊಕಾರ್ಪ್, ಟಿವಿಎಸ್, ಯಮಹಾ, ಮತ್ತು ಮಹೀಂದ್ರಾ, ಹಾಗೂ ವೆಸ್ಪಾ, ಏಪ್ರಿಲಿಯಾ, ಇವುಗಳು ಹಲವಾರು ಬ್ರಾಂಡ್‌ಗಳಲ್ಲಿ ಕೆಲವು. ವಿನೂತನವಾದ ಮೊದಲನೆಯದು ಆದ ಈ ಮಾದರಿಯಲ್ಲಿ ಪಾಲುದಾರರಾದ ಡೀಲರ್‌ಗಳು ಪೆಟಿಎಮ್ QR ಕೋಡ್‌ಅನ್ನು ಹಲವಾರು ರೀತಿಯ ಮಾರುಕಟ್ಟೆಯ ಮಾಧ್ಯಮಗಳಲ್ಲಿ ಹಾಗೂ ಅಚ್ಚಾದ ಜಾಹೀರಾತುಗಳಲ್ಲಿ ಹೊರಾಂಗಣ ಅಳವಡಿಕೆಗಳಲ್ಲಿ ಅಥವಾ BTL ಮಾರುಕಟ್ಟೆಗಳ ವಸ್ತುಗಳಲ್ಲಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಮತ್ತು ದೊರೆತ ಲೀಡ್‌ಗಳಿಗೆ ಪರೀಕ್ಷಾತ್ಮಕ ರೈಡಗಳನ್ನು ಮುಂಬರುವ ಹಬ್ಬದ ಋತುವಿನಲ್ಲಿ ನೀಡಲು ಸಜ್ಜಾಗಿದ್ದಾರೆ.
ಅಮಿತ್ ಶಾ, ಪೆಟಿಎಮ್ ಮಾಲ್‌ನ ಮುಖ್ಯ ಕಾರ್ಯನಿರತ ನಿರ್ವಾಹಕರು, ಹೇಳುವಂತೆ ನಮಗೆ ದ್ವಿಚಕ್ರ ವಾಹನಗಳ ಬುಕಿಂಗ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ದೊರತಿದೆ. ನಮ್ಮ ವಿನೂತನ ಆಪ್‌ಲೈನ್ ಟು ಆನ್‌ಲೈನ್ ಮಾದರಿಯಲ್ಲಿ ನಾವು ಪ್ರತಿ ನಿಮಿಷಕ್ಕೊಮ್ಮೆ 10 ವಾಹನಗಳನ್ನು ಮಾರಾಟ ಮಾಡುತ್ತಿದ್ದೆವೆ. ನಮ್ಮ QR ಕೋಡ್‌ಗಳು ನಮ್ಮ ಪಾಲುದಾರರಾದ ಡೀಲರ್‌ಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಬೇಡಿಕೆಯಿರುವ ಈ ಹಬ್ಬದ ಋತುವಿನಲ್ಲಿ ಉತ್ತಮ ರೀತಿಯ ಸೇವೆಯನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮುಂಬರುವ ವಾರಗಳಲ್ಲಿ, ನಾವು ನೂರಾರು ಹೊಸ ಡೀಲರ್‌ಗಳನ್ನು ಸೇರಿಸಿಕೊಳ್ಳಲಿದ್ದು ಅದು ನಮ್ಮ ಹರಿವನ್ನು ಮತ್ತಷ್ಟು ವಿಸ್ತಾರ ಮಾಡಲಿದ್ದು ಅದು ಸಣ್ಣ ಪಟ್ಟಣಗಳಿಗೂ ತಲುಪಲಿದ್ದು ನಮ್ಮ ವಿಶಿಷ್ಟತೆಯನ್ನು ಮೌಲ್ಯವನ್ನು ಹೆಚ್ಚಿಸಲಿದೆ."
No comments:
Post a Comment