ಘನತೆವೆತ್ತರೇ,
ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೇ,
ಅಧ್ಯಕ್ಷ ಜಾಕೋಬ್ ಜುಮಾ ಅವರೇ,
ಅಧ್ಯಕ್ಷ ಮೈಕಲ್ ತೆಮೆರ್ ಅವರೇ,
ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ
ನಾನು ಅಧ್ಯಕ್ಷ ಕ್ಸಿ ಅವರಿಗೆ ಅವರ ಆತ್ಮೀಯ ಆತಿಥ್ಯಕ್ಕೆ ಮತ್ತು ಈ ಶೃಂಗವನ್ನು ಅದ್ಭುತವಾಗಿ ಆಯೋಜಿಸಿರುವುದಕ್ಕೆ ಮತ್ತೊಮ್ಮೆ ಧನ್ಯವಾದ ಅರ್ಪಿಸುವ ಮೂಲಕ ನನ್ನ ಮಾತು ಆರಂಭಿಸುತ್ತೇನೆ. ನಿರ್ಬಂಧಿತ ಅಧಿವೇಶನಗಳಲ್ಲಿ ನಮ್ಮ ನಡುವೆ ನಡೆದ ಮಾತುಕತೆಗಳು ರಚನಾತ್ಮಕವಾಗಿತ್ತು. ಇದು ಪರಸ್ಪರ ಪ್ರಗತಿ ಮತ್ತು ತಿಳಿವಳಿಕೆಯನ್ನು ಹೆಚ್ಚಿಸಿತು. ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿರುವ ಬ್ರಿಕ್ಸ್ ಸಹಕಾರದ ಚೈತನ್ಯದಾಯಕ ಚೌಕಟ್ಟು ಹೊಂದಿದೆ. ಅನಿಶ್ಚಿತತೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ನಾವು ಸ್ಥಿರತೆ ಮತ್ತು ಪ್ರಗತಿಗೆ ಕೊಡುಗೆ ನೀಡಿದ್ದೇವೆ. ವಾಣಿಜ್ಯ ಮತ್ತು ಆರ್ಥಿಕತೆ ನಮ್ಮ ಸಹಕಾರದ ತಳಹದಿಯಾಗಿವೆ. ನಮ್ಮ ಇಂದಿನ ಪ್ರಯತ್ನಗಳು ವಿವಿಧ ಕ್ಷೇತ್ರಗಳಾದ ತಂತ್ರಜ್ಞಾನ, ಸಂಪ್ರದಾಯ, ಸಂಸ್ಕೃತಿ, ಕೃಷಿ, ಪರಿಸರ, ಇಂಧನ, ಕ್ರೀಡೆ ಮತ್ತು ಐಸಿಟಿಗಳನ್ನು ಸ್ಪರ್ಶಿಸಿದೆ. ಹೊಸ ಅಭಿವೃದ್ಧಿ ಬ್ಯಾಂಕ್, ಬ್ರಿಕ್ಸ್ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿಗಾಕಿ ಮತ್ತು ಮೂಲಸೌಕರ್ಯಕ್ಕಾಗಿ ಸಂಪನ್ಮೂಲ ಕ್ರೋಡೀಕರಣದ ತನ್ನ ಕರ್ತವ್ಯಕ್ಕನುಗುಣವಾಗಿ ಸಾಲ ವಿತರಣೆ ಆರಂಭಿಸಿದೆ. ಅದೇ ವೇಳೆ, ನಮ್ಮ ಸೆಂಟ್ರಲ್ ಬ್ಯಾಂಕ್ ಗಳು ಕೂಡ ತಮ್ಮ ತುರ್ತು ಮೀಸಲು ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಚರಣೆಗೆ ತಂದಿವೆ. ನಾವು ನಿರ್ಮಾಣ ಮಾಡುವ ಪ್ರಗತಿಯಲ್ಲಿ ಇವು ಮೈಲಿಗಲ್ಲುಗಳಾಗಿವೆ. ಮುಂದೆ ನೋಡುವುದಾದರೆ, ನಮ್ಮ ಜನರು ನಮ್ಮ ಪಯಣದ ಕೇಂದ್ರದಲ್ಲಿ ಉಳಿಯುವುದು ಬಹಳ ಮುಖ್ಯ. ಕಳೆದ ವರ್ಷದಿಂದ ಚೈನಾ ಜನರೊಂದಿಗಿನ ಸಂಪರ್ಕವನ್ನು ಮುಂದೆ ತೆಗೆದುಕೊಂಡು ಹೋಗುತ್ತಿದೆ ಎಂದು ಹೇಳಲು ಹರ್ಷಿಸುತ್ತೇನೆ. ಇಂಥ ಅಂತರ್ ಮಿಲನಗಳು ನಮ್ಮ ಸಂಪರ್ಕವನ್ನು ಸಮಗ್ರಗೊಳಿಸುತ್ತದೆ ಮತ್ತು ನಮ್ಮ ಪರಸ್ಪರ ಅರಿವನ್ನು ಆಳಗೊಳಿಸುತ್ತದೆ.
ಘನತೆವೆತ್ತರೆ,
ಭಾರತದ ಪರಿವರ್ತನೆಯ ದೂರಗಾಮಿ ಪಯಣವು ನಮ್ಮ ಜನರಿಗೆ ಹೆಮ್ಮೆ ತಾಣ ಒದಗಿಸಿದೆ. ಆರೋಗ್ಯ, ನೈರ್ಮಲ್ಯ, ಕೌಶಲ, ಆಹಾರ ಭದ್ರತೆ, ಲಿಂಗ ಸಮಾನತೆ, ಇಂಧನ, ಶಿಕ್ಷಣ ಮತ್ತು ನಾವಿನ್ಯತೆಯ ಖಾತ್ರಿಗಾಗಿ ಮತ್ತು ಬಡತನ ನಿರ್ಮೂಲನೆಗೆ ನಾವು ಯಂತ್ರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದೇವೆ; ಗಂಗಾ ಶುದ್ಧೀಕರಣ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಭಾರತ, ಸ್ಮಾರ್ಟ್ ನಗರ, ಎಲ್ಲರಿಗೂ ವಸತಿ ಮತ್ತು ಕೌಶಲ ಭಾರತ ಕಾರ್ಯಕ್ರಮಗಳು ಸ್ವಚ್ಛ, ಹಸಿರು ಮತ್ತು ಸಮಗ್ರ ಅಭಿವೃದ್ಧಿಯ ಸೋಪಾನಗಳಾಗಿವೆ. ಅವರು ನಮ್ಮ 800 ದಶಲಕ್ಷ ಯುವಕರ ರಚನಾತ್ಮಕ ಚೈತನವ್ಯವನ್ನು ಬಳಸಿಕೊಳ್ಳುತ್ತಿವೆ. ನಮ್ಮ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮಹಿಳೆಯರ ಚೈತನ್ಯವನ್ನು ರಾಷ್ಟ್ರ ನಿರ್ಮಾಣದಲ್ಲಿ ಫಲಪ್ರದವಾಗಿ ದ್ವಿಗುಣಗೊಳಿಸುತ್ತಿವೆ. ನಾವು ಕಪ್ಪಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದೇವೆ. ನಮ್ಮ ರಾಷ್ಟ್ರೀಯ ಅನುಭವದ ಚಿಮ್ಮುವ ಸಾಧನ ಬಳಸಿಕೊಂಡು ಮುಂದೆ ಸಾಗಿದರೆ, ಬ್ರಿಕ್ಸ್ ರಾಷ್ಟ್ರಗಳು ಪಾಲುದಾರಿಕೆಯನ್ನು ಆಳಗೊಳಿಸಿ ಯಶಸ್ಸಿನ ಫಲಿತಾಂಶ ಪಡೆಯಬಹುದಾಗಿದೆ. ಪರಸ್ಪರ ಸಹಕಾರವನ್ನು ಮೇಲ್ದರ್ಜೆಗೇರಿಸಲು ಕೆಲವು ಚಿಂತನೆಗಳು ಮನದಲ್ಲಿ ಮೂಡಿವೆ. ಮೊದಲನೆಯದಾಗಿ, ಕಳೆದ ವರ್ಷ ನಾವು ಬ್ರಿಕ್ಸ್ ಶ್ರೇಣೀಕರಣ ಸಂಸ್ಥೆ ರಚಿಸುವ ಪ್ರಯತ್ನದ ಬಗ್ಗೆ ಚರ್ಚಿಸಿದ್ದೇವು. ತಜ್ಞರ ತಂಡವೊಂದು ಅಂಥ ಸಂಸ್ಥೆಯ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸುತ್ತಿದೆ. ನಾನು ಇದರ ರಚನೆಗೆ ಆದಷ್ಟು ಬೇಗ ಮಾರ್ಗಸೂಚಿಯನ್ನು ಆಖೈರುಗೊಳಿಸುವಂತೆ ಮನವಿ ಮಾಡುತ್ತೇನೆ. ಎರಡನೆಯದಾಗಿ ನಮ್ಮ ಕೇಂದ್ರೀಯ ಬ್ಯಾಂಕ್ ಗಳು ತಮ್ಮ ಸಾಮರ್ಥ್ಯವನ್ನು ಮತ್ತು ಐಎಂಎಫ್ ಹಾಗೂ ತುರ್ತು ಮೀಸಲು ಒಪ್ಪಂದಗಳ ಸಹಕಾರವನ್ನು ಉತ್ತೇಜಿಸಬೇಕು. ಮೂರನೆಯದಾಗಿ, ಕೈಗೆಟಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಇಂಧನ ನಮ್ಮ ದೇಶಗಳ ಅಭಿವೃದ್ಧಿಗೆ ಪ್ರಮುಖವಾದುದಾಗಿದೆ. ಹವಾಮಾನ ಸಹಿಷ್ಣುವಾದ ಅಭಿವೃದ್ಧಿಯು ಲಭ್ಯವಿರುವ ಸಂಪನ್ಮೂಲ ವಾಹಿನಿಗಳ ಬಳಕೆಗೆ ಕರೆ ನೀಡುತ್ತದೆ. ನವೀಕರಿಸಬಹುದಾದ ಇಂಧನವು ಬಹುಹಂತದಲ್ಲಿ ಅತಿ ಮುಖ್ಯವಾದುದಾಗಿದೆ. ಇದನ್ನು ಗುರುತಿಸಿರುವ ಭಾರತವು ಫ್ರಾನ್ಸ್ ನೊಂದಿಗೆ ಪ್ರಮುಖವಾದ ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ)ಯನ್ನು 2015ರಲ್ಲಿ ಆರಂಭಿಸಿದೆ. ಇದು 121 ರಾಷ್ಟ್ರಗಳನ್ನು ಒಟ್ಟಿಗೆ ತಂದಿದ್ದು, ಸೌರ ಶಕ್ತಿಯ ಬಳಕೆಯಿಂದ ಪರಸ್ಪರ ಲಾಭ ತಂದಿದೆ. ಬ್ರಿಕ್ಸ್ ರಾಷ್ಟ್ರಗಳು ಐ.ಎಸ್.ಎಯಲ್ಲಿ ಆಪ್ತವಾಗಿ ಕೆಲಸ ಮಾಡಿ, ಸೌರಶಕ್ತಿಯ ಕಾರ್ಯಕ್ರಮವನ್ನು ಬಲಪಡಿಸಬಹುದಾಗಿದೆ. ನಮ್ಮ ಐದು ರಾಷ್ಟ್ರಗಳು ನವೀಕರಿಸಬಹುದಾದ ಮತ್ತು ಸೌರ ಇಂಧನ ಉತ್ತೇಜನಕ್ಕೆ ಪೂರಕವಾದ ಕೌಶಲ ಮತ್ತು ಬಲವನ್ನು ಹೊಂದಿವೆ. ಇಂಥ ಸಹಕಾರಕ್ಕೆ ಬೆಂಬಲ ನೀಡಲು ಎನ್.ಡಿ.ಬಿ. ಸಹ ಒಂದು ಸಮರ್ಥವಾದ ನಂಟನ್ನು ಐ.ಎಸ್.ಎ.ಯೊಂದಿಗೆ ಬೆಸೆದಿದೆ. ನಾವು ಇನ್ನೂ ಹೆಚ್ಚಿನ ಶುದ್ಧ ಇಂಧನ ಆರ್ಥಿಕ ನೆರವನ್ನು ಅದರಲ್ಲೂ, ಸೌರ ಶಕ್ತಿಯಲ್ಲಿ ಎನ್.ಬಿ.ಡಿ. ನೋಡ ಬಯಸುತ್ತೇವೆ. ನಾಲ್ಕನೆಯದಾಗಿ, ನಾವು ಅತಿ ದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ನಾವು ನಮ್ಮ ಯುವಕರನ್ನು ಎಷ್ಟು ಸಾಧ್ಯವೋ ಅಷ್ಟು ಜಂಟಿ ಉಪಕ್ರಮಗಳ ಮೂಲಕ ಮುಖ್ಯ ವಾಹಿನಿಗೆ ತರಬೇಕಾಗಿದೆ. ಕೌಶಲ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಳ ಮತ್ತು ಉತ್ತಮ ಪದ್ಧತಿಗಳ ವಿನಿಮಯವು ಅತ್ಯಂತ ಮೌಲ್ಯಯುತ ಸಾಧನವಾಗಿದೆ. ಐದನೆಯದಾಗಿ, ಗೋವಾ ಶೃಂಗದಲ್ಲಿ ಕಳೆದ ವರ್ಷ, ನಮ್ಮ ನಗರಗಳ ನಡುವಿನ ಸಹಕಾರದ ನಿಟ್ಟಿನಲ್ಲಿ ನಾವು ಸ್ಮಾರ್ಟ್ ನಗರ, ನಗರೀಕರಣ ಮತ್ತು ವಿಕೋಪ ನಿರ್ವಹಣೆ ಕುರಿತಂತೆ ನಮ್ಮ ಚಿಂತನೆಗಳನ್ನು ವಿನಿಮಯ ಮಾಡಿಕೊಂಡಿದ್ದೆವು. ನಾವು ಈ ಮಾರ್ಗದಲ್ಲಿ ತ್ವರಿತವಾಗಿ ಸಾಗಬೇಕಾಗಿದೆ. ಆರನೆಯದಾಗಿ, ತಂತ್ರಜ್ಞಾನ ಮತ್ತು ನಾವಿನ್ಯತೆ ಜಾಗತಿಕ ಪ್ರಗತಿ ಮತ್ತು ಪರಿವರ್ತನೆಗೆ ಮುಂದಿನ ಪೀಳಿಗೆಗೆ ತಳಹದಿಯಾಗಿದೆ. ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಸಂಪನ್ಮೂಲ ಶಕ್ತಿಶಾಲಿ ಸಾಧನ ಎಂದು ಭಾರತ ಅರಿತಿದೆ. ನಾವಿನ್ಯತೆ ಮತ್ತು ಡಿಜಿಟಲ್ ಆರ್ಥಿಕತೆಯ ಬಲವಾದ ಬ್ರಿಕ್ಸ್ ಪಾಲುದಾರಿಕೆಯು ಪ್ರಗತಿಗೆ ಇಂಬು ನೀಡಲಿದೆ, ಪಾರದರ್ಶಕತೆ ಹೆಚ್ಚಿಸಲಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಬೆಂಬಲ ನೀಡುತ್ತದೆ. ನಾನು ಬ್ರಿಕ್ಸ್ ಚೌಕಟ್ಟಿನಡಿಯಲ್ಲಿ ಖಾಸಗಿ ಉದ್ಯಮಶೀಲತೆಯೂ ಸೇರಿದಂತೆ ಸಹಯೋಗದ ಪ್ರಾಯೋಗಿಕ ಯೋಜನೆಯನ್ನು ಪರಿಗಣಿಸಲು ಸಲಹೆ ನೀಡುತ್ತೇನೆ. ಅಂತಿಮವಾಗಿ, ಭಾರತವು ಬ್ರಿಕ್ಸ್ ಮತ್ತು ಆಫ್ರಿಕಾದ ರಾಷ್ಟ್ರಗಳೊಂದಿಗೆ ಕೌಶಲ, ಆರೋಗ್ಯ, ಮೂಲಸೌಕರ್ಯ, ಉತ್ಪಾದನೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಸಾಮರ್ಥ್ಯವರ್ಧನೆಗೆ ಹೆಚ್ಚಿನ ಗಮನ ಹರಿಸಿ ಕೆಲಸ ಮಾಡಲು ಹರ್ಷಿಸುತ್ತದೆ.
ಘನತೆವೆತ್ತರೇ,
ಕಳೆದ ಒಂದು ದಶಕದಲ್ಲಿ, ನಮ್ಮ ದೇಶಗಳ ಎರಡು ತಲೆಮಾರಿನ ನಾಯಕರು, ಬ್ರಿಕ್ಸ್ನ ಸ್ಥಾಪನೆ ಮತ್ತು ಹೊರಹೊಮ್ಮುವಿಕೆಗೆ ಕೊಡುಗೆಯನ್ನು ನೀಡಿದ್ದಾರೆ. ನಾವು ವಿಶ್ವಾಸಾರ್ಹತೆ, ಪ್ರಭಾವಿತ ಮತ್ತು ಪ್ರಚೋದಿತ ಪ್ರಗತಿಯನ್ನು ಸಂಪಾದಿಸಿದ್ದೇವೆ. ಈಗ, ಮುಂದಿನ ದಶಕ ಮುಖ್ಯವಾದುದಾಗಿದೆ. ಸ್ಥಿರತೆ, ಸುಸ್ಥಿರ ಅಭಿವೃದ್ಧಿ ಮತ್ತು ಪ್ರಗತಿಯ ವಾತಾವರಣವನ್ನು ನಾವು ನಿರೀಕ್ಷಿಸುತ್ತೇವೆ. ಬ್ರಿಕ್ಸ್ ನಾಯಕತ್ವ ಪರಿವರ್ತನೆಯ ಪಯಣದಲ್ಲಿ ಪ್ರಮುಖವಾದುದಾಗಿದೆ. ವಿಶ್ವ ಸುವರ್ಣ ದಶಕ ಎಂದು ಕರೆಯುವ ಇದರಲ್ಲಿ ನಾವು ಬ್ರಿಕ್ಸ್ ಆಗಿ ಈ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ನಾಳಿನ ಮಾರುಕಟ್ಟೆಗಳೊಂದಿಗೆ ನಮ್ಮ ದೂರಗಾಮಿ ವಲಯ ಹೊರಹೊಮ್ಮಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ನಮ್ಮ ಕೆಲವು ಕಲ್ಪನೆಗಳನ್ನು ಹಂಚಿಕೊಳ್ಳುತ್ತೇನೆ. ಇದು ನಮ್ಮ ಹಂಚಿಕೆಯ ಪಾಲುದಾರಿಕೆ ಪಯಣದಲ್ಲಿ ಹೊಸ ಎತ್ತರಕ್ಕೆ ಏರಲು ಬ್ರಿಕ್ಸ್ ಗೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ. ಧನ್ಯವಾದಗಳು.
No comments:
Post a Comment