Friday 8 September 2017

ಉಬರ್‍ ನಿಂದ  ಬೆಂಗಳೂರಿನಲ್ಲಿ ಭಾರತದಅತ್ಯಂತ ದೊಡ್ಡ ಗ್ರೀನ್‍ಲೈಟ್ ಸೆಂಟರ್ಪ್ರಾರಂಭ

ಉಬರ್‍ ನಿಂದ  ಬೆಂಗಳೂರಿನಲ್ಲಿ ಭಾರತದಅತ್ಯಂತ ದೊಡ್ಡ ಗ್ರೀನ್‍ಲೈಟ್ ಸೆಂಟರ್ಪ್ರಾರಂಭ


ವಿಶ್ವದ ಅತ್ಯಂತ ದೊಡ್ಡ ರೈಡ್-ಶೇರಿಂಗ್ ಕಂಪನಿಉಬರ್ ಇಂದು ನಗರದ ವಿಂಡ್ ಟನಲ್ರಸ್ತೆಯಲ್ಲಿ ಆರಂಭಿಸಿದ ಭಾರತದ ಅತ್ಯಂತದೊಡ್ಡ ಗ್ರೀನ್‍ಲೈಟ್ ಸೆಂಟರ್ ಅನ್ನು ಸಾರಿಗೆಇಲಾಖೆಯ ಪ್ರಧಾನ ಕಾರ್ಯದರ್ಶಿಡಾ.ಬಿ.ಬಸವರಾಜು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ಗ್ರಾಹಕರಿಗೆಉತ್ತಮ ಸೇವೆ ನೀಡುವತ್ತ ಚಾಲಕರು ಹೆಚ್ಚಿನಗಮನ ನೀಡಬೇಕು ಎಂದರು. ರಾಜ್ಯದಲ್ಲಿಸಾರಿಗೆ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರಕಾರಹೆಚ್ಚಿನ ಗಮನ ನೀಡುತ್ತಿದೆ. ರಾಜ್ಯದಲ್ಲಿನಡೆಯುತ್ತಿರುವ ಅಪಘಾತಗಳಲ್ಲಿ ಹೆಚ್ಚಿನವುದ್ವಿಚಕ್ರ ವಾಹನಗಳದ್ದೇ ಆಗಿವೆ. ಸರಿಯಾದಚಾಲನೆಯಿಂದ ಹಾಗೂ ವಾಹನ ಚಲಾವಣೆಯತರಬೇತಿಯಿಂದ ಇವುಗಳನ್ನು ತಡೆಗಟ್ಟುವುದುಸಾಧ್ಯ ಎಂದರು. ಉಬರ್ ನಂತಹಸೇವಾದಾರರು ಗ್ರಾಹಕರಿಗೆ ಗುಣಮಟ್ಟದಸೇವೆಗಳನ್ನು ನೀಡುತ್ತಿದೆ ಎಂದರು. ಕೇವಲಪೊಲೀಸ್ ಮತ್ತು ಸಾರಿಗೆ ಇಲಾಖೆಯವರಿಂದರಸ್ತೆ ಸುರಕ್ಷತೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿಪ್ರತಿಯೋಬ್ಬರೂ ಕೈಜೋಡಿಸಬೇಕಾದ ಅಗತ್ಯದೆಇದೆ ಎಂದು ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಡಾ.ಬಿ ಬಸವರಾಜು ಹೇಳಿದರು. 

ಜನರಿಗೆ ಸುರಕ್ಷತೆ ಬಗ್ಗೆ ಎಷ್ಟೇ ತಿಳಿಸಿದರೂಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. 5.5ಲಕ್ಷ ಅಪಘಾತಗಳು ಪ್ರಸ್ತುತ ವರ್ಷದಲ್ಲಿಸಂಭವಿಸುತ್ತಿದ್ದು, ಅದರಲ್ಲಿ 1.5 ಲಕ್ಷ ಜನರುಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ದಿನದಿಂದದಿನಕ್ಕೆ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ.2001 ರಲ್ಲಿ ಬೆಂಗಳೂರಿನಲ್ಲಿ 29 ಲಕ್ಷವಾಹನಗಳಿದ್ದವು, ಆದರೆ ಇಂದು ಆ ಸಂಖ್ಯೆ 70ಲಕ್ಷಕ್ಕೂ ಹೆಚ್ಚಿವೆ. ರಾಜ್ಯದಲ್ಲಿ ಇಂದು 1.70ಕೋಟಿಗೂ ಅಧಿಕ ವಾಹನಗಳಿಗೆ. ಅಪಘಾತಗಳಸಂಖ್ಯೆ ಕಡಿಮೆಯಾಗಲು ಸಾರ್ವಜನಿಕರೂಕೈಜೋಡಿಸುವುದು ಅಗತ್ಯ ಎಂದರು. 

ಟ್ರ್ಯಾಕ್ಟರ್ ಟ್ರೈಲರ್‍ಗಳಿಂದ ಸಂಭವಿಸುವಅಪಘಾತವನ್ನು ತಡೆಯಲು ಸರಕಾರ ರೈತಸಾರಥಿ ಯೋಜನೆಯನ್ನು ಜಾರಿಗೆ ತಂದಿದೆ, ಈಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿಟ್ರ್ಯಾಕ್ಟರ್ ಚಾಲನೆ ಮಾಡುವವರಿಗೆ ತರಬೇತಿಮತ್ತು ವಾಹನ ಚಾಲನಾ ಪರವಾನಗಿನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಈಯೋಜನೆಯನ್ನು ದ್ವಿಚಕ್ರವಾಹನಗಳಿಗೂವಿಸ್ತರಿಸಲು ಚಿಂತನೆ ನಡೆದಿದೆ ಎಂದರು. 

ಈ ಗ್ರೀನ್‍ಲೈಟ್ ಸೆಂಟರ್ 15000 ಚದರ ಅಡಿವಿಸ್ತೀರ್ಣದ ಈ ಸೌಲಭ್ಯ ಬೆಂಗಳೂರಿನ ಚಾಲಕ-ಪಾಲುದಾರರಿಗೆ ಮೀಸಲಾಗಿದ್ದು ಅತ್ಯುತ್ತಮಗ್ರಾಹಕಸೇವೆ ಮತ್ತು ಬೆಂಬಲ  ನೀಡಲಿದೆ. ಹೊಸಚಾಲಕರ ಸೈನ್‍ಅಪ್‍ಗಳಿಂದ ಸಬ್ಸಿಡಿಯುಕ್ತಸೇವೆಗಳನ್ನು ಪ್ರಸ್ತುತದ ಚಾಲಕ ಪಾಲುದಾರರಿಗೆಈ ಕೇಂದ್ರ ನೀಡಲಿದ್ದು ಅವರ ಎಲ್ಲಅಗತ್ಯಗಳಿಗೂ ಒನ್-ಸ್ಟಾಪ್ ಪರಿಹಾರತಾಣವಾಗಿ ಕಾರ್ಯ ನಿರ್ವಹಿಸಲಿದೆ. 

ದಕ್ಷಿಣ ಭಾರತದ ಉಬರ್‍ ನ ಜನರಲ್ಮ್ಯಾನೇಜರ್ ಕ್ರಿಸ್ಟಿಯನ್ ಫ್ರೀಸ್ಮಾತನಾಡಿ, `ನಾವು ಸದಾ ಉಬರ್‍ ನಲ್ಲಿಚಾಲನೆಯ ಅನುಭವ ಸುಧಾರಿಸಲುಶ್ರಮಿಸುತ್ತೇವೆ. ಚಾಲಕ ಪಾಲುದಾರರಿಗೆ ನೆರವುಅಗತ್ಯವಾದಾಗ ಉಬರ್ ಸ್ಥಳೀಯ ಸಿಬ್ಬಂದಿಎಷ್ಟು ಮುಖ್ಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಗ್ರೀನ್‍ಲೈಟ್ ಸೆಂಟರ್ಮೂಲಕ ವಾರಕ್ಕೆ 4,000ಕ್ಕೂ ಹೆಚ್ಚು ಚಾಲಕಪಾಲುದಾರರಿಗೆ ಸ್ವತಃ ನೆರವು ನೀಡುತ್ತಿದ್ದೇವೆ.ನಮ್ಮ ಇನ್-ಪರ್ಸನ್ ತಾಣಗಳಲ್ಲಿ ಹೂಡಿಕೆಮಾಡುವುದನ್ನು ಮುಂದುವರೆಸುತ್ತೇವೆ ಮತ್ತುದೇವನಹಳ್ಳಿ, ಯಶವಂತಪುರ ಮತ್ತುಎಚ್‍ಬಿಆರ್‍ಗಳಲ್ಲಿ ಮೂರು ಇತರೆಸೌಲಭ್ಯಗಳನ್ನು ಪ್ರಾರಂಭಿಸಿದ್ದೇವೆ. ಈತಾಣಗಳು ಚಾಲಕ-ಪಾಲುದಾರರಿಗೆ ರಸ್ತೆಯಲ್ಲಿಅವರ ಸಮಯವನ್ನುಉಪಯುಕ್ತಗೊಳಿಸಿಕೊಳ್ಳಲು ನೆರವಾಗುತ್ತದೆ.ಏಕೆಂದರೆ ನಾವು ಅವರಿಗೆ ಪ್ರತಿ ಕ್ಷಣವೂ ಎಷ್ಟುಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದೇವೆ' ಎಂದರು.

No comments:

Post a Comment