ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅವರ ಜನ್ಮ ದಿನದಂದು ಶ್ರದ್ಧಾಂಜಲಿ ಸಲ್ಲಿಸಿ;ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ನಮಿಸಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ತಮ್ಮ ನಮನ ಸಲ್ಲಿಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
"ಶಿಕ್ಷಕರ ದಿನದಂದು ನಾನು, ಸಮಾಜದಲ್ಲಿ ಶಿಕ್ಷಣದ ಸಂತಸ ಪಸರಿಸುತ್ತಿರುವ ಮತ್ತು ಮನಸ್ಸಿನ ವಿಕಾಸಕ್ಕೆ ಸಮರ್ಪಿಸಿಕೊಂಡಿರುವ ಶಿಕ್ಷಕ ಸಮುದಾಯಕ್ಕೆ ನಮಿಸುತ್ತೇನೆ.
ಮುತ್ಸದ್ದಿ ಮತ್ತು ಅಪ್ರತಿಮ ಶಿಕ್ಷಕ ಡಾ. ಎಸ್. ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು.
ನಾವಿನ್ಯತೆ ಮತ್ತು ಸಂಶೋಧನೆ ಚಾಲಿತವಾಗಿ ನವ ಭಾರತದ ನಮ್ಮ ಕನಸನ್ನು ನನಸು ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.
ಮುಂದಿನ ಐದು ವರ್ಷಗಳಲ್ಲಿ ನಾವು ಕಲಿತು, ಕಲಿಸಿ ಪರಿವರ್ತನೆ ಮಾಡಿ ಸಶಕ್ತಗೊಳಿಸೋಣ ಮತ್ತು ಮುಂದಾಳತ್ವ ನಡೆಸುವುದನ್ನು ಕಲಿಯೋಣ", ಎಂದು ಪ್ರಧಾನಿ ಹೇಳಿದ್ದಾರೆ.
No comments:
Post a Comment