ಗುರು ಗ್ರಹವು ದಿನಾಂಕ.12.9.2017 ಮಂಗಳವಾರ ಬೆಳಗ್ಗೆ 6 ಗಂಟೆ 51 ನಿಮಿಷಕ್ಕೆ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಅಂದು ಚಿತ್ತಾ ನಕ್ಷತ್ರ 3ನೆ ಪಾದಕ್ಕೆ ಬರುತ್ತಾನೆ. ಎಲ್ಲಾ ರಾಶಿಯವರಿಗೂ ಶುಭಫಲ ಅಥವಾ ಅಶುಭ ಫಲಗಳು ಅವರವರ ದಶಾಭಕ್ತಿಯ ಮೇಲೆ ಜರುಗುವುವು. ಗುರುವಿಗೆ 7ರ ದೃಷ್ಟಿ ಜೊತೆ 5 ಮತ್ತು 9ನೆ ಮನೆಯ ನೋಡುವ ವಿಶೇಷ ಶುಭ ದೃಷ್ಟಿ ಇರುವುವು. ಧನಸ್ಸು ಮತ್ತು ಮೀನ ರಾಶಿ ಗುರುವಿಗೆ ಸ್ವಕ್ಷೇತ್ರ ಮೂಲ ತ್ರಿಕೋಣ ಧನಸ್ಸು ರಾಶಿ. ಮಕರ ರಾಶಿಯಲ್ಲಿ ನೀಚ ಮತ್ತು ಕಟಕ ರಾಶಿಯಲ್ಲಿ ಉಚ್ಚ. ಗುರುವು ಪುತ್ರಕಾರಕ.
ಗುರುವಿನ ಧಾನ್ಯ ಕಡಲೆ. ಹಳದಿ ವಸ್ತ್ರ ಬಣ್ಣ, ಪುಷ್ಯರಾಗ ರತ್ನ. ದೀರ್ಘ ಚತುಶ್ರಾಕಾರ ಮಂಡಲ . ಗುರುವಿನ ಪತ್ನಿ ತಾರಾ. ಅಧಿದೇವತೆ ಇಂದ್ರ ಬ್ರಹ್ಮ ಪತ್ಯಧಿದೇವತೆ. ಅಭಿಮಾನ ದೇವತೆ ವಿಷ್ಣು ಮತ್ತು ಶಿವ.
ಗುರು ಪೀಡಾ ಪರಿಹಾರ ಸ್ತ್ರೋತ್ರ
ದೇವ ಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ|
ಅನೇಕ ಶಿಷ್ಯ ಸಂಪೂರ್ಣಃ ಪೀಡಾ ಹರತು ಮೇ ಗುರುಃ||
ದೇವಾನಾಂಚ ಋಷಿಣಾಂಚ ಗುರುಂ ಕಾಂಚನ ಸನ್ನಿಭಂ|
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬ್ರಹಸ್ಪತಿಂ||
ದ್ವಾದಶ ರಾಶಿಯರ ಸಂಕ್ಷಿಪ್ತ ಫಲ :
ಮೇಷ: ಗುರುವು 7ರಲ್ಲಿ ಸಂಚರಿಸಿ ನಿಮ್ಮ ರಾಶಿಯನ್ನು ನೋಡುವನು. ಗುರು ಬಲವಿದೆ. ಉದ್ಯೋಗದಲ್ಲಿ ಲಾಭ. ಹಣ ಲಾಭ. ಕುಟುಂಬ ಸುಖ. ವಿವಾಹಾದಿ ಶುಭ ಕಾರ್ಯಗಳು ಕುಟುಂಬದಲ್ಲಿ ಜರುಗುವುವು. ಆರೋಗ್ಯ ಚೆನ್ನಾಗಿದ್ದು, ಎಲ್ಲಾ ಸುಖಮಯ.
ವೃಷಭ: ಗುರುವು 6ನೆ ಮನೆಯಲ್ಲಿ ಸಂಚರಿಸು ವನು. ರೋಗ ಭಯ. ವ್ಯಾಪಾರ ಉದ್ಯೋಗದಲ್ಲಿ ಅಡಚಣೆ. ಹಣ ಸರಿಯಾಗಿ ಬರದೇ ತೊಂದರೆ. ಮನೋ ವ್ಯಥೆ. ಶತ್ರುಕಾಟ.
ಮಿಥುನ: ಗುರುವು 5ನೆ ಮನೆಯಲ್ಲಿ ಸಂಚಾರ. ಗುರುಬಲ ಹೆಚ್ಚಿದೆ. ಕುಟುಂಬ ಸುಖ. ಹಣ ಲಾಭ. ಉದ್ಯೋಗ, ವ್ಯವಹಾರದಲ್ಲಿ ಉತ್ತಮ ಫಲ. ಮನೋಲ್ಲಾಸ. ಆರೋಗ್ಯ ಚೆನ್ನಾಗಿದ್ದು, ವಿವಾಹಾದಿ ಮಂಗಳ ಕಾರ್ಯ ಜರುಗುವುದು.
ಕಟಕ: ಗುರುವು 4ನೆ ಮನೆಯಲ್ಲಿ ಸಂಚಾರ ನಡೆಸುವನು. ಬಂಧು-ಮಿತ್ರರಲ್ಲಿ ಜಗಳ ಅಪವಾದ. ಸ್ವಲ್ಪ ಹಣ ಖರ್ಚು. ಸುಖ , ಸಂತೋಷವಿರುವುದು.
ಸಿಂಹ: ಗುರುವು 3ನೆ ರಾಶಿಯಲ್ಲಿ ಸಂಚಾರ ಅನಾರೋಗ್ಯ. ವೃಥಾ ಅಲೆದಾಟ. ಮನಃಕ್ಲೇಶ. ಶುಭ ಕಾರ್ಯಗಳು ನಿಧಾನ.
ಕನ್ಯಾ: ಗುರುವು 2ನೆ ರಾಶಿ ಸಂಚಾರ. ಧನ ಲಾಭ. ಎಲ್ಲಾ ಕೆಲಸ, ಕಾರ್ಯಗಳು ಸುಸೂತ್ರವಾಗಿ ನಡೆದು, ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯುವುವು. ಪ್ರಗತಿ ಇದ್ದು, ಕುಟುಂಬದಲ್ಲಿ ಮಂಗಳ ಕಾರ್ಯ ನಡೆಯುವುದು.
ತುಲಾ : ನಿಮ್ಮ ರಾಶಿಗೆ ಗುರುವು ಬಂದಿರುವು ದರಿಂದ ನಿಮಗೆ ಗುರುಬಲ ಬಂದಂತಾಗುವುದು. ಸ್ವಲ್ಪ ಮನೋ ವ್ಯಥೆ ಇದ್ದರೂ , ಧನ ಲಾಭ ಉದ್ಯೋಗದಲ್ಲಿ ಪ್ರಗತಿ, ಆಸ್ತಿ ಸಂಪಾದನೆ ವಿವಾಹ ಯೋಗ, ವಿದೇಶ ಪಯಣ ಇತ್ಯಾದಿ ಶುಭ ಫಲ ನಡೆಯುವುವು.
ವೃಶ್ಚಿಕ: ನಿಮ್ಮ ರಾಶಿಗೆ 12ನೆ ಮನೆಯಲ್ಲಿ ಸಂಚಾರ ಮಾಡುವುದರಿಂದ ಹಣ ಖರ್ಚು. ಸಂಪಾದಿಸಿದ ಹಣ, ಆರೋಗ್ಯ ಎಲ್ಲದರಲ್ಲೂ ವ್ಯತ್ಯಾಸ. ಸ್ಥಳ ಬದಲಾವಣೆ ಚಿಂತೆ, ಅಲೆದಾಟ, ಸಲ್ಲದ ಅಪವಾದ. ಬಂಧು-ಮಿತ್ರರು ದೂರವಾಗುವರು.
ಧನಸ್ಸು: ಗುರು ಸ್ವ ಕ್ಷೇತ್ರಾಧಿಪತಿ ಲಾಭ ಸ್ಥಾನದಲ್ಲಿ ಸಂಚರಿಸುವನು. ಹಣ ಲಾಭ. ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರುವುದು. ಮಕ್ಕಳ ಪ್ರಗತಿ ವಿವಾಹಾದಿ ಶುಭ ಕಾರ್ಯ ಜರುಗುವಿಕೆ. ಬಂಧು ಮಿತ್ರರಿಂದ ಸಹಾಯ. ಉದ್ಯೋಗ ವ್ಯವಹಾರದಲ್ಲಿ ಶುಭ. ಸಾಲ ತೀರು ವಿಕೆ ವಿದೇಶ ಪಯಣ ಇತ್ಯಾದಿ ಜರುಗುವುವು.
ಮಕರ: ಗುರುವು ನಿಮ್ಮ ರಾಶಿಗೆ 10ನೆ ಕರ್ಮ ಸ್ಥಾನದಲ್ಲಿ ಸಂಚರಿಸುವನು. ಸ್ಥಿರಾಸ್ತಿ ಪ್ರಾಪ್ತಿ. ಪ್ರಗತಿ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಕಾರ್ಯ ಸಾಧನೆಗಾಗಿ ಅಧಿಕ ತಿರುಗಾಟವಿರುವುದು.
ಕುಂಭ: ಗುರು ನಿಮ್ಮ ರಾಶಿಗೆ 9ರಲ್ಲಿ ಸಂಚಾರ. ಗುರುವಿನ ವಿಶೇಷ 5ರ ದೃಷ್ಟಿಯಿಂದ ನಿಮ್ಮ ರಾಶಿ ನೋಡುವನು. ಸಂಪತ್ತು, ಹಣ, ಆಸ್ತಿ ಲಾಭ. ಮಕ್ಕಳಿಗೆ ಅನುಕೂಲ. ವಿವಾಹಾದಿ ಜರುಗುವುವು. ವ್ಯಾಪಾರ ಪ್ರಗತಿ. ಯಶಸ್ಸು ಲಭಿಸುವುವು.
ಮೀನ: ಗುರು ಸ್ವಕ್ಷೇತ್ರಾಧಿಪತಿ 8ರಲ್ಲಿ ಸಂಚರಿ ಸುವನು. ಮನಸ್ಸಿಗೆ ವ್ಯಾಕುಲ. ಉದ್ಯೋಗದಲ್ಲಿ ಅಭಿವೃದ್ಧಿ. ಹಣ ಖರ್ಚು, ಮನಸ್ಸಿಗೆ ಬೇಸರ.
ಧನಸ್ಸು, ಮಕರ ರಾಶಿಯವರು ಪ್ರತಿ ಗುರುವಾರ ಕಡಲೆಕಾಳು, ಹಳದಿ ವಸ್ತ್ರ ದಾನ ಮಾಡಿ, ನವಗ್ರಹ ಸುತ್ತಿರಿ.
No comments:
Post a Comment