ಶಮೀವೃತ ಎಂಬ ಬಡ ಬಾಲಕನಿದ್ದ. ತಂದೆ ತಾಯಿಗಳಿಲ್ಲದ ಅನಾಥ, ಆದರೂ ಗುಣ ಸಂಪನ್ನ. ಓದಬೇಕೆಂದ. ಅವನ ಊರಿನ ಹತ್ತಿರ ಸಿಸು ಎಂಬ ಗುರುಕುಲವಿತ್ತು. ಅಲ್ಲಿ ಮಹಾನ ಎಂಬ ಗುರು ಇದ್ದ. ಶಮೀವೃತ ಕಠಿಣ ಪರಿಶ್ರಮಿ. ಗುರುಗಳ ಹತ್ತಿರ ಬಂದು ನಿಷ್ಠೆಯಿಂದ ಅಧ್ಯಯನ ಕೈಗೊಂಡ. ಇವನೊಂದಿಗೆ ಅದೇ ಪ್ರದೇಶದ ಮಹಾರಾಜರ ಮಗನಾದ ವೃಕ್ಷಿತನೆಂಬ ಯುವರಾಜನೂ ಅಲ್ಲಿಯೇ ವೇದಾಧ್ಯಯನ ಮಾಡುತ್ತಿದ್ದ. ಕಲಿಯುವಾಗ ಬಾಗಿಕೊಂಡಿರಬೇಕು, ತಿಂದುಣ್ಣದೇ ಅಕ್ಷ ರ ಪಡೆಯಬೇಕು ಎಂದು ಗುರುಗಳು ಹೇಳುವುದನ್ನು ಹಸಿವೆಯಾದರೂ ಶಮೀವೃತ ಪಾಲಿಸುತ್ತಿದ್ದ. ಆದರೆ ವೃಕ್ಷಿತ ಮಾತ್ರ, 'ಊಟವಿದ್ದರೆ ಸ್ಫ್ಪೂರ್ತಿ, ಪಾಠ ಪಠಣ ಎಲ್ಲ. ಅದೇ ಇಲ್ಲದಿದ್ದರೆ ವಿದ್ಯಾರ್ಥಿ ಜೀವಂತವಿದ್ದರೂ ಹೆಣದಂತೆ' ಎನ್ನುತ್ತಿದ್ದ.
ಕೆಲವು ದಿನ ಕಳೆಯಲು ವಿದ್ಯಾಭ್ಯಾಸ ಮುಗಿಯಿತು. ಆಗ ಗುರುಗಳು, 'ನಾನು ನಿಮ್ಮ ಹತ್ತಿರ ಬಂದಾಗ ನನಗೆ ಬೇಕಾದ ಗುರುಕಾಣಿಕೆ ಕೊಡಿ' ಎಂದು ಹೇಳಿದರು.
ಒಂದು ದಿನ ಗುರುಗಳು ವೃಕ್ಷಿತನ ಅರಮನೆಗೆ ಬರುತ್ತಾರೆ. ರಾಜನಾಗಿದ್ದ ವೃಕ್ಷಿತನು, ತಾನು ಕೊಟ್ಟಷ್ಟು ಕಾಣಿಕೆಯನ್ನು ಗುರುಗಳಿಗೆ ಇನ್ನು ಮುಂದೆ ಯಾರೂ ಕೊಟ್ಟಿರಬಾರದು, ಹಾಗೇ ತಾನು ಎಷ್ಟು ಶ್ರೇಷ್ಠ ವಿದ್ಯಾರ್ಥಿ ಎಂಬುದು ಗುರುಗಳಿಗೆ ತಿಳಿಯಬೇಕು ಎಂದು ಆನೆಯ ಮೇಲೆ ನಗನಾಣ್ಯ ವಜ್ರ-ಆಭರಣಗಳ ರಾಶಿಯನ್ನೇ ಹೇರಿ ಗುರುಗಳ ಹಿಂದೆ ಕಳಿಸಿದ. ಅಲ್ಲದೇ ಶಮೀವೃತ ಗುರುಗಳಿಗೆ ಏನೂ ಕೊಡಲಾಗಲಿಲ್ಲ ಎಂದು ನೊಂದುಕೊಳ್ಳುವುದನ್ನು ನೋಡಲೆಂದೇ ಗುರುಗಳ ಹಿಂದೆಯೇ ಗೊತ್ತಾಗದಂತೆ ಬಂದ.
ಶಮಿವೃತನು ಗುರುಗಳನ್ನು ಹಣ್ಣು ಹಾಲುಗಳಿಂದ ಸತ್ಕರಿಸಿದ. ಅವರ ಯೋಗಕ್ಷೇಮ ವಿಚಾರಿಸಿದ. ಗುರುಗಳಿಗೆ ತನ್ನ ಹತ್ತಿರ ಕಾಣಿಕೆ ಕೊಡಲು ಏನೂ ಇಲ್ಲವೆಂದು ಗೊತ್ತಿದ್ದರೂ ತನ್ನ ಹತ್ತಿರವಿರುವ ಯಾವುದೇ ವಸ್ತು ಕೇಳಿದರೂ ಕೊಡುವುದಾಗಿ ಹೇಳಿದ.
ಆಗ ಗುರುಗಳು ಅವನ ಗುಡಿಸಲಿನ ಹಿತ್ತಲಿನಲ್ಲಿದ್ದ ಹಸಿರು ಎಲೆಗಳಿಂದ ಸಮೃದ್ಧವಾಗಿದ್ದ ಒಂದು ವೃಕ್ಷ ವನ್ನೇ ಕೊಡಲು ಕೇಳಿದರು. 'ಗುರುವಿಗಿಂತ ಹಿರಿದು ಮರಣಕ್ಕಿಂತ ಕೊನೆಯದು ಯಾವುದೂ ಇಲ್ಲ' ಎಂದು ಆ ಮರವನ್ನೇ ಗುರುದಕ್ಷಿಣೆಯಾಗಿ ಕೊಡಲು ಗುರುವನ್ನು ಕರೆದ. ಆಶ್ಚರ್ಯವೆಂಬಂತೆ ಗುರುಗಳು ಮುಟ್ಟಿದ ತಕ್ಷ ಣ ಆ ಗಿಡದ ನಾಣ್ಯದ ಗಾತ್ರದ ಎಲೆಗಳೆಲ್ಲ ಬಂಗಾರದ ಎಲೆಗಳಾದವು. ಹರಿದು ಹರಿದು ಹಾಕಿದಂತೆ ಬಂಗಾರದ ನಾಣ್ಯದ ರಾಶಿಯೇ ಗುಡ್ಡದಂತೆ ಬಿದ್ದರೂ ಮರದ ಒಂದೆಲೆಯೂ ಬರಿದಾಗಲಿಲ್ಲ.
ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯೂ ಬಂಗಾರಕ್ಕೆ ಸಮ ಎಂದು ಗುರುಗಳು ಹೊಗಳಿದರು. ಅಡಗಿಕೊಂಡ ವೃಕ್ಷಿತನನ್ನು ಕರೆದು, ಚಿನ್ನ ಎಲ್ಲೆಲ್ಲಿಯೂ ಸಿಗಬಹುದು. ಪ್ರೀತಿ ಸ್ನೇಹ ಸಂಬಂಧಗಳನ್ನು ಹೊನ್ನಿನಿಂದ ಗಳಿಸಲಾಗದು ಎಂದು ಗೆಳೆಯನಲ್ಲಿ ಕ್ಷ ಮೆಯಾಚಿಸಲು ತಿಳಿಸಿದರು. ಇಬ್ಬರೂ ಮರದ ಮಹಿಮೆಯಿಂದ ಒಂದಾದುದಕ್ಕೆ ಆ ಮರಕ್ಕೆ ಶಮೀವೃಕ್ಷ ಎಂದು ಕರೆದರು.
ಅಂದಿನಿಂದ ಶಮೀವೃಕ್ಷ ದ ಎಲೆ ಹಂಚಿಕೊಂಡು ಬಂಗಾರದಂತೆ ಹೋಗೋಣವೆಂಬ ಮಾತು ಜನಜನಿತವಾಯಿತು. ಇಡೀ ನಾಡಿನ ತುಂಬ ಶಮೀವೃತನ ಹೆಸರು ಪ್ರಸಿದ್ದಿಯಾಯಿತು. ಬನ್ನಿ ಬಂಗಾರವಾಗೋಣ ಎಂಬ ಮಾತು ಉಳಿಯಿತು.🌴🌴🌴
Our instant news on all matters reaching more than 1 lakhs audiences all over the world. If u want to reach max. Come and join us. Send us the details of your programmes , seminors,events, launches and many more.
Thursday, 28 September 2017
ಶಮೀ ವೃಕ್ಷದ ವಿಶೇಷತೆ ಏನು?
Subscribe to:
Post Comments (Atom)
No comments:
Post a Comment