Friday, 1 September 2017

ನದಿ ಜೋಡಣೆ


ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬರವನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ನದಿ ಜೋಡಣೆ ಯೋಜನೆ ಕಾಮಗಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ದೊರೆಯಲಿದೆ. 

ಸುಮಾರು 87 ಬಿಲಿಯನ್ ಡಾಲರ್ ಮೊತ್ತದ ಯೋಜನೆಯಾಗಿರುವ ನದಿ ಜೋಡಣೆ ಕಾಮಗಾರಿಯಿಂದ ಬರ ನಿವಾರಣೆ ಹಾಗೂ ಹೆಚ್ಚಿನ ಪ್ರವಾಹವನ್ನು ತಡೆಗಟ್ಟಬಹುದಾಗಿದೆ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. 

ಯೋಜನೆಯ ಅಡಿಯಲ್ಲಿ ಸುಮಾರು 60ನದಿಗಳು ಜೋಡಣೆಯಾಗುವ ನಿರೀಕ್ಷೆ ಇದ್ದು, ಇದರಿಂದಾಗಿ ರೈತರು ಮುಂಗಾರಿನ ಮೇಲೆಯೇ ಹೆಚ್ಚು ಅವಲಂಬನೆಯಾವುದನ್ನು ತಡೆಯಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ನಿರ್ವಹಣೆ ಮಾಡಲಿದ್ದಾರೆ

No comments:

Post a Comment