ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಬೀಡಿ, ತಂಬಾಕು ಸೇವನೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ಇನ್ನೊಂದು ದಿಟ್ಟ ಹೆಜ್ಜೆಯಿಟ್ಟಿದೆ. ಇನ್ಮುಂದೆ ಸಿಗರೇಟ್, ಬೀಡಿ, ಚೂಯಿಂಗ್, ತಂಬಾಕು ಮುಂತಾದವುಗಳ ಬಿಡಿ ಬಿಡಿ ಮಾರಾಟವನ್ನುನಿಷೇಧಿಸಬೇಕು ಎಂದು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಚೂಯಿಂಗ್ ಟೊಬ್ಯಾಕೋ ಗಳ ಮೇಲೆ ನಿಷೇಧ ಹೇರಿತ್ತು. ಈ ಕ್ರಮಗಳಿಂದಾಗಿ ಈಗಾಗಲೇ ಧೂಮಪಾನಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ ಮೂಲಗಳು ಳಿಸಿವೆ.
ಆದಾಗ್ಯೂ ತಂಬಾಕು ಉತ್ಪನ್ನಗಳ ಲೂಸ್ ಮಾರಾಟದಿಂದಾಗಿ ಧೂಮಪಾನಿಗಳು ಅಂಗಡಿಗಳಿಂದ ಒಂದೆರಡು ಸಿಗರೇಟುಗಳನ್ನು ತೆಗೆದುಕೊಂಡು ಅಭ್ಯಾಸದೊಂದಿಗೆ ಮುಂದುವರೆಸಿರುವ ಕಾರಣ ದುರಭಾಭ್ಯಾಸ ಇನ್ನೂ ಮುಂದುವರೆದಿದೆ. ಆದರೆ ಆರೋಗ್ಯ ಸ್ವಯಂಸೇವಕರು, ಗ್ರಂಥಿಶಾಸ್ತ್ರಜ್ಞರು ಮತ್ತು ಇತರರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಗರೇಟ್, ಬೀಡಿ ಮತ್ತು ಚೂಯಿಂಗ್ ತಂಬಾಕು ಉತ್ಪನ್ನಗಳ ಬಿಡಿ ಮಾರಾಟ ನಿಷೇಧ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂತದ್ದೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ತಂಬಾಕು ಉತ್ಪನ್ನಗಳ ಲೂಸ್ ಮಾರಾಟವನ್ನು ನಿಷೇಧಿಸುವುದರಿಂದ ಜನರು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಹಿಂಜರಿಯುತ್ತಾರೆ. ಕುಟುಂಬ ಸದಸ್ಯರ ಗಮನಕ್ಕೆ ಬರುವ ಸಾಧ್ಯತೆಗಳಿರುವುದರಿಂದ ಉತ್ಪನ್ನಗಳನ್ನು ದೊಡ್ಡ ಪ್ರಮಾಣದ ಪ್ರಮಾಣದಲ್ಲಿ ಖರೀದಿಸಲು ಭಯಪಡುತ್ತಾರೆ ಕ್ರಮೇಣವಾಗಿ ಧೂಮಪಾನ ಅಭ್ಯಾಸವನ್ನು ತ್ಯಜಿಸುವ ಬಗ್ಗೆ ಯೋಚಿಸುತ್ತಾರೆ ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ ತಂಬಾಕು ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಅವಶ್ಯಕವಾಗಿದೆ. ಆದ್ದರಿಂದ ಸಿಗರೇಟ್ ಮತ್ತು ಇಅತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್ (3), (8) ಮತ್ತು (9) ರ ಪ್ರಕಾರ ಉಲ್ಲಂಘನೆಯೆಂದು ಪರಿಗಣಿಸಿ ಕರ್ನಾಟಕ ರಾಜ್ಯದಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿರುವ ಸಿಗರೇಟು, ಬೀಡಿ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಕಾನೂನನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯ ಕಾಯ್ದೆ 2003ರ ಕಲಂ (20)ರ ಅಡಿಯಲ್ಲಿ ದಂಡನೆಗೆ ಒಳಗಾಗುತ್ತಾರೆ ಎಂದು ಆದೇಶಿಸಿದೆ.
No comments:
Post a Comment