ಎನ್.ಎ.ಹ್ಯಾರಿಸ್ ಫೌಂಡೇಶನ್ ವತಿಯಿಂದ ಬಿಷಪ್ ಕಾಟನ್ಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
· ಭಾವನಾತ್ಮಕ ಕ್ಷಣದಲ್ಲಿ ಕನ್ನಡ ಶಿಕ್ಷಕ ಶಿವಶಂಕರ್ ಅವರಿಗೆ ಒಂದು ಲಕ್ಷ ರೂ ಬಹುಮಾನ
· ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಣ ಕೊಟ್ಟ ಶಿಕ್ಷಕ
ಕ್ಷೇತ್ರದ ಶಿಕ್ಷಕರೆಲ್ಲರೂ ಆಚರಣೆಯಲ್ಲಿ ಭಾಗವಹಿಸಿದ್ದರು
ಶಾಂತಿ ನಗರ ಕ್ಷೇತ್ರದಲ್ಲಿ ಗೃಹ ಸಚಿವರ ರಾಮಲಿಂಗಾರೆಡ್ಡಿ ಅಧ್ಯಕ್ಷತೆ , ಡಾ.ಅಬ್ರಹಾಂ ಎಬ್ನೇಜರ್ ದಿವ್ಯ ಉಪಸ್ಥಿತಿ
ಬೆಂಗಳೂರು.ಸೆ.14 ಬಿಷಪ್ ಕಾಟನ್ಸ್ ಸಭಾಂಗಣದಲ್ಲಿ ಎನ್.ಎ.ಹ್ಯಾರಿಸ್ ಫೌಂಡೇಶನ್ ವತಿಯಿಂದ ಶಿಕ್ಷಕರದಿನಾಚರಣೆಯನ್ನು ಏರ್ಪಡಿಸಲಾಗಿತ್ತು. ಶಾಸಕ ಎನ್.ಎ. ಹ್ಯಾರಿಸ್ ಅವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಹಿಸಿದ್ದರು. ವೇದಿಕೆಯಲ್ಲಿ ಡಾ.ಅಬ್ರಾಹಾಂ ಎಬ್ನೇಜರ್ ಮತ್ತು ವಾಗ್ಮಿ ಸುಧಾ ಬರಗೂರುಉಪಸ್ಥಿತರಿದ್ದರು.
ಕಿಂಡರ್ ಗಾರ್ಡನ್ ಶಾಲೆಯಿಂದ ಹಿಡಿದು ಎಲಿಮೆಂಟರಿ ಶಾಲೆವರೆಗಿನ ಮತ್ತು ಎಂಜನೀಯರಿಂಗ್ ಮತ್ತು ವೈದ್ಯಕೀಯಕಾಲೇಜಿನ ಎಲ್ಲ ವರ್ಗದ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್.ಎ. ಹ್ಯಾರಿಸ್ ಅವರು, ಶಿಕ್ಷಕರನ್ನು ಆಧರಿಸಿ ಗೌರವಿಸುವುದು ನಮ್ಮೆಲ್ಲರಆಧ್ಯ ಕರ್ತವ್ಯ. ಅವರೇ ನಮ್ಮ ನಿಜವಾದ ಮಾದರಿ, ಮನುಷ್ಯರನ್ನು ಉತ್ತಮ ವ್ಯಕ್ತಿಗಳಾಗಿಸುವಲ್ಲಿ ಅವರ ಪಾತ್ರವೇಅತ್ಯಂತ ಪ್ರಮುಖವಾದದ್ದು. ಅವರೇ ಮಕ್ಕಳನ್ನು ಉತ್ತಮ ಬದುಕು ರೂಪಿಸುವ ದಾರಿಯಲ್ಲಿ ನಡೆಸುವವರು, ಮತ್ತುಅವರನ್ನು ಕ್ರಿಯಾಶೀಲರನ್ನಾಗಿ ಬೆಳೆಸುವವರು. ಈ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್ ಮತ್ತು ತಮ್ಮ ಕ್ಷೇತ್ರ ಅಲ್ಲದೇ ಎಲ್ಲಶಿಕ್ಷಕರಿಗೆ ತಮ್ಮ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಲಾಯಿತು.ಶಿಕ್ಷಕರಿಗೆ ಸನ್ಮಾನ ಮಾಡಿ ಮಾತನಾಡಿದ ಶಾಸಕರು ತಂತ್ರಜ್ಞಾನದ ಅಭಿವೃದ್ಧಿಯ ಈ ಕಾಲದಲ್ಲಿ ಶಿಕ್ಷಕರು ತಮ್ಮಜ್ಞಾನವನ್ನು ಉತ್ತಮಪಡಿಸಿಕೊಂಡು ಈಗಿನ ಹೊಸ ತಂತ್ರಜ್ಞಾನ ಯುಗಕ್ಕೆ ತಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿಕೊಂಡು,ಪ್ರತಿ 24 ಘಂಟೆಗಳಲ್ಲಿ ಆಗುವ ಬದಲಾವಣೆಗಳನ್ನು ಮನದಟ್ಟು ಮಾಡಿಕೊಂಡು ಶಿಕ್ಷಕರು ತಮ್ಮನ್ನು ತಾವುನವೀಕರಿಸಿಕೊಳ್ಳುತ್ತಿರಬೇಕು ಎಂದರು.
ಯಾರು ಶಿಕ್ಷಕರಾಗಿದ್ದಾರೋ ಅವರು ಮೂರು ರೀತಿಯ ವ್ಯಕ್ತಿಗಳಿರುತ್ತಾರೆ. ಕೆಲವರು ಸುಮ್ಮನೆ ಬೋಧನೆ ಮಾಡುತ್ತಾರೆಆದರೆ ಅದನ್ನು ಯಾವತ್ತೂ ಪಾಲಿಸೋಲ್ಲ, ಆದರೆ ನಿಜವಾಗಿ ಯಾರು ಬೋಧನೆ ಮಾಡಿದನ್ನು ಪಾಲಿಸುತ್ತಾರೋ ಅವರೇನಿಜವಾದ ಉತ್ತಮರು ಎಂದು ಶಿಕ್ಷಕರಿಗೆ ಬೋಧಿಸಿದಂತೆಯೇ ಬದುಕಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ರಾಮಲಿಂಗಾರೆಡ್ಡಿ, ಶಿಕ್ಷಣ ಪ್ರತಿಯೊಬ್ಬರ ಯಶಸ್ಸಿಗೆ ಬೇಕಾದ ಪ್ರಮುಖ ಸಾಧನ, ಕಳೆದ ಹಲವಾರು ದಶಕಗಳಿಂದ ಶಿಕ್ಷಣ ಈ ಬದಲಾವಣೆಯನ್ನು ತಂದಿದೆ. ರಾಜೀವ್ ಗಾಂಧಿಯವರು ಅಧಿಕಾರಕ್ಕೆ ಬಂದಾಗ ಬೆಂಗಳೂರಿನಲ್ಲಿ ಅನೇಕ ಬದಲಾವಣೆಗಳು ಆದವು. ಅನೇಕ ಸುಧಾರಣೆಗಳು ಆದವು. ಆಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ನಡೆದುಕೊಂಡು ಬರುತ್ತಿದೆ.ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉತ್ತೇಜನ ಕೊಡುವಂತಹ ಅನೇಕ ಕಾರ್ಯಕ್ರಮಗಳನ್ನು ಎಲ್ಲ ರೀತಿಯ ನೆರವು ದೊರೆಯುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಯುವಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಇದೇ ಸಂದರ್ಭದಲ್ಲಿ ಮಾತನಾಡಿ, ದೇಶದ ಭಾವೀಪ್ರಜೆಗಳ ಬದುಕನ್ನು ನಿರ್ಮಿಸುವ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಅವರೇ ನಿಜವಾದ ಮಾದರಿ ವ್ಯಕ್ತಿಗಳು,ಮಾರ್ಗದರ್ಶಕರು, ಸಲಹೆಗಾರರು. ಅದಕ್ಕಾಗಿಯೇ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶೇಷ ಪ್ರಶ್ನೋತ್ತರಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ಪ್ರಶ್ನೆಗಳಿಗೆ ಎನ್. ಎ. ಹ್ಯಾರಿಸ್ ಸಮರ್ಪಕವಾಗಿ ಉತ್ತರಿಸಿದರು. ವಿಶೇಷ ರ್ಯಾಫೆಲ್ ಡ್ರಾ ನಡೆಸಲಾಯಿತು. ಕನ್ನಡ ಶಾಲೆಯ ಶಿಕ್ಷಕ ಶಿವಕುಮಾರ್ ಅವರಿಗೆ ಒಂದು ಲಕ್ಷ ರೂಗಳನ್ನು ಅತಿಥಿಗಳು ಬಹುಮಾನವಾಗಿ ನೀಡಿದರು. ಆದರೆ ಶಿವಕುಮಾರ್ ಇದೇ ಹಣವನ್ನು ಶಾಲೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡುಗೆಯಾಗಿ ನೀಡಿದರು.
No comments:
Post a Comment