“ ಒಂದು ನೂತನ ಯೋಜನೆಯಾಗಿದೆ. ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ಗ್ರಾಮೀಣ ಹಾಗು ನಗರ ಪ್ರದೇಶಗಳ ವಿದ್ಯುದ್ದೀಕರಣ ಅಪೇಕ್ಷಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕ ಖಾತ್ರಿಪಡಿಸುವ ಈ ಯೋಜನೆಯನ್ನು 2017ರ ಸೆಪ್ಟೆಂಬರ್ 25 ರಂದು ಆರಂಭಿಸಿದರು.
ಪ್ರಧಾನ ಮಂತ್ರಿ ಸಹಜ್ ಬಿಜಿಲಿ ಹರ್ ಘರ್ಯೋಜನಾ “ಸೌಭಾಗ್ಯ” ಕುರಿತು ಪದೇ ಪದೇಕೇಳಲ್ಪಡುವ ಪ್ರಶ್ನೆಗಳು
ಪ್ರಧಾನ ಮಂತ್ರಿ ಸಹಜ್ ಬಿಜಿಲಿ ಹರ್ ಘರ್ಯೋಜನಾ-“ಸೌಭಾಗ್ಯ “ ಒಂದು ನೂತನಯೋಜನೆಯಾಗಿದೆ. ಪ್ರಧಾನ ಮಂತ್ರಿಯವರಾದ ಶ್ರೀನರೇಂದ್ರ ಮೋದಿ ಅವರು ದೇಶದಲ್ಲಿ ಗ್ರಾಮೀಣಹಾಗು ನಗರ ಪ್ರದೇಶಗಳ ವಿದ್ಯುದ್ದೀಕರಣಅಪೇಕ್ಷಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕಖಾತ್ರಿಪಡಿಸುವ ಈ ಯೋಜನೆಯನ್ನು 2017ರಸೆಪ್ಟೆಂಬರ್ 25 ರಂದು ಆರಂಭಿಸಿದರು.
ಈ ಯೋಜನೆಯ ಕುರಿತಂತೆ ಈ ಕೆಳಗಿನಂತೆ ಪದೇಪದೇ ಕೇಳಲ್ಪಡುವ ಪ್ರಶ್ನೆಗಳು ಯೋಜನೆಗೆ ಸಂಬಂಧಿಸಿಅದರ ಉದ್ದೇಶ, ಮುಖ್ಯಾಂಶಗಳು ಮತ್ತು ನಿರೀಕ್ಷಿತಫಲಿತಾಂಶ ಹಾಗು ಅನುಷ್ಟಾನ ತಂತ್ರದ ಬಗ್ಗೆ ಸೂಕ್ತವಿವರಣೆ ಒದಗಿಸುತ್ತವೆ.
ಪ್ರಶ್ನೆ ಸಂಖ್ಯೆ1 . ಈ ಹೊಸ ಯೋಜನೆಯಉದ್ದೇಶ ಏನು ?.
ಉತ್ತರ: “ಸೌಭಾಗ್ಯದ’ ಉದ್ದೇಶಗಳಲ್ಲಿ ಕೊನೆಯತುದಿಯವರೆಗೂ ಎಲ್ಲರಿಗೂ ವಿದ್ಯುತ್ ಲಭ್ಯವಾಗುವಂತೆಮಾಡುವುದು ಮತ್ತು ಗ್ರಾಮೀಣ ಹಾಗು ನಗರಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ದೇಶದ ಎಲ್ಲಾಮನೆಗಳಿಗೂ ಏಕತ್ರ ವಿದ್ಯುದ್ದೀಕರಣವನ್ನುಸಾಧಿಸುವುದು.
ಪ್ರಶ್ನೆ 2 .ಕೊನೆಯ ತುದಿಯವರೆಗೂಸಂಪರ್ಕ ಮತ್ತು ಮನೆಗಳಿಗೆ ವಿದ್ಯುತ್ಸಂಪರ್ಕ ಒದಗಣೆಯಲ್ಲಿ ಏನೆಲ್ಲ ಸೇರಿದೆ.?.
ಉತ್ತರ: ಮನೆಗಳಿಗೆ ವಿದ್ಯುತ್ ಸಂಪರ್ಕದಲ್ಲಿ ,ಹತ್ತಿರದವಿದ್ಯುತ್ ಕಂಭದಿಂದ ಸರ್ವಿಸ್ ಕೇಬಲ್ ಮೂಲಕಮನೆಯ ಆವರಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದು,ವಿದ್ಯುತ್ ಮೀಟರ್ ಅಳವಡಿಕೆ, ಎಲ್.ಇ.ಡಿಬಲ್ಬಿನೊಂದಿಗೆ ಏಕ ದೀಪ ವಯರಿಂಗ್ ಸೌಲಭ್ಯ ಮತ್ತುಮೊಬೈಲ್ ಚಾರ್ಜ್ ಮಾಡುವ ಸೌಲಭ್ಯ. ಒಂದು ವೇಳೆಸರ್ವಿಸ್ ಕೇಬಲ್ ಎಳೆಯಲು ಮನೆಯ ಹತ್ತಿರದಲ್ಲಿವಿದ್ಯುತ್ ತಂತಿ ಕಂಭ ಇಲ್ಲದಿದ್ದರೆ, ಹೆಚ್ಚುವರಿಕಂಭಗಳನ್ನು ಅಳವಡಿಸಿ, ಇತರ ವಿದ್ಯುತ್ ವಾಹಕ,ಅವಶ್ಯ ಸಲಕರಣೆಗಳನ್ನು ಒದಗಿಸುವುದನ್ನೂ ಈಯೋಜನೆ ಒಳಗೊಂಡಿರುತ್ತದೆ.
ಪ್ರಶ್ನೆ ಸಂಖ್ಯೆ ॑3. ವಿದ್ಯುದ್ದೀಕರಣಗೊಳ್ಳದಮನೆಗಳಿಗೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿಉಚಿತವೇ ?.
ಉತ್ತರ : ಹೌದು. ಬಡವರ ಮನೆಗಳಿಗೆ ವಿದ್ಯುತ್ಸಂಪರ್ಕವನ್ನು ಉಚಿತವಾಗಿ ಒದಗಿಸಲಾಗುವುದು. ಇತರಮನೆಗಳಿಗೂ 500 ರೂ. ಪಾವತಿಸಿದರೆ ಈಯೋಜನೆಯಡಿ ವಿದ್ಯುತ್ ಸಂಪರ್ಕವನ್ನುಒದಗಿಸಲಾಗುವುದು. ಈ ಮೊತ್ತವನ್ನು ಡಿಸ್ಕಾಂಗಳು/ವಿದ್ಯುತ್ ಇಲಾಖೆಗಳು 10 ಕಂತುಗಳಲ್ಲಿ ವಿದ್ಯುತ್ ಬಿಲ್ಲಿನಜತೆ ವಸೂಲು ಮಾಡುತ್ತವೆ.
ಪ್ರಶ್ನೆ ಸಂಖ್ಯೆ 4.. ಉಚಿತ ವಿದ್ಯುತ್ಸಂಪರ್ಕದಲ್ಲಿ ವಿದ್ಯುತ್ ಬಳಕೆಯೂ ಉಚಿತವೇ ?.
ಉತ್ತರ. ಯಾವುದೇ ಶ್ರೇಣಿಯ ಬಳಕೆದಾರರಿಗೆ ಉಚಿತವಿದ್ಯುತ್ ಒದಗಿಸುವ ಪ್ರಸ್ತಾವನೆ ಯಾ ಅವಕಾಶ ಈಯೋಜನೆಯಲ್ಲಿ ಇಲ್ಲ. ಬಳಕೆ ಮಾಡಿದ ವಿದ್ಯುತ್ತಿನಶುಲ್ಕವನ್ನು ಡಿಸ್ಕಾಂಗಳು/ ವಿದ್ಯುತ್ ಇಲಾಖೆಗಳುಜಾರಿಯಲ್ಲಿಟ್ಟಿರುವ ದರಪಟ್ಟಿಯನ್ವಯ ಬಳಕೆದಾರರುಭರಿಸಬೇಕಾಗುತ್ತದೆ.
ಪ್ರಶ್ನೆ ಸಂಖೆ 5. ಭಾರತ ಸರಕಾರದ ಈಮೊದಲಿನ ಕಾರ್ಯಕ್ರಮವಾದ ’ಎಲ್ಲರಿಗೂ ದಿನದ24 ಗಂಟೆಯೂ ವಿದ್ಯುತ್ ಒದಗಿಸುವ 24*7 ಇಂತಹದೇ ಉದ್ದೇಶಗಳನ್ನು ಹೊಂದಿದೆಯೇ.? ಅದುಈ ಕಾರ್ಯಕ್ರಮಕ್ಕಿಂತ ಹೇಗೆ ಭಿನ್ನವಾಗಿದೆ.?.
ಉತ್ತರ:”ಎಲ್ಲರಿಗೂ 24*7 ವಿದ್ಯುತ್ ’ ಯೋಜನೆಯುರಾಜ್ಯಗಳ ಜತೆಗಿನ ಜಂಟಿ ಕಾರ್ಯಕ್ರಮವಾಗಿದ್ದು,ವಿದ್ಯುತ್ ಉತ್ಪಾದನೆ, ವಿದ್ಯುತ್ ಪ್ರಸರಣ ಮತ್ತುವಿತರಣೆ, ಇಂಧನ/ವಿದ್ಯುತ್ ದಕ್ಷತೆ , ಡಿಸ್ಕಾಂಗಳಆರೋಗ್ಯ ಸ್ಥಿತಿ (ಆರ್ಥಿಕ ಸ್ಥಿತಿ) ಸಹಿತ ,ವಿದ್ಯುತ್ ಕ್ಷೇತ್ರದ ಎಲ್ಲಾ ವಲಯಗಳನ್ನು ಒಳಗೊಂಡಯೋಜನೆಯಾಗಿರುತ್ತದೆ.ಎಲ್ಲರಿಗೂ 24*7 ವಿದ್ಯುತ್ಯೋಜನೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತಪ್ರದೇಶಗಳ ಜತೆ ಸಮಾಲೋಚಿಸಿದ ಬಳಿಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಕ್ತವಾದ/ನಿರ್ದಿಷ್ಟವಾದಕ್ರಿಯಾ ಯೋಜನೆ ಮತ್ತು ಅನುಷ್ಟಾನ ಮಾರ್ಗವನ್ನುಅಂತ್ಮಗೊಳಿಸಲಾಗುತ್ತದೆ. ಎಲ್ಲರಿಗೂ ವಿದ್ಯುತ್ಯೋಜನೆ ದಾಖಲೆಯು ವಿದ್ಯುತ್ ವಲಯದ ಮೌಲ್ಯಸರಪಣಿಗೆ ಅಗತ್ಯವಾದ ವಿವಿಧ ಮಧ್ಯಪ್ರವೇಶದವಿವರಗಳನ್ನು ಒಳಗೊಂಡಿದೆ.
ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕಒದಗಿಸುವುದು, 24*7 ವಿದ್ಯುತ್ ಪೂರೈಕೆಗೆ ಪೂರ್ವಆವಶ್ಯಕತೆಯಾಗಿದೆ. ಸೌಭಾಗ್ಯ ಯೋಜನೆಯುವಿದ್ಯುತ್/ ಇಂಧನ ಸಂಬಂಧಿ ವಿಷಯಗಳನ್ನುಪರಿಹರಿಸಲು ಸರಳ ಯೋಜನಾ ಬೆಂಬಲವನ್ನುನೀಡುತ್ತದೆ.
ಪ್ರಶ್ನೆ ಸಂಖ್ಯೆ 6. ವಿತರಣಾ ವಲಯದಲ್ಲಿಎರಡು ಪ್ರಮುಖ ಯೋಜನೆಗಳಾದಗ್ರಾಮೀಣ ಪ್ರದೇಶಕ್ಕಾದರೆಡಿ.ಡಿ.ಯು.ಜಿ.ಜೆ.ವೈ ಮತ್ತು ನಗರಪ್ರದೇಶಕ್ಕಾದರೆ ಐ.ಪಿ.ಡಿ.ಎಸ್.ಗಳುಈಗಾಗಲೇ ಅನುಷ್ಟಾನದಲ್ಲಿವೆ.-ಹಾಗಿರುವಾಗ ಹೊಸ ಯೋಜನೆಯಆವಶ್ಯಕತೆ ಏನು.?
ಉತ್ತರ: ದೀನ್ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿಯೋಜನಾ (ಡಿ.ಡಿ.ಯು.ಜಿ.ಜೆ.ವೈ) ಗ್ರಾಮಗಳಲ್ಲಿ/ಜನವಸತಿ ಪ್ರದೇಶಗಳಲ್ಲಿ ಮೂಲ ವಿದ್ಯುತ್ಸೌಕರ್ಯಗಳನ್ನು ರೂಪಿಸಲು ಉದ್ದೇಶಿಸಿದೆ, ಈಗಿರುವಮೂಲಸೌಕರ್ಯಗಳನ್ನು ಬಲಪಡಿಸುವುದು, ಇರುವಫೀಡರ್/ ವಿತರಣಾ ಪರಿವರ್ತಕ/ ಬಳಕೆದಾರರಿಗೆಮೀಟರ್ ಅಳವಡಿಕೆ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ಪೂರೈಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆವೃದ್ಧಿಸುವುದು ಇದರ ಉದ್ದೇಶ. ಇದಲ್ಲದೆ ರಾಜ್ಯಸರಕಾರಗಳು ತಮ್ಮಲ್ಲಿರುವ ಪಟ್ಟಿಯನ್ವಯ ಗುರುತಿಸಿದಕಡುಬಡವರ ಮನೆಗಳಿಗೆ (ಬಿಪಿಎಲ್) ಉಚಿತ ವಿದ್ಯುತ್ಸಂಪರ್ಕ ಒದಗಿಸುವುದು, ಕೊನೆ ತುದಿಯವರೆಗೂವಿದ್ಯುತ್ ಪೂರೈಕೆ ಮಾಡುವುದು ಇದರಲ್ಲಿ ಸೇರಿದೆ.ಆದಾಗ್ಯೂ ,ಈ ಹಿಂದೆ ವಿದ್ಯುದ್ದೀಕರಣಗೊಂಡಗ್ರಾಮಗಳಲ್ಲಿಯೂ ಹಲವಾರು ಕಾರಣಗಳಿಗಾಗಿ ಅನೇಕಮನೆಗಳು ವಿದ್ಯುತ್ ಸಂಪರ್ಕ ಹೊಂದಿಲ್ಲ. ಕೆಲವುನಿಜವಾಗಿಯೂ ಕಡುಬಡತನದ ಮನೆಗಳಿಗೆ ಬಿಪಿಎಲ್ಕಾರ್ಡ್ ದೊರೆತಿಲ್ಲ ಮತ್ತು ಅವರಿಗೆ ವಿದ್ಯುತ್ಸಂಪರ್ಕದ ಆರಂಭಿಕ ವೆಚ್ಚವನ್ನು ಪಾವತಿಸುವಸಾಮರ್ಥ್ಯ ಇಲ್ಲ. ಮಾತ್ರವಲ್ಲ ಸಂಪರ್ಕವನ್ನು ಹೇಗೆಪಡೆದುಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಇಲ್ಲದಿರುವುದು ಅಥವಾ ಇತರ ಕಾರಣಗಳಿಂದಾಗಿಅನಕ್ಷರಸ್ತರಿಗೆ ವಿದ್ಯುತ್ ಸಂಪರ್ಕ ಪಡೆಯುವುದುಸುಲಭದ ಕೆಲಸವಾಗಿಲ್ಲ. ಅಲ್ಲಿ ಹತ್ತಿರದಲ್ಲಿ ವಿದ್ಯುತ್ಕಂಭ ಇಲ್ಲದಿರಬಹುದು, ಮತ್ತು ಹೆಚ್ಚುವರಿ ಕಂಭಹಾಕುವ, ವಿದ್ಯುತ್ ವಾಹಕಗಳನ್ನು ಅಳವಡಿಸುವಖರ್ಚನ್ನು ವಿದ್ಯುತ್ ಸಂಪರ್ಕ ಪಡೆಯಬಯಸುವಮನೆಗಳವರು ಭರಿಸಬೇಕಾಗುತ್ತದೆ.
ಅದೇ ರೀತಿ ನಗರ ಪ್ರದೇಶಗಳಲ್ಲಿ , ಸಮಗ್ರ ವಿದ್ಯುತ್ಅಭಿವೃದ್ಧಿ ಯೋಜನೆ (ಐ.ಪಿ.ಡಿ.ಎಸ್.) ವಿದ್ಯುತ್ಪಡೆಯುವುದಕ್ಕೆ ಸಂಬಂಧಿಸಿ ಅವಶ್ಯ ಮೂಲಸೌಕರ್ಯಗಳ ಒದಗಣೆಗೆ ಅವಕಾಶ ಕಲ್ಪಿಸುತ್ತದೆ, ಆದರೆಇನ್ನೂ ಕೆಲವು ಮನೆಗಳು ವಿದ್ಯುತ್ ಸಂಪರ್ಕ ಪಡೆದಿಲ್ಲ,ಇದಕ್ಕೆ ಕಾರಣ ಆರಂಭಿಕ ಶುಲ್ಕವನ್ನು ಪಾವತಿಸುವಷ್ಟುಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿರುವುದು.
ಆದ್ದರಿಂದ , ಸೌಭಾಗ್ಯ ಯೋಜನೆಯನ್ನು ಇಂತಹನಿರ್ವಾತಗಳನ್ನು ಬೆಸೆಯಲು ಮತ್ತು ಆರಂಭಿಕತಡೆಗಳನ್ನು ನಿವಾರಿಸಲು, ಕೊನೆಯ ತುದಿಯವರೆಗೂಸಂಪರ್ಕ ಒದಗಿಸುವುದಕ್ಕಾಗಿ ಮತ್ತು ಗ್ರಾಮೀಣ ಹಾಗುನಗರ ಪ್ರದೇಶದ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲದಮನೆಗಳಿಗೆ ವಿದ್ಯುತ್ ಸಂಪರ್ಕ ಬಿಡುಗಡೆ ಮಾಡಲುಆರಂಭಿಸಲಾಗಿದೆ.
ಪ್ರಶ್ನೆ ಸಂಖ್ಯೆ 7. ಡಿ.ಡಿ.ಯು.ಜಿ.ಜೆ.ವೈಯಡಿಯಲ್ಲಿ ಲಭ್ಯ ಇರುವ ಯೋಜನಾಗಾತ್ರಕ್ಕಿಂತ ಸೌಭಾಗ್ಯ ಯೋಜನೆಯ ಗಾತ್ರದೊಡ್ದದಾಗಿದೆಯೇ ?.
ಉತ್ತರ; ಹೌದು, ಸೌಭಾಗ್ಯ ಯೋಜನೆಯ ವೆಚ್ಚ 16,320ಕೋಟಿ. ರೂ.ಗಳಾಗಿದ್ದು, ಇದು ಡಿ.ಡಿ.ಯು.ಜಿ.ಜೆ.ವೈಯಡಿಯ ಹೂಡಿಕೆ ಮೊತ್ತಕ್ಕಿಂತ ಹೆಚ್ಚಿನದಾಗಿದೆ.
ಪ್ರಶ್ನೆ ಸಂಖ್ಯೆ 8 . ರಾಜ್ಯಗಳಿಗೆ ಹಣ ಬಿಡುಗಡೆಮಾಡಲು ಮಾನದಂಡಗಳು ಏನು ?.
ಉತ್ತರ: ಈ ಯೋಜನೆಯಡಿ ಯೋಜನೆಗಳನ್ನುರಾಜ್ಯಗಳು ಸಲ್ಲಿಸುವ ವಿವರವಾದ ಯೋಜನಾ ವರದಿ(ಡಿಪಿಆರ್) ಗಳನ್ವಯ ಮಂಜೂರು ಮಾಡಲಾಗುತ್ತದೆ.ಯೋಜನೆಗೆ ಹಣಕಾಸು ಬಿಡುಗಡೆಗೆ ಮಿತಿ ಇಲ್ಲ.
ಪ್ರಶ್ನೆ ಸಂಖ್ಯೆ 9 . ಇಡೀ ದೇಶವ್ಯಾಪ್ತಿಯಲ್ಲಿಯೋಜನೆಯ ಅನುಷ್ಟಾನ ಹೇಗಿರುತ್ತದೆ.?.
ಉತ್ತರ: ಯೋಜನಾ ಪ್ರಸ್ತಾವನೆಗಳನ್ನು ರಾಜ್ಯದಡಿಸ್ಕಾಂಗಳು/ವಿದ್ಯುತ್ ಇಲಾಖೆಗಳು ತಯಾರಿಸಿರಬೇಕುಮತ್ತು ಭಾರತ ಸರಕಾರದ ವಿದ್ಯುತ್ ಇಲಾಖೆಕಾರ್ಯದರ್ಶಿ ನೇತೃತ್ವದ ಅಂತರ್ ಸಚಿವಾಲಯ ನಿಗಾಸಮಿತಿಯಿಂದ ಮಂಜೂರಾತಿ ಪಡೆದಿರಬೇಕು.ಮಂಜೂರಾದ ಯೋಜನೆಗಳ ವಿದ್ಯುದ್ದೀಕರಣಕಾಮಗಾರಿಯನ್ನು ಸಂಬಂಧಿತ ಡಿಸ್ಕಾಂಗಳು/ವಿದ್ಯುತ್ಇಲಾಖೆಗಳು ನಿಗದಿತ ಮಾನದಂಡಗಳ ಅನ್ವಯ ಟರ್ನ್ಕೀ ಗುತ್ತಿಗೆದಾರರು, ಅಥವಾ ಇಲಾಖೆಯ ಮೂಲಕ ,ಇಲ್ಲವೇ ಈ ಕಾಮಗಾರಿಯನ್ನು ನಡೆಸಲು ಸಾಮರ್ಥ್ಯಇರುವ ಸೂಕ್ತ ಏಜೆನ್ಸಿಗಳ ಮೂಲಕ ಅನುಷ್ಟಾನಕ್ಕೆತರಬೇಕು.
ಪ್ರಶ್ನೆ ಸಂಖ್ಯೆ 10. ಅವಧಿ ಬದ್ಧವಾಗಿ ಗುರಿಸಾಧಿಸಲು ಅನುಸರಿಸುವ ತಂತ್ರ ಏನು.?.
ಉತ್ತರ. ಮನೆಗಳಿಗೆ ವಿದ್ಯುತ್ ಸಂಪರ್ಕ ಮಂಜೂರುಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲುಗ್ರಾಮಗಳಲ್ಲಿ/ ಗ್ರಾಮಗಳ ಗುಂಪುಗಳಲ್ಲಿ (ಕ್ಲಸ್ಟರ್ಮಟ್ಟದಲ್ಲಿ ) ಶಿಬಿರಗಳನ್ನು ಆಯೋಜಿಸಿ, ಆಧುನಿಕತಂತ್ರಜ್ಞಾನಗಳಾದ ಮೊಬೈಲ್ ಆಪ್/ವೆಬ್ ಪೋರ್ಟಲ್ಬಳಸಿ ಫಲಾನುಭವಿಗಳನ್ನು ಗುರುತಿಸಲಾಗುವುದು.ವಿದ್ಯುತ್ ಸಂಪರ್ಕದ ಅರ್ಜಿಗಳನ್ನು ವಿದ್ಯುನ್ಮಾನಮಾಧ್ಯಮದ ಮೂಲಕ ನೊಂದಾಯಿಸಿಕೊಳ್ಳಬಹುದು.ಮತ್ತು ಅರ್ಜಿದಾರರ ಭಾವಚಿತ್ರ, ಗುರುತಿನ ಕಾರ್ಡಿನ ಪ್ರತಿಮತ್ತು /ಅಥವಾ ಮೊಬೈಲ್ ಸಂಖ್ಯೆ/, ಆಧಾರ್ ಸಂಖ್ಯೆ/ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿ ಅವಶ್ಯ ದಾಖಲೆಗಳಸಲ್ಲಿಕೆಯನ್ನು ಶಿಬಿರಗಳಲ್ಲಿ ಪೂರ್ಣಗೊಳಿಸುವಮೂಲಕ ಸಂಪರ್ಕಗಳನ್ನು ತ್ವರಿತವಾಗಿ ಬಿಡುಗಡೆಮಾಡುವುದು ಸಾಧ್ಯವಾಗುತ್ತದೆ.
ಗ್ರಾಮ ಪಂಚಾಯತುಗಳು/ಗ್ರಾಮ ಮಟ್ಟದಲ್ಲಿರುವಸಾರ್ವಜನಿಕ ಸಂಸ್ಥೆಗಳಿಗೂ ಅರ್ಜಿ ಸ್ವೀಕರಿಸುವ ,ದಾಖಲೆಗಳನ್ನು ಪೂರ್ಣಗೊಳಿಸುವ ಅಧಿಕಾರನೀಡಲಾಗುವುದು. ಮತ್ತು ಎಲ್ಲೆಲ್ಲಿ ಅವಶ್ಯವಿದೆಯೋಅಲ್ಲಲ್ಲಿ ಅವುಗಳಿಗೆ ಬಿಲ್ ವಿತರಣೆ, ಬಿಲ್ ವಸೂಲಿಮತ್ತು ಇತರ ಕಾರ್ಯ ಚಟುವಟಿಕೆಗಳ ಜವಾಬ್ದಾರಿನೀಡಲಾಗುವುದು.
ಪ್ರಶ್ನೆ ಸಂಖ್ಯೆ 11 . ವಿದ್ಯುತ್ ಜಾಲದಲ್ಲಿ 4ಕೋಟಿ ಮನೆಗಳ ಸೇರ್ಪಡೆಯಿಂದಾಗಿವಿದ್ಯುತ್ ಬೇಡಿಕೆಯಲ್ಲಿ ಆಗಬಹುದಾದಅಂದಾಜು ಹೆಚ್ಚಳ ಎಷ್ಟು.?.
ಉತ್ತರ: ಪ್ರತೀ ಮನೆಗೆ ದಿನಕ್ಕೆ ಸರಾಸರಿ 8 ಗಂಟೆವಿದ್ಯುತ್ ಬಳಕೆ ಲೆಕ್ಕಾಚಾರದಲ್ಲಿ 1 ಕಿ.ವಾ. ಸರಾಸರಿವಿದ್ಯುತ್ ಹೊರೆಯಂತೆ, 28,000 ಮೆಗಾ ವ್ಯಾಟ್ಹೆಚ್ಚುವರಿ ವಿದ್ಯುತ್ ಆವಶ್ಯಕತೆ ಇರುತ್ತದೆ ಮತ್ತುವಾರ್ಷಿಕ 80,000 ಮಿಲಿಯನ್ ಯುನಿಟ್ ಹೆಚ್ಚುವರಿವಿದ್ಯುತ್ ಬೇಕಾಗುತ್ತದೆ. ಇದೊಂದು ಬಲಯುತವಾದಚಲನಶೀಲ ಅಂಕಿ ಅಂಶ. ಆದಾಯದಲ್ಲಿ ಹೆಚ್ಚಳಮಾಡುವ ಮೂಲಕ ಮತ್ತು ವಿದ್ಯುತ್ ಬಳಕೆ ಅಭ್ಯಾಸದಮೂಲಕ ವಿದ್ಯುತ್ ಬೇಡಿಕೆಯಲ್ಲಿವ್ಯತ್ಯಾಸವಾಗಬಹುದು. ಊಹನೆಗಳು ಬದಲಾದರೆ ಈಅಂಕಿ ಅಂಶಗಳೂ ಬದಲಾಗುತ್ತವೆ.
ಪ್ರಶ್ನೆ ಸಂಖ್ಯೆ.12 . ಜಾಲದ ಲೈನುಗಳನ್ನುವಿಸ್ತರಿಸುವುದು ಹಣಕಾಸು ದೃಷ್ಟಿಯಿಂದಲಾಭದಾಯಕವಾಗಿಲ್ಲದ ಸಂಧರ್ಭಗಳಲ್ಲಿಮನೆಗಳಿಗೆ ವಿದ್ಯುತ್ ಒದಗಿಸಲುಯೋಜನೆಯಲ್ಲಿ ಏನೆಲ್ಲ ಪ್ರಸ್ತಾವನೆಗಳು/ಅವಕಾಶಗಳು ಇವೆ.?
ಉತ್ತರ: ದೂರ ಪ್ರದೇಶಗಳಲ್ಲಿರುವ, ಸಂಪರ್ಕ ಸಾಧ್ಯಇಲ್ಲದಿರುವ ಪ್ರದೇಶಗಳ ಮನೆಗಳಿಗೆ 200 ರಿಂದ 300ವ್ಯಾಟ್ ಸೌರ ವಿದ್ಯುತ್ ಘಟಕವನ್ನು 5 ಎಲ್.ಇ.ಡಿ.ದೀಪಗಳು, ಒಂದು ಡಿ.ಸಿ. ಫ್ಯಾನ್, 1 ಡಿ.ಸಿ. ವಿದ್ಯುತ್ಪ್ಲಗ್ ಸಾಮರ್ಥ್ಯದ ಬ್ಯಾಟರಿ ವ್ಯವಸ್ಥೆಯೊಂದಿಗೆ ಮತ್ತುಮುಂದಿನ 5 ವರ್ಷ ಕಾಲ ನಿರ್ವಹಣೆ ಹಾಗು ದುರಸ್ತಿಸೌಕರ್ಯದೊಂದಿಗೆ ಒದಗಿಸಲಾಗುವುದು.
ಪ್ರಶ್ನೆ ಸಂಖ್ಯೆ 13 . ಸೌಭಾಗ್ಯಯೋಜನೆಯಡಿ ಎಷ್ಟು ವಿದ್ಯುತ್ ರಹಿತಮನೆಗಳನ್ನು ವಿದ್ಯುದ್ದೀಕರಿಸಲಾಗುತ್ತದೆ.
ಉತ್ತರ: ದೇಶದಲ್ಲಿ ವಿದ್ಯುತ್ ಸೌಕರ್ಯ ಇಲ್ಲದ 4 ಕೋಟಿ ಮನೆಗಳು ಇವೆ ಎಂದು ಅಂದಾಜಿಸಲಾಗಿದೆ.ಇದರಲ್ಲಿ ಗ್ರಾಮೀಣ ಪ್ರದೇಶದ 1 ಕೋಟಿ ಕಡುಬಡವರಮನೆಗಳು ( ಬಿಪಿಎಲ್) ಡಿ.ಡಿ.ಯು.ಜಿ.ಜೆ.ವೈ.ಕಾರ್ಯಕ್ರಮಗಳಡಿಯಲ್ಲಿ ವಿದ್ಯುತ್ ಸಂಪರ್ಕ ಮಂಜೂರಾತಿಪಡೆದಿವೆ. ಇದರಿಂದಾಗಿ ಒಟ್ಟು 300 ಲಕ್ಷ ಮನೆಗಳು,-ಇದರಲ್ಲಿ 250 ಲಕ್ಷ ಗ್ರಾಮೀಣ ಪ್ರದೇಶದ ಮನೆಗಳುಮತ್ತು 50 ಲಕ್ಷ ನಗರ ಪ್ರದೇಶದ ಮನೆಗಳು ಈಯೋಜನೆಯ ವ್ಯಾಪ್ತಿಗೊಳಪಡಲಿವೆ.
ಪ್ರಶ್ನೆ ಸಂಖ್ಯೆ 14. ಅಕ್ರಮ ಬಳಕೆದಾರರಿಗೆಕ್ಷಮಾದಾನ ನೀಡುವುದು ಈಯೋಜನೆಯೊಳಗೆ ಸೇರಿದೆಯೇ.?.ಅವರಿಗೆಈ ಯೋಜನೆಯಲ್ಲಿ ನೊಂದಾಯಿಸಿಕೊಳ್ಲಲುಅವಕಾಶ ಇದೆಯೇ.? ಯೋಜನೆಯಗುರಿಯಲ್ಲಿ ಈ ಅಂಶವೂಅಡಕವಾಗಿದೆಯೇ?.
ಉತ್ತರ: ಅಕ್ರಮ ಸಂಪರ್ಕಗಳ ಬಗ್ಗೆ ಕ್ರಮತೆಗೆದುಕೊಳ್ಳಬೇಕಾದ ಅಗತ್ಯದ ಬಗ್ಗೆ ನಿರ್ಧಾರಕೈಗೊಳ್ಳಬೇಕಾಗಿರುವುದು ಆಯಾ ಡಿಸ್ಕಾಂಗಳು/ವಿದ್ಯುತ್ ಇಲಾಖೆಗಳು. ಅವುಗಳ ನಿಯಮ/ನಿಬಂಧನೆಗಳ ಅನುಸಾರ ಈ ನಿಟ್ಟಿನಲ್ಲಿ ಅವುಮುಂದುವರಿಯಬೇಕಾಗುತ್ತದೆ. ಇದರ ಹೊರತಾಗಿಯೂಶುಲ್ಕ ಬಾಕಿ ಇರಿಸಿದ ಮತ್ತು ಅದಕ್ಕಾಗಿ ಸಂಪರ್ಕಸ್ಥಗಿತಗೊಳಿಸಿದ ಪ್ರಕರಣಗಳಲ್ಲಿ ಈ ಯೋಜನೆಯ ಲಾಭನೀಡುವಂತಿಲ್ಲ.
ಪ್ರಶ್ನೆ ಸಂಖ್ಯೆ 15. ಯಾವ ರೀತಿಯಲ್ಲಿ ಈಯೋಜನೆಯು ಜನರಿಗೆ ದೈನಂದಿನಜೀವನದಲ್ಲಿ ಸಹಕಾರಿಯಾಗಬಲ್ಲುದು.?.
ಉತ್ತರ: ವಿದ್ಯುತ್ ಲಭ್ಯತೆ ಖಂಡಿತವಾಗಿಯೂ ಮಾನವನಜೀವನದ ಗುಣಮಟ್ಟದ ಮೇಲೆ ಧನಾತ್ಮಕ ಪರಿಣಾಮಬೀರುತ್ತದೆ, ದೈನಂದಿನ ಮನೆವಾರ್ತೆ ಕೆಲಸಗಳಲ್ಲಿ ಮತ್ತುಮಾನವ ಅಭಿವೃದ್ಧಿಯಲ್ಲಿ ಅದು ಮಹತ್ವದ ಪಾತ್ರವಹಿಸುತ್ತದೆ. ಮೊದಲನೆಯದಾಗಿ ವಿದ್ಯುತ್ತಿನ ಸಂಪರ್ಕಲಭ್ಯತೆಯಿಂದಾಗಿ, ಬೆಳಕಿಗಾಗಿ ಸೀಮೆ ಎಣ್ಣೆಯಉಪಯೋಗ ಕಡಿಮೆಯಾಗಲಿದ್ದು ಒಳಾಂಗಣ ಮಾಲಿನ್ಯಕಡಿಮೆಯಾಗಿ ಆ ಮೂಲಕ ಜನರನ್ನು ಆರೋಗ್ಯದಅಪಾಯಗಳಿಂದ ರಕ್ಷಿಸುತ್ತದೆ. ಮತ್ತು ವಿದ್ಯುತ್ ಸಂಪರ್ಕಲಭ್ಯತೆ ದೇಶದ ಎಲ್ಲಾ ಭಾಗಗಳಲ್ಲಿ ಆಧುನಿಕ ಮತ್ತು ದಕ್ಷ ಆರೋಗ್ಯ ಸೇವೆಯನ್ನು ಸ್ಥಾಪಿಸಲು ನೆರವಾಗಲಿದೆ.ಸೂರ್ಯಾಸ್ತದ ಬಳಿಕ ಬೆಳಕಿನ ಲಭ್ಯತೆ ವಿಶೇಷವಾಗಿಮಹಿಳೆಯರಿಗೆ ಹೆಚ್ಚಿನ ವೈಯಕ್ತಿಕ ಸುರಕ್ಷಾಭಾವನೆಯನ್ನು ಒದಗಿಸಲಿದೆ. ಮತ್ತು ಸೂರ್ಯಾಸ್ತದಬಳಿಕದ ಸಾಮಾಜಿಕ ಹಾಗು ಆರ್ಥಿಕ ಚಟುವಟಿಕೆಗಳುಹೆಚ್ಚಿಸಲು ನೆರವಾಗುತ್ತದೆ. ವಿದ್ಯುತ್ ಲಭ್ಯತೆ ಎಲ್ಲಾಪ್ರದೇಶಗಳಲ್ಲಿ ಶಿಕ್ಷಣ ಸೇವೆಗೆ ಹೆಚ್ಚಿನ ಬಲ ತರಲಿದೆ.ಮತ್ತು ಸೂರ್ಯಾಸ್ತದ ಬಳಿಕ ಗುಣಮಟ್ಟದ ಬೆಳಕಿನವ್ಯವಸ್ಥೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹೊತ್ತುತೊಡಗಲು ಅನುಕೂಲ ಮಾಡಿಕೊಡುತ್ತದೆ. ಹಾಗುಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಮಾಡುತ್ತದೆ. ಮನೆಗಳಿಗೆ ವಿದ್ಯುತ್ ಸಂಪರ್ಕಮಹಿಳೆಯರ ಓದಿನ ಸಾಧ್ಯತೆ ಮತ್ತು ಆದಾಯದಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪ್ರಶ್ನೆ ಸಂಖ್ಯೆ 16 . ಯಾವ ರೀತಿಯಲ್ಲಿ ಈಯೋಜನೆ ಆರ್ಥಿಕ ಪ್ರಗತಿ ಮತ್ತುಉದ್ಯೋಗ ನಿರ್ಮಾಣದಲ್ಲಿಸಹಕಾರಿಯಾಗಬಲ್ಲದು?.
ಉತ್ತರ:ವಿದ್ಯುತ್ ಒದಗಣೆಯಿಂದಾಗಿ ಬೆಳಕಿಗಾಗಿ ಸೀಮೆಎಣ್ಣೆ ಬಳಕೆ ಪ್ರಮಾಣ ಕಡಿಮೆಯಾಗಲಿದ್ದು, ಇದರಿಂದಸೀಮೆ ಎಣ್ಣೆ ಮೇಲಿನ ವಾರ್ಷಿಕ ಸಹಾಯಧನ (ಸಬ್ಸಿಡಿ)ಮೊತ್ತ ಕಡಿಮೆಯಾಗಲಿದೆ ಹಾಗು ಇದು ಪೆಟ್ರೋಲಿಯಂಉತ್ಪನ್ನಗಳ ಆಮದು ಪ್ರಮಾಣ ಕಡಿಮೆಯಾಗಲುಸಹಕಾರಿಯಾಗಲಿದೆ.ಪ್ರತೀ ಮನೆಗೆ ವಿದ್ಯುತ್ಒದಗಣೆಯಿಂದಾಗಿ ರೇಡಿಯೋ, ಟೆಲಿವಿಷನ್,ಅಂತರ್ಜಾಲ, ಮೊಬೈಲ್ ಇತ್ಯಾದಿ ಸಹಿತ ಎಲ್ಲಮಾದರಿಯ ಸುಧಾರಿತ ಸಂಪರ್ಕ ಸಂವಹನಸಾಧ್ಯವಾಗುತ್ತದೆ..ಇದರಿಂದ ಪ್ರತಿಯೊಬ್ಬರೂ ಎಲ್ಲಾಪ್ರಮುಖ ಮಾಹಿತಿಯನ್ನು ಈ ಮಾಧ್ಯಮಗಳ ಮೂಲಕಪಡೆಯಬಹುದಾಗಿರುತ್ತದೆ. ರೈತರು ಹೊಸ ಮತ್ತುಸುಧಾರಿತ ಮಾದರಿಯ ಕೃಷಿ ತಂತ್ರಜ್ಞಾನ, ಕೃಷಿ-ಯಂತ್ರೋಪಕರಣ, ಗುಣಮಟ್ಟದ ಬೀಜಗಳು ಇತ್ಯಾದಿಮಾಹಿತಿಯನ್ನು ಪಡೆದುಕೊಳ್ಳುವುದುಸಾಧ್ಯವಾಗುತ್ತದೆ.ಇದರಿಂದ ಕೃಷಿ ಉತ್ಪನ್ನಗಳಲ್ಲಿಹೆಚ್ಚಳವಾಗಿ, ಆದಾಯವೂ ಹೆಚ್ಚಲಿದೆ. ರೈತರು ಮತ್ತುಯುವಕರು ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳನ್ನುಸ್ಥಾಪಿಸುವುದರ ಸಾಧ್ಯತೆಯತ್ತಲೂ ಗಮನಹರಿಸಬಹುದು.
ನಂಬಲರ್ಹ/ವಿಶ್ವಾಸಾರ್ಹ ವಿದ್ಯುತ್ ಪೂರೈಕೆಸೇವೆಯಿಂದ ನಿತ್ಯ ಬಳಕೆ ವಸ್ತುಗಳ ಹೊಸ ಅಂಗಡಿ-ಮಳಿಗೆಗಳು ಸ್ಥಾಪನೆಗೊಳ್ಳುತ್ತವೆ, ಫ಼್ಯಾಬ್ರಿಕೇಶನ್ ಮತ್ತುವರ್ಕ್ ಶಾಪ್ ಗಳು, ಹಿಟ್ಟಿನ ಗಿರಣಿಗಳು, ಸಣ್ಣ ಗುಡಿಕೈಗಾರಿಕೆಗಳು ಇತ್ಯಾದಿಗಳು ಸ್ಥಾಪನೆಗೊಳ್ಳಲು ಅವಕಾಶಒದಗಿಸುತ್ತವೆ. ಮತ್ತು ಇಂತಹ ಆರ್ಥಿಕ ಚಟುವಟಿಕೆಗಳುನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ.ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಕಾಮಗಾರಿಯನ್ನೊಳಗೊಂಡ ಯೋಜನೆಯ ಅನುಷ್ಟಾನಸ್ವಯಂ ಅರೆ ಕುಶಲ, ಕೌಶಲ್ಯ ಭರಿತ ಮಾನವಸಂಪನ್ಮೂಲವನ್ನು ಅಪೇಕ್ಷಿಸುವುದರಿಂದ, ಇದರಫಲಿತಾಂಶವಾಗಿ ಉದ್ಯೋಗಗಳ ಸೃಷ್ಟಿಯಾಗಲಿದೆ. ಈಯೋಜನೆಯ ಅನುಷ್ಟಾನ ಸುಮಾರು 1000 ಲಕ್ಷಮಾನವ ದಿನಗಳ ಕೆಲಸವನ್ನು ಸೃಷ್ಟಿಸಲಿದೆ.
16,000 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಈಯೋಜನೆಯಲ್ಲಿ ಬಾಹ್ಯವಾಗಿ ಧನಾತ್ಮಕವಾದ ಇನ್ನಷ್ಟುಅವಕಾಶಗಳ ಸೃಷ್ಟಿಯಾಗಲಿದ್ದು ಇದು ಉದ್ಯೋಗಗಳನ್ನುಸೃಷ್ಟಿಸಲಿದೆ ಮತ್ತು ಆರ್ಥಿಕತೆಗೆ ಲಾಭ ತರಲಿದೆ.
ಪ್ರಶ್ನೆ ಸಂಖ್ಯೆ 17 . ಯೋಜನೆಯಿಂದ ಹೆಚ್ಚುಜನರಿಗೆ ಲಾಭವಾಗುವಂತೆನೋಡಿಕೊಳ್ಳಲು, ಯೋಜನೆಯ ಬಗ್ಗೆಸಾರ್ವಜನಿಕರಲ್ಲಿ ಅರಿವು-ಜಾಗೃತಿಮೂಡಿಸಲು ಯಾವುದಾದರೂ ಯೋಜನೆಹಾಕಿಕೊಳ್ಳಲಾಗಿದೆಯೇ ?.
ಉತ್ತರ: ಭಾರತ ಸರಕಾರವು ರೇಡಿಯೋ, ಮುದ್ರಣಮಾದ್ಯಮ, ಟೆಲಿವಿಶನ್, ಮಾಹಿತಿ ಫಲಕಗಳುಇತ್ಯಾದಿಗಳ ಮೂಲಕ ಪ್ರಚಾರಾಂದೋಲನಕೈಗೆತ್ತಿಕೊಳ್ಳಲಿದೆ. ವಿದ್ಯುತ್ ಸಂಪರ್ಕ ಪಡೆದುಕೊಳ್ಳಲುಇರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ/ಜಾಗೃತಿಇಲ್ಲದಿರುವುದು, ಸಂಪರ್ಕದ ಖರ್ಚು-ವೆಚ್ಚ, ವಿದ್ಯುತ್ತಿನ ಬಳಕೆ, ಸೀಮೆ ಎಣ್ಣೆ ಮತ್ತು ವಿದ್ಯುತ್ ಬಳಕೆಯಲ್ಲಿಯಖರ್ಚು-ವೆಚ್ಚ, ವಿದ್ಯುತ್ ಬಳಕೆಯಿಂದಾಗುವ ನೇರ ಮತ್ತುಪರೋಕ್ಷ ಲಾಭಗಳು .. ಇತ್ಯಾದಿಗಳ ಬಗ್ಗೆ ಮಾಹಿತಿ/ಅರಿವಿನ ಕೊರತೆಗಳು- ಮನೆಗಳ ವಿದ್ಯುದ್ದೀಕರಣನಿಧಾನಗತಿಯಿಂದ ಸಾಗಲು ಕಾರಣಗಳು ಎಂದು ವಿವಿಧಸಂಶೋಧನಾ ಅಧ್ಯಯನಗಳು ಹೇಳಿವೆ.
ಆದ್ದರಿಂದಾಗಿ ಈ ಯೋಜನೆಯ ಬಗ್ಗೆ ಜನರಿಗೆ ಸರ್ವಮಾಹಿತಿಯೂ ಲಭ್ಯವಾಗುವಂತೆ ಮಾಡಲು ವ್ಯಾಪಕಬಹು ಮಾಧ್ಯಮ ಆಂದೋಲನವನ್ನುಕೈಗೆತ್ತಿಕೊಳ್ಳಲಾಗುವುದು. ಡಿಸ್ಕಾಂ ಅಧಿಕಾರಿಗಳು ಕೂಡಾಗ್ರಾಮಾಂತರ ಪ್ರದೇಶಗಳಲ್ಲಿ ಸೌಭಾಗ್ಯ ಯೋಜನೆಯಬಗ್ಗೆ ಮತ್ತು ವಿದ್ಯುತ್ತಿನ ಬಗ್ಗೆ ಮಾಹಿತಿ ನೀಡಲು/ಜಾಗೃತಿಮೂಡಿಸಲು ಶಿಬಿರಗಳನ್ನು ಆಯೋಜಿಸುವರು. ಶಾಲಾಶಿಕ್ಷಕರು, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯಅಕ್ಷರಸ್ಥ / ಶಿಕ್ಷಿತ ಯುವಕರು ಕೂಡಾ ಈ ಜಾಗೃತಿಪ್ರಚಾರಾಂದೋಲನದಲ್ಲಿ ಪಾಲ್ಗೊಳ್ಳುತ್ತಾರೆ.
#####
No comments:
Post a Comment