Thursday, 7 September 2017

ನಮ್ಮ ಮೆಟ್ರೋ/ ಸ್ಟೇಷನ್ಗೆ ಬಸವಣ್ಣನವರ ಹೆಸರು ಕೋರಿ ಅರ್ಜಿ



ಬೆಂಗಳೂರು, ಸೆ.7- ನಗರದ ನಮ್ಮ ಮೆಟ್ರೋ ಸಾರಿಗೆ ಸಂಸ್ಥೆಗೆ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡುವಂತೆ ಶಿವಶಕ್ತಿ ಮಹಿಳಾ ಸಂಘ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದವು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಶಕ್ತಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಎಚ್.ಆರ್.ಉಮಾದೇವಿ, ಬಸವಣ್ಣನವರು ಅವರ ಕಾಲದಲ್ಲಿ ಹಲವಾರು ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ. ಬಡವರು, ದೀನದಲಿತರು, ಹಿಂದುಳಿದವರು, ಶೋಷಿತ ಸಮಾನತೆಗೆ ಹೋರಾಟ ನಡೆಸಿದ್ದಾರೆ. ಅಲ್ಲದೆ ತಮ್ಮ ವಚನಗಳ ಮೂಲಕ ಕನ್ನಡ ಭಾಷೆಗೆ ಸುಭದ್ರವಾದ ಅಡಿಪಾಯವನ್ನು ಹಾಕಿದ್ದಾರೆ. ಆದ್ದರಿಂದ ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ವಿವಿಧ ಮಹಿಳಾ ಸಂಘದ ಪದಾಧಿಕಾರಿಗಳಾದ ಹೇಮಲತಾ, ಸುಮಾಲಿನಿ, ಮಮತಾ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


No comments:

Post a Comment