ಬೆಂಗಳೂರು, 2017 : ಕರ್ನಾಟಕಕಾಟಿಕ್ ಸಮಾಜದ ಮಹಾಸಮಾವೇಶದಲ್ಲಿ ಶಾಸಕ ಎಚ್.ಎಂ.ರೇವಣ್ಣ ರವರು ಕಾಟಿಕ್ಸಮಾಜಕ್ಕೆ ಎರಡು ಎಕರೆ ಭೂಮಿನೀಡುವಂತೆ ಮುಖ್ಯಮಂತ್ರಿಸಿದ್ಧರಾಮಯ್ಯ ಅವರ ಮೇಲೆ ಒತ್ತಡಹೇರುತ್ತೇನೆ' ಎಂದು ವಿಧಾನ ಪರಿಷತ್ಸಧಸ್ಯ ಎಚ್.ಎಂ.ರೇವಣ್ಣ ರವರುಸೋಮವಾರ ಬೆಂಗಳೂರಿನ ಶ್ರೀ.ಹರಿಕಲ್ಯಾಣ ಮಂಟಪದಲ್ಲಿ ನಡೆದಕರ್ನಾಟಕ ಕಾಟಿಕ್ ಸಮಾಜಸಮಾವೇಶದಲ್ಲಿ ತಿಳಿಸಿದರು.ಕರ್ನಾಟಕಕಾಟಿಕ್ ಸಮಾಜದ ಸಮಾವೇಶದಲ್ಲಿಮಾತನಾಡಿದ ಅವರು, ರಾಜ್ಯಸರ್ಕಾರವು ಹಿಂದುಳಿದ ಜಾತಿಗಳಸಂಘಗಳಿಗೆ 2 ಏಕರೆ ಭೂಮಿ ನೀಡಲುನಿರ್ಧರಿಸಿದೆ . ಸಮುದಾಯದಮುಖಂಡರ ನಿಯೋಗವನ್ನುಮುಖ್ಯಮಂತ್ರಿ ಬಳಿಗೆ ಕರೆದೊಯ್ದು ,ಭೂಮಿ ನೀಡುವಂತೆ ಮನವೊಲಿಸುತ್ತೆನೆ'ಎಂದರು.
'ಸಮುದಾಯದ ಮಕ್ಕಳಿಗೆ ಉತ್ತಮಶಿಕ್ಷಣ ಕೊಡಿಸಬೇಕು. ಸರ್ಕಾರಿ ಕೆಲಸಸೇರಿದಂತೆ ಯಾವುದೇ ಉದ್ಯೋಗಕ್ಕೂಶಿಕ್ಷಣ ಅತಿಮುಖ್ಯ . ಶೈಕ್ಷಣಿಕವಾಗಿಮೊಂದೆ ಬಂದರೆ, ಆರ್ಥಿಕವಾಗಿಯೂಅಭಿವೃದ್ಧಿ ಹೊಂದಲು ಸಾಧ್ಯವಾಗುತದೆ.ಈ ಬಗ್ಗೆ ಎಲ್ಲರೂ ಯೋಚಿಸಬೇಕುಎಂದು ಸಲಹೆ ನೀಡಿದರು.
ಡಿ.ದೇವರಾಜ ಅರಸು ಹಿಂದಿಳಿದವರ್ಗಗಳ ಅಭಿವೃದ್ಧಿ ನಿಗಮದವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಏಕಾಂತಪ್ಪ , 'ನಿಗಮದ ವತಿಯಿಂದವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರಬಡ್ಡಿದರದಲ್ಲಿ ರೂ.1 ಲಕ್ಷ ಶೈಕ್ಷಣಿಕ ಸಾಲನೀಡಲಾಗುತದೆ. ಎಂಜಿನಿಯರಿಂಗ್ವಿದ್ಯಾರ್ಥಿಗಳಿಗೆ ರೂ.4 ಲಕ್ಷ,ವ್ಯದ್ಯಕೀಯ ವಿದ್ಯಾರ್ಥಿಗಳಿಗೆ ರೂ.5ಲಕ್ಷ, ವಿದೇಶದಲ್ಲಿ ವ್ಯಾಸಂಗ ಮಾಡುವವಿದ್ಯಾರ್ಥಿಗಳಿಗೆ ಬಡ್ಡಿ ರಹಿತವಾಗಿರೂ.10 ಲಕ್ಷ ಸಾಲ ಹಾಗೂ ಶೇ.4 ರಬಡ್ಡಿದರದಲ್ಲಿ ರೂ.20 ಲಕ್ಷ ಸಾಲಸೌಲಭ್ಯ ಒದಗಿಸಲಾಗುತದೆ' ಎಂದುವಿವರಿಸಿದರು.
'ಸಮುದಾಯದ ವಿಧವೆಯರಿಗೆ ಶೇ.4ರಬಡ್ಡಿ ದರದಲ್ಲಿ ರೂ.40 ಸಾವಿರ ಸಾಲನೀಡಲಾಗುತದೆ. ಪದವಿ ಪಡೆದಿರುವಹಾಗೂ ಚಾಲನಾ ಪರವಾನಗಿಹೊಂದಿರುವ ಯುವಜನರಿಗೆ ಟ್ಯಾಕ್ಷಿಹಾಗೂ ಸರಕು ಸಾಗಣೆ ವಾಹನಖರೀದಿಸಲು ರೂ.3 ಲಕ್ಷ ಸಬ್ಸಿಡಿನೀಡಲಾಗುತದೆ. ಉಳಿದ ಮೊತ್ತವನ್ನುಫಲಾನುಭವಿ ಭರಿಸಬೇಕು' ಎಂದರು.
'ಸಮಾಜದ ಮಹಿಳೆಯರು ಸ್ತ್ರಿಶಕ್ತಿಸಂಘ ಮಾಡಿಕೊಂಡಿದ್ದರೆ ವಾರ್ಷಿಕಶೇ.4ರ ಬಡ್ಡಿ ದರದಲ್ಲಿ ರೂ.1.5 ಲಕ್ಷಸಾಲ ನೀಡಲಿದ್ದು, ಇದರಲ್ಲಿ ರೂ.50ಸಾವಿರ ಸಬ್ಸಿಡಿ ಸೇರಿರುತ್ತದೆ. ಮಹಿಳಾಸಮೃದ್ಧಿ ಯೋಜನೆಯಡಿ ಮಹಿಳೆಯರುರೂ.35 ಸಾವಿರ ಸಾಲ ಪಡೆಯಬಹುದು'ಎಂದು ಹೇಳಿದರು.
ಸಮಾಜದ ಪ್ರಧಾನ ಕಾರ್ಯದರ್ಶಿವೆಂಕಟ್ ರಾವ್, 'ಕಾಟಿಕ್ ಸಮಾಜವನ್ನುಖಾಟಿಕ್, ಕಲಾಲ್, ಕಟುಕ, ಕಸಾಯಿ ,ಸೂರ್ಯವಂಶಿ, ಕ್ಷತ್ರಿಯ ಮತ್ತು ಮರಾಠಎಂಬ ಹೆಸರಿನಿಂದಲೂಕರೆಯಲಾಗುತದೆ. ಸಮಾಜವು ಶಿಕ್ಷಣ,ಉದ್ಯೋಗ, ವ್ಯಾಪಾರ ಸೇರಿದಂತೆ ಎಲ್ಲಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿದೆ.
ಸಮುದಾಯದ ವಿದ್ಯಾರ್ಥಿಗಳಅನುಕೂಲಕ್ಕಾಗಿ ವಿದ್ಯಾರ್ಥಿನಿಲಯವಿಲ್ಲ. ಸಮುದಾಯ ಭವನವೂಇಲ್ಲಾ. ಸಮಾಜದ ಅಭಿವೃದ್ಧಿಗೆಸರ್ಕಾರವು ಬೆಂಬಲ ನೀಡಬೇಕು'ಎಂದು ಮನವಿ ಮಾಡಿದರು.
ಕಾಟಿಕ್ ಸಮಾಜದ ಸಮಾವೇಶದಲ್ಲಿಪಾಲ್ಗೊಂಡಿದ್ದ ಸಮುದಾಯದ ಜನ.
No comments:
Post a Comment