Friday, 8 September 2017

ಡಾಕ್ಸ್‌ಆ್ಯಪ್‌’ನಿಂದ ಮಹಿಳೆಯರಿಗೆ ಉಚಿತ ಸಲಹೆ

ಡಾಕ್ಸ್‌ಆ್ಯಪ್‌’ನಿಂದ ಮಹಿಳೆಯರಿಗೆ ಉಚಿತ ಸಲಹೆ


ಹಿಂದಿನ ತಿಂಗಳು ನಡೆದ ಉಚಿತ ಸಮಾಲೋಚನೆ ಸೇವೆಯಶಸ್ವಿಯಾಯಿತು. ಇದರಿಂದ ‘ಡಾಕ್ಸ್‌ಆ್ಯಪ್‌’ ಸೇವೆಯಿಂದಮತ್ತಷ್ಟು ಉತ್ತೇಜನಗೊಂಡಿದ್ದೇವೆ. ಪ್ರತಿ ತಿಂಗಳು 9ನೇತಾರೀಕಿನಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಉಚಿತಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.


ಬೆಂಗಳೂರು:  ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ‘ಡಾಕ್ಸ್‌ಆ್ಯಪ್‌’  (DocsApp)ಮೂಲಕ ಮಹಿಳೆಯರಿಗೆ ಉಚಿತ ಸಮಾಲೋಚನೆಸೇವೆಯನ್ನು ಕಳೆದು ತಿಂಗಳು ನೀಡಲಾಗಿತ್ತು. ಈಸಮಾಲೋಚನೆ ಅತ್ಯಂತ ಯಶಸ್ವಿಯಾಗಿತ್ತು. ಕೇವಲ 30 ನಿಮಿಷದಲ್ಲಿ ತಜ್ಞ ವೈದ್ಯರು ರೋಗಿಯನ್ನು ಸಂಪರ್ಕಿಸಿಅತ್ಯುತ್ತಮವಾದ ಸಲಹೆಗಳನ್ನು ನೀಡುತ್ತಾರೆ. ಇದರಿಂದಉತ್ತೇಜನಗೊಂಡು ಪ್ರತಿ ತಿಂಗಳು 9ನೇ ತಾರೀಕಿನಂದು ಉಚಿತಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.


ಭೌಗೋಳಿಕವಾಗಿ ಯಾವುದೇ ಸ್ಥಳದಲ್ಲಿರುವ ರೋಗಿಗೆಗುಣಮಟ್ಟದ ವೈದ್ಯಕೀಯ ಸಲಹೆ ನೀಡುವುದು ಈಸಮಾಲೋಚನೆಯ ಆಶಯ.  ಈ ಸೇವೆಯಿಂದ ವಿಶೇಷವಾಗಿಮಹಿಳೆಯರು ಹೆಚ್ಚು ಲಾಭ ಪಡೆದುಕೊಳ್ಳುತ್ತಾರೆ. ಪ್ರತಿ ತಿಂಗಳು9ನೇ ತಾರೀಕಿನಂದು ಬೆಳಿಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಉಚಿತವಾಗಿ ವೈದ್ಯರ ಸೇವೆ ದೊರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಪ್ರಧಾನ ಮಂತ್ರಿ ಸುರಕ್ಷಿತ್‌ ಮತ್ರಿತ್ವ ಅಭಿಯಾನ (ಪಿಎಂಎಸ್‌ಎಂಎ)ದದೃಷ್ಟಿಯಲ್ಲಿಟ್ಟುಕೊಂಡು ಈ ಸೇವೆ ಒದಗಿಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಅಭಿಯಾನಹಮ್ಮಿಕೊಂಡಿದೆ.  ಹೆರಿಗೆ ಸಂದರ್ಭದಲ್ಲಿ ಮತ್ತು ಶಿಶು ಸಾವುಗಳಸಂಖ್ಯೆಯಲ್ಲಿ ಕಡಿತಗೊಳಿಸುವುದು ಈ ಯೋಜನೆಯಉದ್ದೇಶವಾಗಿದೆ. ಪಿಎಂಎಸ್‌ಎಂಎ ಸಮಗ್ರವಾದ ಮತ್ತುಗುಣಮಟ್ಟದ ಆರೋಗ್ಯ ಸೇವೆಯನ್ನು ಗರ್ಭಿಣಿಯರಿಗೆ ದೇಶಾದ್ಯಂತ ಉಚಿತವಾಗಿ ಪ್ರತಿ ತಿಂಗಳು 9ನೇ ತಾರೀಕಿನಂದುಒದಗಿಸುವ ಉದ್ದೇಶ ಹೊಂದಿದೆ. ಹೀಗಾಗಿ ಆ್ಯಪ್‌ ಮೂಲಕಮಹಿಳೆಯರಿಗೆ ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಸೇವೆಯನ್ನುಒದಗಿಸುತ್ತದೆ.


ಕಳೆದ ತಿಂಗಳು ನೀಡಿದ ಸೇವೆಯನ್ನು ಕೋಲ್ಕತ್ತ, ಹೈದರಾಬಾದ್, ಚಂಡೀಗಡ, ದೆಹಲಿ, ಪುಣೆ, ಸಿಕ್ಕಿಂ, ಜೈಪುರ, ಅಹ್ಮದಾಬಾದ್‌, ಚೆನ್ನೈ ಮತ್ತು ಲಖನೌ ಮಹಿಳೆಯರು ಪಡೆದುಕೊಂಡಿದ್ದರು. ಲೈಂಗಿಕ ಆರೋಗ್ಯ, ಅನಿಯಮಿತ ಋತುಚಕ್ರ, ಗರ್ಭಧಾರಣೆಮುಂತಾದ ಸಮಸ್ಯೆಗಳ ಬಗ್ಗೆ ಪರಿಹಾರ ಪಡೆದುಕೊಂಡಿದ್ದರು. ಇವರಲ್ಲಿ ಶೇಕಡ 50ರಷ್ಟು ಮಹಿಳೆಯರು 25ರಿಂದ 35 ವರ್ಷದಒಳಗಿನವರಾಗಿದ್ದಾರೆ. ಉಳಿದವರು ಶೇಕಡ 35ರಷ್ಟುಮಹಿಳೆಯರು 36ರಿಂದ 45 ವಯಸ್ಸಿನವರಾಗಿದ್ದಾರೆ. ಆಶ್ಚರ್ಯವೆಂದರೆ ಶೇಕಡ 15ರಷ್ಟು ಪುರುಷರು 20ರಿಂದ 25ನೇವಯಸ್ಸಿನವರ ಮಹಿಳೆಯರ ಪರವಾಗಿ ಸಮಸ್ಯೆಗಳ ಬಗ್ಗೆಹೇಳಿಕೊಂಡಿದ್ದರು.


ಇವರಲ್ಲಿ ಬಹುತೇಕರು ಅನಿಯಮಿತ ಋತುಚಕ್ರದ ಬಗ್ಗೆಯೇಹೆಚ್ಚು ಪ್ರಶ್ನೆ ಕೇಳಿದ್ದರು. ಸುಲಭವಾಗಿ ಸ್ತ್ರೀರೋಗ ತಜ್ಞರು ಸಲಹೆನೀಡಿದ್ದರು. ಇದರಿಂದ ಮಹಿಳೆಯರು ತೃಪ್ತಿಪಟ್ಟರು. ‘ಡಾಕ್ಸ್‌ಆ್ಯಪ್‌’ ಈ ಸೇವೆಗಳನ್ನು ಒದಗಿಸುವ ಉದ್ದೇಶದಿಂದಲೇರೂಪಿಸಲಾಗಿದೆ. ಈ ಮೂಲಕ ಜಾಗೃತಿ ಮೂಡಿಸಿಮಹಿಳೆಯರಿಗೆ ಸಹಾಯ ನೀಡಲಾಗುತ್ತದೆ.

ಮಹಿಳೆಯರಿಗೆ ನೆರವು ನೀಡುವುದು ನಮ್ಮ ಉದ್ದೇಶ. ಇದಕ್ಕಾಗಿನಾವು ಉಚಿತ ಸೇವೆ ಒದಗಿಸುತ್ತಿದ್ದೇವೆ. ಇದಕ್ಕೆ ಭಾರಿ ಪ್ರತಿಕ್ರಿಯೆವ್ಯಕ್ತವಾಗಿದೆ. ಇದನ್ನು ಪ್ರತಿ ತಿಂಗಳು ಸೇವೆ ಒದಗಿಸಲುಉದ್ದೇಶಿಸಲಾಗಿದೆ. ಈ ಮೂಲಕ ನಮ್ಮ ದೇಶದ ಮಹಿಳೆಯರುಆರೋಗ್ಯವಂತರಾಗಿರಬೇಕು ಎನ್ನುವ ಆಶಯ ಹೊಂದಿದ್ದೇವೆ’ ಎಂದು ಡಾಕ್ಸ್‌ಆ್ಯಪ್‌ ಸಂಸ್ಥಾಪಕ ಮತ್ತು ಸಿಇಒ ಸತೀಶ್‌ ಕಣ್ಣನ್‌ ಹೇಳುತ್ತಾರೆ.


ಗುಣಮಟ್ಟದ ನಿರ್ವಹಣೆ, ಮಾಹಿತಿ ಭದ್ರತೆ ನಿರ್ವಹಣೆ ಮತ್ತುಗ್ರಾಹಕರ ತೃಪ್ತಿಗಾಗಿ ಹಾಗೂ ದೂರುಗಳ ನಿರ್ವಹಣೆಯಲ್ಲಿ‘ಡಾಕ್ಸ್‌ಆ್ಯಪ್‌’ ಮೂರು ಬಾರಿ ಐಎಸ್‌ಒ ಪ್ರಮಾಣಪತ್ರಪಡೆದಿರುವ ಮೊದಲ ಆನ್‌ಲೈನ್‌ ಸೇವೆಯಾಗಿದೆ.


ಡಾಕ್ಸ್‌ಆ್ಯಪ್‌ ಕುರಿತು:


ಡಾಕ್ಸ್‌ಆ್ಯಪ್‌ ಐಎಸ್‌ಒ 9001:2015, ಐಎಸ್ಒ 27001:2013 ಮತ್ತು ಐಎಸ್ಒ 10002: 2014 ಪ್ರಮಾಣಪತ್ರ ಪಡೆದಿರುವಆರೋಗ್ಯ ತಂತ್ರಜ್ಞಾನ ಕಂಪೆನಿಯಾಗಿದೆ. ಜಾಗತಿಕಮಟ್ಟದಸೇವೆಯನ್ನು ಒದಗಿಸುವುದು ಕಂಪೆನಿಯ ಆಶಯವಾಗಿದೆ. ಯಾವುದೇ ದೇಶದ ವ್ಯಕ್ತಿ, ಯಾವುದೇ ಸಮಯದಲ್ಲಿ ಈ ಆ್ಯಪ್‌ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. 2015ರ ಜುಲೈನಲ್ಲಿಈ ಆ್ಯಪ್‌ ಅನ್ನು ಆರಂಭಿಸಲಾಗಿದೆ. ‘ಡಾಕ್ಸ್‌ಆ್ಯಪ್’ ಐಐಟಿಮದ್ರಾಸ್‌ನ ಹಳೆಯ ವಿದ್ಯಾರ್ಥಿ ಸತೀಶ್ ಕಣ್ಣನ್‌ ಅವರಕನಸಿನ ಯೋಜನೆಯಾಗಿದೆ. 


 ಆ್ಯಪ್‌ ಅನ್ನು ಈಗಾಗಲೇ 10 ಲಕ್ಷ ಮಂದಿ ಡೌನ್‌ಲೌಡ್‌ ಮಾಡಿಕೊಂಡಿದ್ದಾರೆ. 2018ರ ವೇಳೆಗೆ 50 ಲಕ್ಷ ಮಂದಿ ಈ ಆ್ಯಪ್‌ ಡೌನ್‌ಲೌಡ್‌ ಮಾಡಿಕೊಳ್ಳುವ ನಿರೀಕ್ಷೆ ಇದೆ. ಫೇಸ್‌ಬುಕ್‌ ಸಹಯೋಗದಲ್ಲಿ ಅಮೇಜಾನ್‌ ಡಾಕ್ಸ್‌ಆ್ಯಪ್‌ ಅನ್ನು 2017ರಮೆಡಿಕಲ್‌ಆ್ಯಪ್‌ ಎಂದು ಘೋಷಿಸಲಾಗಿದೆ. ಈಗಿನ ಪ್ರಸ್ತುತಸನ್ನಿವೇಶ ನೋಡಿದರೆ ಜಾಗತಿಕ ಆರೋಗ್ಯ ರಕ್ಷಣೆಯಲ್ಲಿಡಾಕ್ಸ್‌ಆ್ಯಪ್‌ ಹೊಸ ಕ್ರಾಂತಿ ಮಾಡುವ ನಿರೀಕ್ಷೆ ಇದೆ.


No comments:

Post a Comment