Thursday, 7 September 2017

ಲೆಕ್ಕ ಪತ್ರ ಸ್ಥಾಯಿ ಸಮಿತಿ..BBMP, BANGALORE

ಅಧಿಕಾರಿಗಳ ದುಂಡಾವರ್ತನೆ,
ಹಳಿ ತಪ್ಪಿದ ಲೆಕ್ಕ ಪತ್ರ ವಿಭಾಗ
.ಲೆಕ್ಕ ಪತ್ರ ಸ್ಥಾಯಿ ಸಮಿತಿಯಿಂದ ದೂರು.
💵💵💵💵
ಬಿ.ಬಿ.ಎಂ.ಪಿ.ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನೇತ್ರನಾರಯಣರವರು ಪತ್ರಿಕಾಗೋಷ್ಟಿ ಕುರಿತು ಮಾತನಾಡಿದರು ,ಸಮಿತಿ ಸದಸ್ಯರು ಭಾಗವಹಿಸಿದ್ದರು.
ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನೇತ್ರನಾರಾಯಣ ರವರು ಮಾತನಾಡಿ
ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಚುನಾಯಿತರಾದ ಸದಸ್ಯರಿಂದ ಕಾನೂನುಗಳನ್ನು ಮತ್ತು ಆದೇಶಗಳನ್ನು ನೀಡುವುದು ಜವಾಬ್ಬರಿ ಮತ್ತು ಅದನ್ನು ಜಾರಿಗೆ ತರಬೇಕಾಗಿರುವುದು ಆಡಳಿತ ವ್ಯವಸ್ತೆ ಮೇಲೆ ಇರುತ್ತದೆ .ಅದರೆ ಬಿ.ಬಿ.ಎಂ.ಪಿ.ಯಲ್ಲಿ ಲೆಕ್ಕ ಪತ್ರ ವಿಭಾಗ ಉನ್ನತ ಅಧಿಕಾರಿಗಳ ದರ್ಪದಿಂದ ಲೆಕ್ಕ ಪತ್ರ ಸ್ಥಾಯಿ ಸಮಿತಿಯನ್ನು ಪರಿಗಣಿಸದೆ ,ಅವರಿಗೆ ಬೇಕಾದಂತಹ ನಿರ್ಣಯ ಕೈಗೊಳ್ಳುತ್ತಿದ್ದಾರೆ.ಬಿ.ಬಿ.ಎಂ.ಪಿ.ಯಲ್ಲಿ ಸಾವಿರಾರು ಕೋಟಿ ವಾರ್ಷೀಕ ಖರ್ಚು ,ವೆಚ್ಚಗಳ ನಿರ್ವಹಣಿ ಇರುತ್ತದೆ ,ಇದರ ನಿರ್ವಹಣಿಯನ್ನು ಮನೋಜ್ ರಂಜನ್ ಎಂಬ ವಿಶೇಷ ಅಯುಕ್ತರು (ಹಣಕಾಸು)ಜವಾಬ್ಬರಿ ನೀಡಲಾಗಿದೆ .ಮನೋಜ್ ರಂಜನ್ ರವರು I.F.S.ಅಧಿಕಾರಿ ಅಂದರೆ ಪರಿಸರ ,ಕಾಡು ಉಳಿಸಿ ಬೆಳಸುವ ಅರಣ್ಯ ಇಲಾಖೆ ಸಂಬಂಧಪಟ್ಟ ವರು ಅವರಿಗೆ ಹಣಕಾಸು ನಿರ್ವಹಣಿ ನೀಡಿದರೆ ನಿಭಾಯಿಸಲು ಸಾಧ್ಯವೆ.
ಬಿ.ಬಿ.ಎಂ.ಪಿ.ಯಲ್ಲಿ ಎರವಲು ಸೇವೆಗೆ ಲೆಕ್ಕ ಪತ್ರ ಇಲಾಖೆ ಹಾಗೂ ತಂತ್ರಜ್ಞರ ಅವ್ಯಕತೆ ಇದ್ದರೆ ಪಿ.ಡ್ಲು.ಡಿ.ಮತ್ತು ಬಿ.ಡಿ.ಎ.ಯಿಂದ ಎರವಲು ಸೇವೆ ನಿಯೋಜನೆ ಮಾಡಿಕೊಳ್ಳಬಹುದು ಅದರೆ ಬಿ.ಬಿ.ಎಂ.ಪಿ.ಆಡಳಿತದಲ್ಲಿ ವಿವಿಧ ಇಲಾಖೆಗಳಿಂದ ಎರವಲು ಸೇವೆಗೆ ನೇಮಕ ಮಾಡಲಾಗುತ್ತಿದೆ ,ಎರವಲು ಸೇವೆ ನಿಯುಕ್ತನಾದ ಕಾರ್ಯಪಾಲಕ ಅಭಿಯಂತರ ಬಿ.ಬಿ.ಎಂ.ಪಿ.
ಅಯ್ತುಕರಗಿಂತ  ಹೆಚ್ಚಿನ ವೇತನ ಪಡೆಯುತ್ತಾರೆ ,ಅದೆಂತಹ ಮಹಾನ್  ಇಂಜಿನಿಯರ್ ಎಂದು ಬೆಂಗಳೂರು ಜನತೆಗೆ ಗೊತ್ತಗಬೇಕು. ಎಂದು ಅರೋಪ ಮಾಡಿದರು ನಂತರ ಮಾತನಾಡಿದ ಜೋಗುಪಾಳ್ಯ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರು ,ಲೆಕ್ಕ ಪತ್ರ ಸ್ಥಾಯಿ ಸಮಿತಿ ಸದಸ್ಯರಾದ ಗೌತಮ್ ಕುಮಾರ್ ರವರು,ಲೆಕ್ಕ ಪತ್ರ ಇಲಾಖೆಯನ್ನು ಆಧುನೀಕರಣ ಗೊಳಿಸಲು ಸಮಿತಿ ಮಾಡಲಾಗುತ್ತದೆ ,ಇದರಲ್ಲಿ ಮನೋಜ್ ರಂಜನ್ i.F.S.ಅಧಿಕಾರಿ ಅಧ್ಯಕ್ಷತೆ ಹಾಗೂ ಲೆಕ್ಕ ಬಾರದ ಇಬ್ಬರು ಸೂಪರಿಡೆಂಟ್ ಗಳನ್ನು ನೇಮಿಸಿ ಸಮಿತಿ ರಚಿಸಲಾಗುತ್ತದೆ .ಮಹಾಪೌರರು ಹಾಗೂ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಸಮಿತಿಗೆ ಪರಿಗಣಿಸುವುದಿಲ್ಲ .ಹಾಗೂ ಅವರು ನೀಡುವ ವರದಿಯು ಹಳೇಯ ಪದ್ದತಿಯ ಯಥವತ್ತ ಅಗಿರುತ್ತದೆ .ಇದರಲ್ಲಿ ಬಿ.ಬಿ.ಎಂ.ಪಿ.ಲೆಕ್ಕ ಪತ್ರ ನಿರ್ವಹಣಿ ಮಾಡಲು ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡದೇ ಇರುವುದು.ಕಂಡುಬಂದಿದೆ .ಮುಂಬೈ ಮಹಾನಗರ ಪಾಲಿಕೆ ಹಣಕಾಸಿನ ನಿರ್ವಹಣಿ ಉತ್ತಮ ಗುಣಮಟ್ಟದಲ್ಲಿ ಇದೆ ಅಲ್ಲಿ ಪರಿಶೀಲನೆ ಮಾಡಿ ಅದೇ ಮಾದರಿಯಲ್ಲಿ ಬಿ.ಬಿ.ಎಂ.ಪಿ.ಆಳವಡಿಕೆ ಮಾಡಲು ಲೆಕ್ಕ ಪತ್ರ ಸ್ಥಾಯಿ ಸಮಿತಿ ಸದಸ್ಯರು ಮುಂಬೈ ತೆರಳಲು ಹೋರಟರೆ ನೀವು ಸ್ವಂತ ವೆಚ್ಚದಲ್ಲಿ ಹೋಗಬೇಡಿ ,ಬಿ.ಬಿ.ಎಂ.ಪಿ.ನಾವು ಕಳುಹಿಸುತ್ತೆವೆ ಎಂದು ಹೇಳಿ ಪ್ರಯಾಣಿಸಬೇಕಾದ್ದು ರದ್ದು ಮಾಡಿದರು ಬಿ.ಬಿ.ಎಂ.ಪಿ.ಅಧಿಕಾರಿಗಳು ಎಂದು ಹೇಳಿದರು.
ಬಿ.ಬಿ.ಎಂ.ಪಿ.ಆಡಳಿತ ವ್ಯವಸ್ತೆ ಆಧೋಗತಿಗೆ ಬರಲು ಎರವಲು ಸೇವೆ ಬಂದಂತಹ ಅಧಿಕಾರಿಗಳೆ ಕಾರಣ ,ಜನಸಾಮ್ಯಾನರ ತೆರಿಗೆ ಹಣ ಅನ್ಯವಶಕವಾಗಿ ಪೋಲುಗುತ್ತಿದೆ ಇದರ ಬಗ್ಗೆ ಮಹಾಪೌರರ ಬಳಿ ಚರ್ಚೆ ಮಾಡಲಾಗುವುದು ಎಂದು ಸಮಿತಿ ತೀರ್ಮಾನ ಮಾಡಿದರು.
            ಕೃಪೆ ✍ ನಾರಾಯಣ
       

No comments:

Post a Comment