Wednesday, 6 September 2017

Act ಮಾಡೋಕೆ ನಾನ್ ರೆಡಿ

ಸ್ಟ್ರೋಕ್‍ನಿಂದ ಹಾಸಿಗೆ ಹಿಡಿದಿದ್ದ ರಾಘವೇಂದ್ರ ರಾಜ್‌ಕುಮಾರ್, ಈಗ ಕ್ರಮೇಣ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮತ್ತೆ ನಟಿಸುವುದಕ್ಕೆ ರೆಡಿ ಎಂದು ಹೇಳಿದ್ದಾರೆ.





ಸೋಮವಾರ ತಮ್ಮ ಮಗ ವಿನಯ್ ರಾಜಕುಮಾರ್ ಅಭಿನಯದ ಮೂರನೇ ಚಿತ್ರವಾದ `ಅನಂತು ವರ್ಸಸ್ ನುಸ್ರತ್' ಚಿತ್ರದ ಮುಹೂರ್ತಕ್ಕೆ ಬಂದಿದ್ದ ರಾಘವೇಂದ್ರ ರಾಜಕುಮಾರ್, ತಾವು ನಟಿಸುವುದಕ್ಕೆ ರೆಡಿ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, `ಈಗಲೂ ಸಹ ನನಗೆ ನಟನೆ ಮಾಡುವ ಆಸೆ ಇದೆ. ನನ್ನ ಆರೋಗ್ಯ ಸಾಕಷ್ಟು ಸುಧಾರಿಸಿದೆ. ನಟಿಸಬೇಕು ಎಂದ ಮಾತ್ರಕ್ಕೆ ನಾನು ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಅಂತೇನಿಲ್ಲ. ಡೀಸೆಂಟ್ ಆಗಿರುವ ಯಾವ ಪಾತ್ರವಿದ್ದರೂ ಸರಿ, ಅದು ನನಗೆ ಸರಿಹೊಂದುವುದಾದರೆ ಖಂಡಿತ ಮಾಡುತ್ತೇನೆ. ಪೋಷಕ ಪಾತ್ರವಿದ್ದರೂ ಸರಿ, ಅದು ಚೆನ್ನಾಗಿರಬೇಕಷ್ಟೇ' ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್.

ರಾಘವೇಂದ್ರ ರಾಜಕುಮಾರ್ ಅಭಿನಯಿಸದೆ ಒಂದು ದಶಕವೇ ಆಗಿದೆ. `ಪಕ್ಕದ್ಮನೆ ಹುಡುಗಿ' ಎಂಬ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದೇ ಕೊನೆ. ಆ ನಂತರ ಅವರು ಯಾವ ಚಿತ್ರದಲ್ಲೂ ನಾಯಕನಾಗಿ ನಟಿಸಿರಲಿಲ್ಲ. ಇನ್ನು ತಮ್ಮ ಮಗನ `ಸಿದ್ಧಾರ್ಥ' ಚಿತ್ರದಲ್ಲಿ ಅವರು ಒಂದು ಶಾಟ್‍ನಲ್ಲಿ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ, ರಾಘವೇಂದ್ರ ಇದೀಗ ನಟಿಸುವುದಕ್ಕೆ ಸಿದ್ಧರಾಗಿದ್ದಾರೆ. 

No comments:

Post a Comment